ಕೋವಿಡ್ ಪ್ರಕರಣ: ಇಟಲಿಯನ್ನು ಓವರ್ ಟೇಕ್ ಮಾಡಿದ ಪಾಕಿಸ್ಥಾನ
Team Udayavani, Jul 12, 2020, 3:36 PM IST
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲೂ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದು ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಅದು ಇಟಲಿಯನ್ನು ಓವರ್ಟೇಕ್ ಮಾಡಿದೆ.
ಶನಿವಾರದ ವೇಳೆಗೆ ಪಾಕ್ನಲ್ಲಿ 2.46 ಪ್ರಕರಣಗಳು ಕಂಡು ಬಂದಿದ್ದು ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕು ಬಾಧಿತ ರಾಷ್ಟ್ರಗಳ ಪೈಕಿ 11ನೇ ಸ್ಥಾನ ಪಡೆದಿದೆ ಎಂದು ಕೋವಿಡ್ ದತ್ತಾಂಶಗಳನ್ನು ಸಂಗ್ರಹಿಸುತ್ತಿರುವ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹೇಳಿದೆ.
ಶನಿವಾರಕ್ಕೆ ಬೆಳಗ್ಗೆ ಮುಕ್ತಾಯಗೊಂಡ 24 ಗಂಟೆಗಳ ಲೆಕ್ಕಾಚರದ ಪ್ರಕಾರ 2751 ಮಂದಿ ಹೊಸತಾಗಿ ಸೋಂಕು ತಗುಲಿಸಿಕೊಂಡಿದ್ದಾರೆ. ಒಟ್ಟು 1.53 ಲಕ್ಷ ಮಂದಿ ಗುಣಮುಖರಾಗಿದ್ದು, 5123 ಮಂದಿ ಸಾವಿಗೀಡಾಗಿದ್ದಾರೆ. ಪಾಕಿಸ್ಥಾನದ ಡಾನ್ ವರದಿ ಪ್ರಕಾರ ಪಂಜಾಬ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದು 1 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದಾರೆ. ಸಿಂಧ್ ಪ್ರಾಂತ್ಯ ಎರಡನೇ ಅತಿ ಹೆಚ್ಚು ಸೋಂಕಿತರಿರುವ ಪ್ರದೇಶವಾಗಿದ್ದು ಇಲ್ಲಿ 85261 ಪ್ರಕರಣಗಳಿವೆ. ಇದರೊಂದಿಗೆ ಸಾವಿನ ಪ್ರಮಾಣದಲ್ಲಿ ಪಾಕಿಸ್ಥಾನದ ವಿಶ್ವದಲ್ಲೇ 18ನೇ ಸ್ಥಾನದಲ್ಲಿದೆ. ಇದೇ ವೇಳೆ ಇಸ್ಲಾಮಾಬಾದ್ನಲ್ಲಿ ಸಾಂಕ್ರಾಮಿಕ ಕಾಯಿಲೆಗೆಂದೇ ಪ್ರತ್ಯೇಕವಾದ 250 ಹಾಸಿಗೆಯ ಆಸ್ಪತ್ರೆಯೊಂದನ್ನು ತೆರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು