ಕೋವಿಡ್ 19 ಲಾಕ್‌ಡೌನ್‌; ಕೆಎಸ್ಸಾರ್ಟಿಸಿಗೆ 182 ಕೋಟಿ ರೂ. ನಷ್ಟ !


Team Udayavani, Apr 11, 2020, 10:30 AM IST

Kಕೋವಿಡ್ 19 ಲಾಕ್‌ಡೌನ್‌; ಕೆಎಸ್ಸಾರ್ಟಿಸಿಗೆ 182 ಕೋಟಿ ರೂ. ನಷ್ಟ !

ಮಂಗಳೂರು: ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‌ಡೌನ್‌ ಆಗಿದ್ದು, ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಒಂದು ತಿಂಗಳಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸುಮಾರು 182 ಕೋಟಿ ರೂ.ಗಳಿಗೂ ಹೆಚ್ಚಿನ ಆದಾಯ ನಷ್ಟ ಉಂಟಾಗಿದೆ.

ಕೆಎಸ್ಸಾರ್ಟಿಸಿಯಿಂದ ನಿತ್ಯ ದೇಶದ ವಿವಿಧ ಭಾಗಗಳಿಗೆ 8 ಸಾವಿರಕ್ಕೂ ಮಿಕ್ಕಿ ಐಷಾರಾಮಿ ಮತ್ತು ಸಾಮಾನ್ಯ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ಕೋವಿಡ್ 19 ಆತಂಕದಿಂದ ಮಾ. 1ರಿಂದ ಎ. 7ರ ವರೆಗೆ ಕೆಎಸ್ಸಾರ್ಟಿಸಿಯ ಒಟ್ಟು 10 ವಿಭಾಗಗಳ ಕಾರ್ಯಾಚರಣೆ ಮಾಡುವ ಪ್ರೀಮಿಯಂ (ಐಷಾರಾಮಿ) ಬಸ್‌ ಸಂಚಾರ ಕಡಿತಗೊಂಡ ಕಾರಣ 37.28 ಕೋಟಿ ರೂ. ನಷ್ಟ ಉಂಟಾಗಿದೆ. ಒಟ್ಟು 16 ಡಿಪೋಗಳ ನಾನ್‌ ಪ್ರೀಮಿಯಂ (ಸಾಮಾನ್ಯ) ಸಾರಿಗೆಯಲ್ಲಿ 144 ಕೋಟಿ ರೂ.ಗೂ ಹೆಚ್ಚಿನ ನಷ್ಟ ಉಂಟಾಗಿದೆ.

ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಕರಾವಳಿ ಭಾಗದಲ್ಲೇ ಸಾರಿಗೆ ಸಂಸ್ಥೆಗೆ ಗರಿಷ್ಠ ನಷ್ಟವಾಗಿದೆ. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ (ಮಂಗಳೂರಿನಲ್ಲಿ – 3, ಕುಂದಾಪುರ, ಉಡುಪಿ) ಪ್ರತೀ ದಿನ 350ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಪುತ್ತೂರು ವಿಭಾಗದಿಂದ (ಪುತ್ತೂರು, ಬಿ.ಸಿ. ರೋಡ್‌, ಧರ್ಮಸ್ಥಳ, ಮಡಿಕೇರಿ, ಸುಳ್ಯ) ಸುಮಾರು 560 ಬಸ್‌ಗಳು ಸಂಚರಿಸುತ್ತವೆ. ಈ ಎರಡೂ ವಿಭಾಗಗಳಿಂದ ಒಂದು ತಿಂಗಳಲ್ಲಿ 25.36 ಕೋಟಿ ರೂ. ನಷ್ಟ ಉಂಟಾಗಿದೆ.

ಕೆಎಸ್ಸಾರ್ಟಿಸಿಯಿಂದ ರಾಜ್ಯದಲ್ಲಿ ಒಟ್ಟು 83 ಘಟಕಗಳಿದ್ದು, 17 ವಿಭಾಗಗಳಿವೆ. ಸಾಮಾನ್ಯ ದಿನಗಳಲ್ಲಿ ಒಟ್ಟು 166 ಬಸ್‌ ನಿಲ್ದಾಣದಿಂದ ದಿನಂಪ್ರತಿ 8,603 ಬಸ್‌ಗಳು ಸಂಚರಿಸುತ್ತದೆ. ನಿತ್ಯ 29.20 ಲಕ್ಷ ಕಿ.ಮೀ. ಓಡಾಟ ನಡೆಸಿ, 8.90 ಕೋಟಿ ರೂ. ಆದಾಯ ಬರುತ್ತದೆ.

ರಾಜ್ಯದಲ್ಲಿ 16 ಬಸ್‌ ಓಡಾಟ
ರಾಜ್ಯದಲ್ಲಿ ಸದ್ಯ ಕೇವಲ 16 ಕೆಎಸ್ಸಾರ್ಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ತುರ್ತು ಅವಶ್ಯಕ ಸೇವೆಗಳಾದ ಮೆಡಿಕಲ್‌, ಪೊಲೀಸ್‌, ಭದ್ರತಾ ಸಿಬಂದಿ, ಪ್ಯಾರಾ ಮೆಡಿಕಲ್‌ ಸಿಬಂದಿ, ಮಹಾನಗರ ಪಾಲಿಕೆ, ಸರಕಾರಿ ಸಿಬಂದಿ ಸಹಿತ ಜಿಲ್ಲಾಡಳಿತ ಸೂಚಿಸಿದ ಸೇವೆಗಳಿಗೆ ಬಸ್‌ ಕಾರ್ಯಾಚರಣೆ ಮಾಡಲಾಗುತ್ತಿದೆ. ನಿಗಮ ವ್ಯಾಪ್ತಿಯ ರಾಮನಗರ-1, ಮೈಸೂರು-4, ಮಂಗಳೂರು-4, ದಾವಣಗೆರೆ-1, ಶಿವಮೊಗ್ಗ-6 ಸಹಿತ ಒಟ್ಟು 16 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ.

ಅತಿ ದೊಡ್ಡ ನಷ್ಟ
ಕೆಎಸ್ಸಾರ್ಟಿಸಿಯಿಂದ ರಾಜ್ಯದ ವಿವಿಧ ಕಡೆಗಳಿಗೆ ಸಂಚರಿಸುವ ಬಸ್‌ಗಳು ಒಂದು ತಿಂಗಳಿನಿಂದ ಸಮರ್ಪಕವಾಗಿ ಕಾರ್ಯಾಚರಣೆ ನಡೆಸಲಿಲ್ಲ. ಇದೇ ಕಾರಣಕ್ಕೆ ಸದ್ಯ 182 ಕೋಟಿ ರೂ.ಗೂ ಹೆಚ್ಚಿನ ನಷ್ಟ ಉಂಟಾಗಿದೆ. ಇತ್ತೀಚಿನ ದಿನಗಳಲ್ಲಿ ಬಸ್‌ ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ ಆದ ಅತೀ ದೊಡ್ಡ ಮೊತ್ತದ ನಷ್ಟ ಇದಾಗಿದೆ.
ಶಿವಯೋಗಿ ಕಳಸದ,
ಕೆಎಸ್ಸಾರ್ಟಿಸಿ ಎಂಡಿ

ಟಾಪ್ ನ್ಯೂಸ್

1-f-fsdfsf

ಪಠ್ಯಪುಸ್ತಕ ಪರಿಷ್ಕರಣೆ; ಗೊಂದಲಗಳಿಗೆ ಸಿಎಂ ತೆರೆ ಎಳೆಯಬೇಕು: ಬರಗೂರು ರಾಮಚಂದ್ರಪ್ಪ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಗುಡಿಬಂಡೆ: ಪಟ್ಟಣ ಪಂಚಾಯಿತಿ ಸದಸ್ಯನಿಂದ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ

ಗುಡಿಬಂಡೆ: ಪಟ್ಟಣ ಪಂಚಾಯಿತಿ ಸದಸ್ಯನಿಂದ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ

1-ffsdfsdf

ಕೆಪಿಎಸ್ ಸಿ ಬಾಗಿಲು ತಟ್ಟಿ ಪ್ರತಿಭಟನೆಗೆ ಮಾಜಿ ಸಚಿವ ಸುರೇಶ್ ಕುಮಾರ್ ನಿರ್ಧಾರ

ಕೊರಟಗೆರೆ : ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ : ನಾಲ್ವರ ಬಂಧನ, ಗೋವುಗಳ ರಕ್ಷಣೆ

ಕೊರಟಗೆರೆ : ಅಕ್ರಮ ಕಸಾಯಿ ಖಾನೆ ಮೇಲೆ ಪೊಲೀಸರ ದಾಳಿ : ನಾಲ್ವರ ಬಂಧನ, ಗೋವುಗಳ ರಕ್ಷಣೆ

Missing tara airline flight found in Nepal’s Mustang district

ಪತ್ತೆಯಾದ ನೇಪಾಳ ವಿಮಾನ: ಲಾಮ್ಚೆ ನದಿಯಲ್ಲಿ ಪತನಗೊಂಡ 22 ಜನರಿದ್ದ ತಾರಾ ಏರ್ ಕ್ರಾಫ್ಟ್

ಗುಂಡ್ಲುಪೇಟೆ : ಬೈಕ್‍ಗಳ ನಡುವೆ ಮುಖಾಮುಖಿ ಢಿಕ್ಕಿ : ಓರ್ವ ಸ್ಥಳದಲ್ಲೇ ಸಾವು

ಗುಂಡ್ಲುಪೇಟೆ: ಬೈಕ್‍ಗಳ ನಡುವೆ ಮುಖಾಮುಖಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು, ಇನ್ನೋರ್ವ ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dfdfdsf

ಎಸ್ ಡಿಪಿಐ ಸಮಾವೇಶದ ವೇಳೆ ಪೊಲೀಸರಿಗೆ ಅವಾಚ್ಯ ನಿಂದನೆ : ಪ್ರಕರಣ ದಾಖಲು

blind

‘ಅಂಧರು ಎಲ್ಲರಂತೆ ಬದುಕಬೇಕು’

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ

project

ಬಸ್‌ ತಂಗುದಾಣದಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ

ಗಳಿಕೆಯ ಪಾಲಿನಲ್ಲಿ ತುಳು ಸಿನೆಮಾಕ್ಕೆ ಗೋತಾ!

ಗಳಿಕೆಯ ಪಾಲಿನಲ್ಲಿ ತುಳು ಸಿನೆಮಾಕ್ಕೆ ಗೋತಾ!

MUST WATCH

udayavani youtube

ಭವಿಷ್ಯದ ಸಂಗೀತ ಕ್ಷೇತ್ರಕ್ಕೆ ಕರಾವಳಿ ಕೊಡುಗೆ

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

ಹೊಸ ಸೇರ್ಪಡೆ

1-f-fsdfsf

ಪಠ್ಯಪುಸ್ತಕ ಪರಿಷ್ಕರಣೆ; ಗೊಂದಲಗಳಿಗೆ ಸಿಎಂ ತೆರೆ ಎಳೆಯಬೇಕು: ಬರಗೂರು ರಾಮಚಂದ್ರಪ್ಪ

27

ಮುಂಗಾರು ಹಂಗಾಮಿಗೆ ರೈತರ ತಯಾರಿ

ಬಾಲಚಂದ್ರ ಸಾಯಿಮನೆಗೆ ಪಾವನಾ ಪರಿಸರ ಪ್ರಶಸ್ತಿ

ಬಾಲಚಂದ್ರ ಸಾಯಿಮನೆಗೆ ಪಾವನಾ ಪರಿಸರ ಪ್ರಶಸ್ತಿ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

26

ನದಿ ಪ್ರವಾಹ ಹಾನಿಯೇ ಹೆಚ್ಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.