ಮುದ್ದಿನ ಮಗನ ನಳಪಾಕ ಪ್ರಸಂಗ

Team Udayavani, May 27, 2020, 5:00 AM IST

muddina-maga

ಮಗನಿಗೆ ಬಿಸಿಬೇಳೆ ಬಾತ್‌ ಎಂದರೆ ಪ್ರಾಣ. ಮೊನ್ನೆ ಇದ್ದಕ್ಕಿದ್ದಂತೆ- “ನಾಳೆ ಬಿಸಿಬೇಳೆ ಬಾತ್‌ ಮಾಡೋದನ್ನ ಹೇಳಿಕೊಡು. ಅದರ ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆ. ಮುಂದೆ ಏನಾದರೂ, ದೂರದ ಊರಿನಲ್ಲಿ ರೂಂ  ಮಾಡಿಕೊಂಡಿರುವ ಸಂದರ್ಭ ಬಂದರೆ ಸುಲಭ ಆಗತ್ತೆ. ಬಿಸಿಬೇಳೆ ಬಾತ್‌ ಮಾಡಲು ಬಂದರೆ,  ವಾರಪೂರ್ತಿ ಅದನ್ನು ತಿಂದೇ ಕಳೆದೇನು’ ಎಂದ! ಸರಿ. ಅವನಾಗಿಯೇ ಕಲಿಯುತ್ತೇನೆಂದಾಗ, ಕಲಿಸುವುದಕ್ಕೆ ನನಗೇನು?

ಹಿಂದಿನ  ದಿನದಿಂದಲೇ ಶುರುಮಾಡಿದೆ. “ಮೂರು ಮುಷ್ಟಿ ಬಟಾಣಿ ನೆನೆಸಿಡು’ ಎಂದೆ. ಅವನು ಮೂರು ಮುಷ್ಟಿ ಅಳೆದು, ಪಾತ್ರೆಗೆ ಹಾಕಿ, ತಂದು ತೋರಿಸಿದ. ಅದು ಸರಾಸರಿ ಅರ್ಧ ಕೆ.ಜಿ. ಇತ್ತು. “ಅಯ್ಯೋ ಅಷ್ಟೆಲ್ಲ ಬೇಡ. ಅದರ ಅರ್ಧದಷ್ಟು  ಸಾಕು’ ಎಂದೆ. ಅರ್ಧದಷ್ಟು ಬಟಾಣಿ ಎತ್ತಿಟ್ಟು, ಉಳಿದದ್ದನ್ನು ನೆನಸಿಟ್ಟ. ಬೆಳಗ್ಗೆ ಎದ್ದು ನನ್ನಷ್ಟಕ್ಕೆ ನಾನು ನನ್ನ ಕೆಲಸ ಮಾಡುವಂತಿರಲಿಲ್ಲ. “ಏಳು ಮಗನೇ’ ಎಂದೆ. ಅವನು ನಿತ್ಯಕರ್ಮ ಮುಗಿಸಿ ಬರುವವರೆಗೆ, ಕಾದು ಕುಳಿತಿದ್ದೆ.

ಬಂದ  ನಂತರ ಅವನ ಕೈಯಿಂದಲೇ ದಪ್ಪ ಅವಲಕ್ಕಿ, ಹುಣಸೆಹಣ್ಣು ನೆನೆಸಿಡಲು ಹೇಳಿದೆ. ತೊಗರಿ ಬೇಳೆ ಅಳೆದು ಆರಿಸಿ, ಕುಕ್ಕರ್‌ಗೆ ಹಾಕಿ, ತೊಳೆಯಲು ಹೇಳಿದೆ. ನೀರು ಹಾಕಿ, ಎಣ್ಣೆ- ಅರಿಶಿನ, ಶೇಂಗಾಬೀಜ, ನೆನೆಸಿಟ್ಟ ಬಟಾಣಿ  ಹಾಕಿಸಿದೆ. ಗ್ಯಾಸ್‌ ಸ್ಟೌ ಉರಿಯಲಾರಂಭಿಸಿತು. ಇತ್ತ ಬೀನ್ಸ್- ಕ್ಯಾರೆಟ್‌ ತೊಳೆದು ಹೆಚ್ಚಿ  ಕೊಳ್ಳಲು ಹೇಳಿದೆ. ಇತ್ತ ಕುಕ್ಕರ್‌ ಒಳಗಿದ್ದ ಬೇಳೆ ಕುದಿಯಲಾರಂ ಭಿಸಿತು. ತರಕಾರಿ ಹೆಚ್ಚಿ ಕುಕ್ಕರ್‌ಗೆ ಹಾಕಿ, ಮತ್ತೆ ಉರಿ ಹೆಚ್ಚಿಸಿ, ಕುಕ್ಕರ್‌ ಎರಡು  ವಿಷಲ್‌ ಹೊಡೆಯುವ ಹೊತ್ತಿಗೆ, ನನ್ನ ತಾಳ್ಮೆಯೂ ಸ್ವಲ್ಪ ಕೆಟ್ಟಿತ್ತು.

ಹೇಳಿಕೊಡುವುದಕ್ಕಿಂತ ಮಾಡುವುದೇ ಸುಲಭ  ಎನಿಸತೊಡಗಿತು. ಇತ್ತ ಇಂಗಿನ ಒಗ್ಗರಣೆ ಹಾಕಿಕೊಂಡು, ಕ್ಯಾಪ್ಸಿಕಂ ಹೆಚ್ಚಿ-ಹುರಿದು, ಅದನ್ನು ಬೆಂದ ತರಕಾರಿ- ಬೇಳೆ ಯೊಂದಿಗೆ ಸೇರಿಸಿ, ಉಪ್ಪು, ಬೆಲ್ಲ ಹಾಕಿಸಿ, ಹುಣಸೆಹಣ್ಣಿ  ನ ರಸ ಹಿಂಡಿಕೊಂಡು, ಅದಕ್ಕೆ ಬಿಸಿಬೇಳೆ ಬಾತ್‌ ಪುಡಿ ಸೇರಿಸಿ, ಕಲಸಿ ಕುಕ್ಕರಿಗೆ ಹಾಕಿಸಿದೆ. ಬಿಸಿಬೇಳೆಬಾತಿನ ಸಾಂಬಾರು ಕುದಿಯಲಾರಂ ಭಿಸಿತು. ಅದಕ್ಕೆ ನೆನೆದಿದ್ದ ಅವಲಕ್ಕಿ ಹಾಕಿ ಕೈಯಾಡಿಸಿದ ಮಗ. ನಂತರ ಎರಡು ಚಮಚ ತುಪ್ಪ ಹಾಕಿದಲ್ಲಿಗೆ, ಬಿಸಿಬೇಳೆ ಭಾತ್‌ ಸಿದಟಛಿವಾಯ್ತು.

“ಅಮ್ಮಾ ಬಿಸಿಬೇಳೆ ಬಾತ್‌ ಮಾಡಲು ಇಷ್ಟೆಲ್ಲಾ ಕೆಲಸ ಇದೆಯಾ? ತಿನ್ನಲು ಎಷ್ಟು ಸುಲಭ!’ ಅಂದ. “ಇನ್ನೊಂದು ಸರ್ತಿ  ಬಿಸಿಬೇಳೆ ಭಾತ್‌ ಮಾಡುವಷ್ಟು ತರಕಾರಿ ತಂದಾಗಿದೆ! ಎರಡು ದಿನ ಬಿಟ್ಟು ಒಮ್ಮೆ ನೀನೇ ಮಾಡಿಬಿಡು. ಅಭ್ಯಾಸ ಆದ ಹಾಗೆ ಆಗ್ತದೆ’ ಅಂದೆ. “ಬೇಕಿಲ್ಲಮ್ಮ. ಬರತ್ತೆ’ ಅಂತ ಮಗ ಓಡಿ ಹೋದ. ಕೆಲವು ದಿನಗಳ ನಂತರ, ಇಂದಿನ ಕಥೆಯೇ ಮರು ಕಳಿಸಲಿದೆ ಎಂಬ ಸೂಚನೆ ನನಗೆ ಸಿಕ್ಕಿ  ಹೋಯಿತು. ಮತ್ತೆ ಹೇಳಿ ಕೊಡಲು ನಾನು ಸಿದ್ಧಳಾಗಬೇಕು…

 * ಸುರೇಖಾ ಭೀಮಗುಳಿ

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.