ಯಾವುದೇ ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶ ಮಾಡುವುದು ಎಷ್ಟು ಸರಿ?

Team Udayavani, Sep 5, 2019, 4:46 PM IST

ಮಣಿಪಾಲ: ಪ್ರತಿಭಟನೆಯ ಹೆಸರಿನಲ್ಲಿ ಬಸ್‌ ಕಾರು ಸೇರಿದಂತೆ ವಾಹನಗಳ ಮೇಲೆ ಕಲ್ಲು ತೂರಾಟ ಮಾಡುವುದು, ಬೆಂಕಿ ಹಚ್ಚುವುದು ಮುಂತಾದ ವಿಧ್ವಂಸಕ ಕೃತ್ಯಗಳಿಂದ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವುದು ನಡೆಯುತ್ಎತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ʼಉದಯವಾಣಿʼ ತನ್ನ ಓದುಗರಿಗೆ ಕೇಳಿದ್ದು, ಅತ್ಯುತ್ತಮ ಪ್ರತಿಕ್ರಿಯೆಗಳನ್ನು ಇಲ್ಲಿ ಬಳಸಲಾಗಿದೆ.

ವಿನಂತಿ ಸುಭಾಷ್:‌ ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಅದನ್ನು ಹಾಳು ಮಾಡುವ ಅಧಿಕಾರ ಯಾರಿಗೂ ಇಲ್ಲ. ಯಾರೋ ಒಬ್ಬರು ಮಾಡುವ ತಪ್ಪಿನಿಂದ ಎಲ್ಲರಿಗೂ ಹೊರೆ ಎಂಬ ಕನಿಷ್ಟ ಜ್ನಾನ ಕೂಡ ತಪ್ಪು ಮಾಡಿದವನಿಗೆ ಇರೋದಿಲ್ಲ. ಹಾಗೆ ಮಾಡಲೇ ಬೇಕು ಅನ್ನುವವರು ಅವರವರ ಮನೆಯ ಆಸ್ತಿಯನ್ನೇ ಹಾಳುಮಾಡಿಕೊಳ್ಳಲಿ, ಯಾರು ಕೇಳುತ್ತಾರೆ.

ಹಿಮಕರ ಕಜೆ: ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಬೇಡಿ ಎಂದು ಡಿಕೆಶಿಯಾಗಲಿ ಕಾಂಗ್ರೆಸ್ ಮುಖಂಡರಾಗಲಿ ತಮ್ಮ ಅಭಿಮಾನಿಗಳಿಗೆ ಮತ್ತು ಕಾರ್ಯಕರ್ತರಿಗೆ ಮನವಿ ಮಾಡದಿರುವುದುನ್ನು ನೋಡಿದರೆ ಗಲಾಟೆಗೆ ಅವರ ಬೆಂಬಲ ಇರುವುದು ಗೊತ್ತಾಗುವುದು.

ಸುಜಿತ್‌ ಕುಮಾರ್‌ ದೇವಾಡಿಗ: ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ರಕ್ಷಿಸುವುದು ಮತ್ತು ಹಿಂಸೆ ತ್ಯಜಿಸುವುದು ನಮ್ಮ ಮೂಲಭೂತ ಕರ್ತವ್ಯಗಳು. ಕನಿಷ್ಠ ಹತ್ತನೇ ತರಗತಿ  ಓದಿದವರು ಇದನ್ನ ತಿಳಿದುಕೊಂಡಿರ್ತಾರೆ. ಈಗ ಪ್ರತಿಭಟನೆ ನಡೆಸುವವರು ಮೂರ್ಖರು. ನಾಗರಿಕರಾಗಲು ಅನರ್ಹರು. ಇವರಿಗೂ ಕಾನೂನಿನ ಮೂಲಕ ಶಿಕ್ಷೆ ನೀಡಬೇಕು.

ಸಂತೋಷ್‌ ನಾಯಕ್; ಇದು ತಪ್ಪು ಇದು ಸಾರ್ವಜನಿಕರ ತೆರಿಗೆ ಹಣ ಹಾಗಾಗಿ ಸಾರ್ವಜನಿಕ ಆಸ್ತಿ ನಾಶವಾದಲ್ಲಿ ಕಾರಣಕರ್ತರಿಂದ ಆದ ನಷ್ಟ ಭರಿಸಬೇಕು. ಅಸಾಧ್ಯವಾದಲ್ಲಿ ಕಠಿಣ ಕ್ರಮ ಕೈಗೊಂಡು ಕಂಬಿ ಎಣಿಸುವಂತೆ ಮಾಡಿದರೆ ಒಳ್ಳೆಯದು.

ಶೇಖರ್ ಸುಳಿಬಾವಿ: ನಮ್ಮ ನಡೆ ನೋಡಿ ಜಗತ್ತು ನಗುತ್ತಿದೆ, ಒಬ್ಬ ಅಪರಾಧಿ ವಿಚಾರಣೆ ಮಾಡಿದರೆ ನಾವು ಏಕೆ ಸರ್ಕಾರದ ಆಸ್ತಿ ಹಾಳು ಮಾಡಬೇಕು, ಹಾಗಾದರೆ ವಿಚಾರಣೆ, ಶಿಕ್ಷೆ ಸಾರ್ವಜನಿಕರಿಗೆ ಮಾತ್ರವೇ, ರಾಜಕಾರಣಿಗಳು ಏನು ಮಾಡಿದರು ಮನ್ನಾ ಮಾಡಬೇಕೇ?

ಯಶೋಧರ ಬಿರ್ವ ಕಾಪಿನಡ್ಕ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೆ ಇದೆ ಆದರೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಉಂಟು ಮಾಡುವುದು ಸರಿಯಲ್ಲ

ಶ್ರೀಪಾದ ಭಟ್:‌ ಇಲ್ಲಾ ನಿಜಕ್ಕೂ ಇದು ತಪ್ಪು. ಯಾಕೆಂದರೆ ನಾವು ಸರಕಾರದ ಆಸ್ತಿ ಪಾಸ್ತಿಗಳನ್ನು ಹಾನಿಗೊಳಿಸಿದರೆ ಆನಂತರ ಅದನ್ನು ಸರಿಪಡಿಸಲು ಅವರು ನಮ್ಮ ಮೇಲೆಯೇ ತೆರಿಗೆಗಳನ್ನು ವೀಧಿಸುತ್ತಾರೆ. ನಮ್ಮ ದೇಶದಲ್ಲಿ ಮಾತ್ರ ಜನರು ಹೀಗೆ ಮಾಡುತ್ತಾರೆ.ಇತರ ದೇಶಗಳಲ್ಲಿ ಜನರು ತಮ್ಮ ಕಛೇರಿಗಳಲ್ಲಿ ದೈನಂದಿನ ಕೆಲಸಗಳಿಗಿಂತ, ಕೆಲಸಗಳನ್ನು ಸ್ವಲ್ಪ ಹೆಚ್ಚುವರಿಯಾಗಿ ಮಾಡುವುದರ ಮೂಲಕ ಅವರು ತಮ್ಮ ಪ್ರತಿಭಟನೆಯನ್ನು ತೋರಿಸುತ್ತಾರೆ.

ಜೀವಂದರ್‌ ಪೂಜಾರಿ: ನಾವು ರಾಜಕಾರಣಿಗಳಿಗೆ ಪಟ್ಟ ಕಟ್ಟುವ ಮೂಲಕ ದೊಡ್ಡದು ಮಾಡುತ್ತೇವೆ. ಅವರು ಮಾಡುವ ಅನೈತಿಕ ಚಟುವಟಿಕೆಗಳಿಗೆ ನಾವು ಸಹಾಯ ಮಾಡಬಾರದು ತಪ್ಪು ಮಾಡಿದ್ದಾರೆ ಶಿಕ್ಷೆ ಆಗಲೇ ಬೇಕು.

ರೋಹಿಂದ್ರನಾಥ್‌ ಕೋಡಿಕಲ್:‌ ಸಾರ್ವಜನಿಕ ಆಸ್ತಿ ನಮ್ಮದೇ ಎಂಬ ತಿಳುವಳಿಕೆ ನಮಗೆ ಮೊದಲು ಬರಬೇಕು. ಆದರೆ ಲೂಟಿಯಲ್ಲಿ ತೊಡಗುವ ಮಂದಿಗೆ ಇದು ತಿಳಿಸಿ ಹೇಳುವುದು ಸಾಧ್ಯವಾಗದ ಮಾತು. ಅವರ ಮುಖಂಡರಿಗೆ ನಾಶ ಮಾಡುವುದೇ ಮುಖ್ಯವಾಗಿರುತ್ತದೆ.
ಪ್ರಜಾಪ್ರಭುತ್ವದ ವಿಡಂಬನೆ.

ವರ್ತೂರ್‌ ನಾಗರಾಜ್:‌ ಪ್ರತಿಭಟನೆಯ ಉಸ್ತುವಾರಿ ಮುಖಂಡತ್ವ ಯಾರು ವಹಿಸಿಕೊಳ್ಳುತ್ತಾರೆ ಆಸ್ತಿ ಪಾಸ್ತಿ ಹಿಂಸೆ ಗಲಭೆ ಎಲ್ಲಾ ನಷ್ಟಕ್ಕೆ, ಅವರೇ ಜವಾಬ್ದಾರರು ಅವರೇ ನೇರ ಹೊಣೆ ಅವರಿಂದಲೇ ವಸೂಲಿ ಮಾಡಬೇಕು

ಬಸವರಾಜ್‌ ಕೆ ಪಿ: ಪರವಾಗಿಲ್ಲ ಇದುಕ್ಕೆಲ್ಲ ಎಷ್ಟು ಖರ್ಚು ಹಾನಿ ಆಗಿದಿಯೋ ಅದುನ್ನೆಲ್ಲ ಬಡ್ಡಿ ಸಮೇತ ಡಿ ಕೆ ಶಿ ಅಕೌಂಟ್ ಇಂದ ವಸೂಲಿ ಮಾಡ್ಲಿ

ಹರೀಶ್‌ ಡಿ ಸಾಲ್ಯಾನ್:‌ ನಮ್ಮ ದೇಶದಲ್ಲಿ ನಿಜವಾಗಿಯೂ ಜನಹಿತಕ್ಕಾಗಿ ಜನರಿಂದ ನಡೆದ ಪ್ರತಿಭಟನೆ ಕೇವಲ 5% ಬಾಕಿ 95% ಪ್ರತಿಭಟನೆ ರಾಜಕೀಯ ಪಕ್ಷಗಳು ಕಾರ್ಯಕರ್ತರಿಗೆ ಸಂಬಳ ನೀಡಿ ಮಾಡಿಸೋದು ಕಹಿ ಸತ್ಯ !! ಹಾಗಾಗಿ ಯಾರು ಹೇಗೆ ಕಾನೂನು ಮಾಡಿಯಾರು ಶಿವನೇ ಬಲ್ಲ !! ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡೋದು ದೇಶ_ದ್ರೋಹದ ಕೆಲಸ ಹಾಗಾಗಿ ಅಂತವರು ಯಾರಾದರೂ ಒದ್ದು ಒಳಗೆ ಹಾಕಿ !!!

ಶ್ರೀಧರ್‌ ಉಡುಪ: ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಯ ನಾಶ ಖಂಡಿತ ಸರಿಯಲ್ಲವೆನ್ನುವುದು ಪ್ರತಿಭಟನಾಕಾರರಿಗೂ ತಿಳಿಯಲಾರದ ವಿಷಯವೇನಲ್ಲ. ಸರ್ಕಾರ, ಸಮಾಜ ಹಾಗೂ ಮಾಧ್ಯಮಗಳ ಗಮನವನ್ನು ತಮ್ಮ ಬೇಡಿಕೆಯತ್ತ ಕೂಡಲೇ ಸಳೆಯಲು ಸಾರ್ವಜನಿಕ ಆಸ್ತಿ ನಾಶದಂತಹ ಅಡ್ಡ ಹಾದಿಯನ್ನು ಪ್ರತಿಭಟನಾಕಾರ ರು ಹಿಡಿಯುತ್ತಾರೆ. ಪ್ರತಿಭಟನೆಗೆ ಏನೇ ಕಾರಣವಿದ್ದರೂ ಅದು ಶಾಂತಿಯುತವಾಗಿರದ ಪಕ್ಷದಲ್ಲಿ ಅಂತಹ ಪ್ರತಿಭಟನೆಗಳಿಗೆ ಸರ್ಕಾರ ಯಾವುದೇ ಕಾರಣಕ್ಕೂ ಬಗ್ಗದೆ ಪ್ರತಿಭಟನಾಕಾರರಿಗೆ ಸೂಕ್ತ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಬೇಕು.

ಮಂಜುನಾಥ ಮಾತಾಡ್:‌ ‌ಹೋರಾಟದ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಹಾಳು ಮಾಡುವುದು ಎಷ್ಟು ಸರಿ ? ಕನಕಪುರ ಮತ್ತು ರಾಮಾನಗರದ ಜನಗಳ ಆಸ್ತಿಯೇ ನಮ್ಮ KSRTC ? ಬಸ್ಸು ಸುಟ್ಟಿದು ಎಷ್ಟು ಸರಿ ? ಈ ತರ ಸಾರ್ವಜನಿಕ ಆಸ್ತಿ ಹಾಳು ಮಾಡುವ ಜನಗಳ ಮೇಲೆ ಕಠಿಣ ಕಾನೂನು ಆಗತ್ಯ ಇದೆ

ಪೂರ್ಣಪ್ರಜ್ನ ಪಿ ಎಸ್:‌ ಕೋಪಕ್ಕೆ ನಮ್ಮ ಮೂಗನ್ನು ಯಾಕೆ ಕುಯ್ದುಕೊಳ್ಬೇಕು, ನಾಳೆಯ ದಿನ ನಾವೆ ನಮ್ಮ ಮುಖ ನೋಡಿಕೊಳ್ಳಲು ಹೆದರುತ್ತೇವೆ, ಸಾರ್ವಜನಿಕ ಆಸ್ತಿ ಎಂದರೆ ಅದು ಪ್ರತಿಯೊಬ್ಬ ವ್ಯಕ್ತಿಯು ಸೇರಿ ಮಾಡಿದ ಜೋಡಿ ಖಾತೆ ಇದ್ದಂತೆ, ಅದನ್ನು ಯಾರು ತಮ್ಮ ಕೋಪದ ಕೈಗೆ ಕೊಟ್ಟು ದರ್ಪ ತೋರುದು ಸರಿಯಲ್ಲ.

ಕುಶಾಲ್‌ ರಾಜ್:‌ ಒಬ್ಬ ಭ್ರಷ್ಟ ರಾಜಕಾರಣಿಗೋಸ್ಕರ ಪ್ರತಿಭಟನೆ ಮಾಡುವುದೇ ತಪ್ಪು. ಒಬ್ಬ ಒಳ್ಳೆಯ ಕೆಲಸ ಮಾಡಲು ಹೋದಾಗ ಅವನನ್ನು ಬಂಧಿಸಿದರೆ ಸಮಾಧಾನ ಕಾರ ಪ್ರತಿಭಟನೆ ಮಾಡಬೇಕು. ಇಲ್ಲಿ ಹುಚ್ಚು ತರಕೇರಿದೆ. ಇದರಿಂದ ಅನೇಕ ಆಪತ್ತು ಮತ್ತು ನಷ್ಟ ಉಂಟಾಗಿದೆ. ಈ ನಷ್ಟ ಯಾರಿಗೆ ಆದದ್ದು ನಮಗೆ. ನಮ್ಮ ಟ್ಯಾಕ್ಸ್ ನ ಹಣ ಅಲ್ಲವೇ ಅದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ