ಕೋವಿಡ್-19 ನಿಧಿ ಸಂಗ್ರಹಕ್ಕೆ ಬ್ಯಾಟ್ ಹರಾಜು
Team Udayavani, Apr 21, 2020, 6:31 AM IST
ಢಾಕಾ: ಬಾಂಗ್ಲಾದೇಶದ ಆಟಗಾರ ಮುಷ್ಫಿಕರ್ ರಹೀಂ ಕೋವಿಡ್-19 ಪರಿಹಾರ ಕಾರ್ಯಾಚರಣೆಗಾಗಿ ತಮ್ಮ ಬ್ಯಾಟ್ ಅನ್ನು ಹರಾಜಿಗೆ ಹಾಕಲಿದ್ದಾರೆ.
ಮುಷಿ#ಕರ್ 2013ರಲ್ಲಿ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ಬ್ಯಾಟನ್ನು ಹರಾಜಿಗಿಟ್ಟಿದ್ದಾರೆ. “ನಾನು ಮೊದಲ ದ್ವಿಶತಕ ಗಳಿಸಿದ ಬ್ಯಾಟ್ ಅನ್ನು ಹರಾಜಿಗೆ ಇಡುತ್ತಿದ್ದೇನೆ. ಈ ಹರಾಜು ಆನ್‌ಲೈನ್ ಮೂಲಕ ನಡೆಯಲಿದೆ ಇದರಿಂದ ಬರುವ ಆದಾಯ ವನ್ನು ಬಡ ಜನರಿಗೆ ಖರ್ಚು ಮಾಡಲಾಗುವುದು ಎಂದಿದ್ದಾರೆ.