ಪ್ರಯಾಣಿಕರಿಗೆ ಡಕೋಟಾ ಬಸ್‌ ಭಾಗ್ಯ!


Team Udayavani, Feb 8, 2022, 12:40 PM IST

11bus

ವಾಡಿ: ಗ್ರಾಮೀಣ ಭಾಗದ ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆ ಬಸ್‌ ಗಳು ಸಾಮಾನ್ಯವಾಗಿ ಗುಜರಿಗೆ ಸೇರುವಂತೆ ಕಾಣುತ್ತಿರುತ್ತಿವೆ. ಆದರೆ ಹೆದ್ದಾರಿಯಲ್ಲಿ ಓಡುವ ಬಸ್‌ಗಳು ಕೂಡ ದಟ್ಟವಾದ ಕಪ್ಪು ಹೊಗೆಯನ್ನು ಹೊರಸೂಸುತ್ತ ಪರಿಸರ ಮಾಲಿನ್ಯ ಹೆಚ್ಚಿಸುತ್ತಿವೆ. ದುರಸ್ತಿ ಕಾಣದ ಬಸ್‌ ಗಳು, ನಿಯಮ ಬಾಹಿರವಾಗಿ ರಸ್ತೆಗಿಳಿದು ಪ್ರಯಾಣಿಕರ ಜೀವ ತಿನ್ನುತ್ತಿವೆ. ಕರ್ಕಶವಾದ ಸಂಗೀತ ಹೊರಡಿಸುವ ಮೂಲಕ ಚಾಲಕರ ನೆಮ್ಮದಿಯೂ ಕದಡುತ್ತಿವೆ. ಮೂಲೆ ಸೇರಬೇಕಾದ ಡಕೋಟಾ ಬಸ್‌ ಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಿಸುವ ಮೂಲಕ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿದೆ.

ಕಲಬುರಗಿ-ಯಾದಗಿರಿ -ವಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ-150ರಲ್ಲಿ ಸಂಚರಿಸುತ್ತಿರುವ 40ಕ್ಕೂ ಹೆಚ್ಚು ಬಸ್‌ಗಳ ಪೈಕಿ ಸುಮಾರು 20 ಬಸ್‌ಗಳು ಗುಜರಿಗೆ ಸೇರುವಷ್ಟು ಹಳೆಯದಾಗಿವೆ. ಕೆಲವು ಹೊಸ ಬಸ್‌ಗಳು ಪ್ರಯಾಣಿಕರನ್ನು ಸುರಕ್ಷಿತವಾಗಿ ಊರು ಸೇರಿಸುತ್ತಿದ್ದರೆ, ಇನ್ನು ಕೆಲವು ಬಸ್‌ ಗಳಲ್ಲಿ ಪ್ರಯಾಣಿಸುವರು ಸಾರಿಗೆ ಸಂಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಉತ್ತಮ ರಸ್ತೆಯಿದ್ದರೂ ಬಸ್ಸಿನ ಕಿಟಕಿ ಗಾಜುಗಳು ಕಟಕಟ ಸದ್ದು ಮಾಡುತ್ತಿರುತ್ತವೆ. ಸೀಟುಗಳು ಅಲುಗಾಡುತ್ತಿರುತ್ತವೆ. ಉದಾಹರಣೆಗೆ ಕಲಬುರಗಿ ಘಟಕಕ್ಕೆ ಸೇರಿದ (ಕೆಎ-32-ಎಫ್‌1945) ಬಸ್ಸೊಂದು ಸಂಪೂರ್ಣ ದುರಸ್ತಿಗೆ ಬಂದಿದ್ದರೂ ನಿತ್ಯವೂ ಸಂಚರಿಸುತ್ತಿದೆ. ಬಸ್ಸಿನ ಸೀಟುಗಳು ಧೂಳಿನಿಂದ ಆವರಿಸಿರುತ್ತವೆ. ನಿಲ್ದಾಣ ಸೇರುವ ವರೆಗೂ ನಿರಂತರವಾಗಿ ತಗಡಿನ ಸದ್ದು ಕೇಳಿ ಬರುತ್ತದೆ. ಸೀಟಿನಲ್ಲಿ ಕುಳಿತ ಪ್ರಯಾಣಿಕರು ಜೋಲಿ ಹೊಡೆಯುವಷ್ಟರ ಮಟ್ಟಿಗೆ ಬಸ್‌ ಹಾಳಾಗಿದೆ. ಕಿಟಕಿ, ಬಾಗಿಲು, ಕನ್ನಡಿ, ಸೈರನ್‌, ಬ್ರೇಕ್‌, ಯಂತ್ರಗಳು ದಾರಿಯುದ್ದಕ್ಕೂ ತನ್ನದೇ ಆದ ನಾದ ಹೊರಡಿಸುತ್ತವೆ. ಇಂತಹ ಬಸ್‌ಗಳು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗುತ್ತಿವೆ.

ಬೆಂಗಳೂರು, ಹೈದ್ರಾಬಾದ, ಮುಂಬೈ, ಬೀದರ್‌, ಬಳ್ಳಾರಿ, ಹುಬ್ಬಳಿ, ರಾಯಚೂರು ನಗರಗಳಿಗೆ ಸಂಪರ್ಕ ಕಲ್ಪಿಸುವ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಉತ್ತಮವಾಗಿದೆ. ಹಲವಾರು ಎಕ್ಸ್‌ಪ್ರೆಸ್‌ ಬಸ್‌ಗಳು ಇದೇ ಹೆದ್ದಾರಿಯಲ್ಲಿ ಸಂಚರಿಸಿ ಸಾರ್ವಜನಿಕ ಸೇವೆಯಲ್ಲಿ ತೊಡಗಿವೆ. ಆದರೆ ಯಾದಗಿರಿ ಮತ್ತು ಕಲಬುರಗಿ ಘಟಕಗಳಿಂದ ಹೊರಡುವ ಕೆಲವು ಡಕೋಟಾ ಬಸ್‌ಗಳು ಹೆದ್ದಾರಿಯ ಉದ್ದೇಶವನ್ನೇ ಹಾಳು ಮಾಡಿವೆ.

ನಿಗದಿಪಡಿಸಲಾದ ದರ ನೀಡಿ ಪ್ರಯಾಣಿಸುವ ಜನರಿಗೆ ಗುಣಮಟ್ಟದ ಬಸ್‌ ಸೌಲಭ್ಯ ಒದಗಿಸುವಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕಲಬುರಗಿ ಮತ್ತು ಯಾದಗಿರಿ ಘಟಕಗಳು ಸಂಪೂರ್ಣ ವಿಫಲವಾಗಿವೆ. ಹಳೆಯದಾದ ಬಸ್‌ ಗಳನ್ನು ಗುಜರಿಗೆ ಹಾಕದೇ ರಸ್ತೆಗೆ ಬಿಟ್ಟಿರುವುದು ಸರಿಯಲ್ಲ. ಈ ಎರಡೂ ಘಟಕದ ಅಧಿ ಕಾರಿಗಳು ಡಕೋಟಾ ಬಸ್‌ ಗಳನ್ನು ಹಿಂದಕ್ಕೆ ಪಡೆದು ಹೊಸ ಬಸ್‌ಗಳ ಸೌಕರ್ಯ ಒದಗಿಸಬೇಕು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ದುರಸ್ತಿಗೆ ಬಂದಿರುವ ಯಾವ ಬಸ್‌ಗಳನ್ನು ಓಡಿಸುತ್ತಿಲ್ಲ. ಎಲ್ಲ ಉತ್ತಮ ಸ್ಥಿತಿಯ ಬಸ್‌ ಗಳು ಕಲಬುರಗಿ- ಯಾದಗಿರಿ ನಡುವೆ ಸಂಚರಿಸುತ್ತಿವೆ. ಹೆಚ್ಚು ಅಲುಗಾಡುತ್ತಿರುವ ಬಸ್‌ ಕುರಿತು ಪ್ರಯಾಣಿಕರ ಆರೋಪ ಎದೆ ಮೊದಲ ಸಲ ಕೇಳುತ್ತಿದ್ದೇವೆ. ಅಂತಹ ಯಾವ ಬಸ್ಸುಗಳಿವೆ ಎನ್ನುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. -ಮಂಜುನಾಥ ಮಾಯನ್ನವರ್‌, ಡಿಎಂ, ಈಶಾನ್ಯ ಸಾರಿಗೆ ಸಂಸ್ಥೆ, ಕಲಬುರಗಿ ಘಟಕ-1

ಗುಣಮಟ್ಟದ ಡಾಂಬರೀಕರಣದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಾಗಿದ್ದರೂ ವಾಡಿ-ಕಲಬುರಗಿ ಹಾಗೂ ವಾಡಿ-ಯಾದಗಿರಿ ನಡುವೆ ಕೆಲವು ಹಳೆಯ ಬಸ್‌ಗಳನ್ನು ಓಡಿಸಲಾಗುತ್ತಿದೆ. ಇವುಗಳಲ್ಲಿ ಪ್ರಯಾಣಿಸುವವರು ಹಿಂಸೆ ಅನುಭವಿಸುವಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿಗೆ ಬಂದ ಮತ್ತು ಅವಧಿ ಮುಗಿದ ಬಸ್‌ಗಳನ್ನು ಹಿಂದಕ್ಕೆ ಪಡೆದು ಸುಸ್ಥಿತಿಯ ಬಸ್‌ಗಳನ್ನು ಒದಗಿಸಬೇಕು. -ಯಶ್ವಂತ ಧನ್ನೇಕರ, ಪ್ರಯಾಣಿಕ

-ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.