ಊಟ ಮಾಡಿ ಕುಳಿತ್ತಿದ್ದ ಸಹೋದರರ ಮೇಲೆ ಏಕಾಏಕಿ ಬಿದ್ದ ಗೋಡೆ : ಓರ್ವ ಸಾವು, ಇನ್ನೋರ್ವನಿಗೆ ಗಾಯ
Team Udayavani, Oct 7, 2021, 6:09 PM IST
ದಾವಣಗೆರೆ: ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿ, ಇನ್ನೊಬ್ಬರು ಗಾಯಗೊಂಡಿರುವ ಘಟನೆ ಗುರುವಾರ ದಾವಣಗೆರೆ ತಾಲೂಕಿನ ನರಗನಹಳ್ಳಿಯಲ್ಲಿ ಸಂಭವಿಸಿದೆ.
ನರಗನಹಳ್ಳಿ ಗ್ರಾಮದ ಮಂಜುನಾಥ್(48) ಮೃತಪಟ್ಟವರು. ಮೃತ ಮಂಜುನಾಥ್ ಸಹೋದರ ಪರಶುರಾಮ್ (42)ಎಂಬುವರು ಗಾಯಗೊಂಡಿದ್ದಾರೆ. ಮಧ್ಯಾಹ್ನ ಊಟ ಮಾಡಿದ ನಂತರ ಸಹೋದರರಿಬ್ಬರು ಮಾತನಾಡಿಕೊಂಡು ಕೂತಿದ್ದ ಸಂದರ್ಭದಲ್ಲಿ ಏಕಾಏಕಿ ಗೋಡೆ ಕುಸಿದು ಬಿದ್ದಿದೆ. ತೀವ್ರ ಗಾಯಗೊಂಡ ಮಂಜುನಾಥ್‌ನನ್ನು ಆಸ್ಪತ್ರೆಗೆ ಕರೆ ತರುವ ವೇಳೆ ದಾರಿ ಮಧ್ಯೆದಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಪರಶುರಾಮ್‌ನನ್ನು ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗೋಡೆಗಳು ನೆನೆದಿದ್ದವು. ಮಂಜುನಾಥ್ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಽಕಾರಿಗಳು ಸ್ಥಳಕ್ಕೆ ಬರುವಂತೆ ಕುಟುಂಬಸ್ಥರು, ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.
ಇದನ್ನೂ ಓದಿ : ಆಪ್ತನ ಮನೆ ಮೇಲೆ ಐಟಿ ರೇಡ್ ರಾಜಕೀಯ ಪ್ರೇರಿತವಲ್ಲ: ಬಿಎಸ್ ವೈ
ಸ್ವಲ್ಪದರಲ್ಲೇ ಪಾರು…
ದಾವಣಗೆರೆ ತಾಲೂಕಿನ ಕೈದಾಳ್ ಗ್ರಾಮದಲ್ಲಿ ಕೂದಲೆಳೆಯ ಅಂತರದಲ್ಲಿ ಇಡೀ ಕುಟುಂಬಸ್ಥರು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಬುಧವಾರ ರಾತ್ರಿ ಗ್ರಾಮದ ಮಲ್ಲಮ್ಮ ಎಂಬುವರ ಮನೆಯ ಎಲ್ಲ ಸದಸ್ಯರು ಮಲಗಿದ್ದ ಸಂದರ್ಭದಲ್ಲಿ ಏಕಾಏಕಿ ಮನೆ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಇಲ್ಲದೆ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಽಕಾರಿಗಳು ಸೂಕ್ತ ಪರಿಹಾರದ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿಯಲ್ಲಿ ದಾಖಲೆಯ 10 ಸೆಂ.ಮೀ ಮಳೆ : 21 ಮನೆಗಳಿಗೆ ಹಾನಿ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶಿಸಿದ ರಾಜ್ಯ ಸರಕಾರ
ಅಂಕೋಲಾ : ಭಾರಿ ಮಳೆಗೆ ಮೂರು ಸೇತುವೆ ಸಂಪೂರ್ಣ ಮುಳುಗಡೆ, ಗ್ರಾಮಗಳ ಸಂಪರ್ಕ ಕಡಿತ
ಸಿಎಂ ಬೊಮ್ಮಾಯಿ ದಾವೋಸ್ ಪ್ರವಾಸ ಖಚಿತ: 26 ಕ್ಕೆ ವಾಪಸ್
ರಾಜ್ಯಸಭೆ ಚುನಾವಣೆ; ನಾಳೆ ಸಿದ್ದರಾಮಯ್ಯ ನವದೆಹಲಿಗೆ :ಹೈಕಮಾಂಡ್ ಜತೆ ಚರ್ಚೆ