Udayavni Special

ಸಕ್ಕರೆ ಉದ್ಯಮಿಗಳ ಕೈಗೆ ಡಿಸಿಸಿ ಬ್ಯಾಂಕ್‌! ರಂಗೇರಿದ ತೆರೆಮೆರೆ ಕಸರತ್ತು

Team Udayavani, Oct 19, 2020, 1:11 PM IST

ಸಕ್ಕರೆ ಉದ್ಯಮಿಗಳ ಕೈಗೆ ಡಿಸಿಸಿ ಬ್ಯಾಂಕ್‌! ರಂಗೇರಿದ ತೆರೆಮೆರೆ ಕಸರತ್ತು

ಬಾಗಲಕೋಟೆ: ಜಿಲ್ಲೆಯ ಸಹಕಾರ ಸಂಘಗಳ ಹಿರಿಯಣ್ಣ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಚುನಾವಣೆ ಈ ಸಲ ಭಾರಿ
ಪ್ರತಿಷ್ಠೆ-ತುರುಸಿನಿಂದ ನಡೆಯುತ್ತಿದೆ. ಈ ಬಾರಿ 13 ನಿರ್ದೇಶಕ ಸ್ಥಾನಗಳಿಗೆ ಬಹುತೇಕ ಸಕ್ಕರೆ ಉದ್ಯಮಿಗಳೇ ಆಯ್ಕೆಯಾಗುವ
ಸಾಧ್ಯತೆಯೂ ದಟ್ಟವಾಗಿದೆ.

ಹೌದು. ಡಿಸಿಸಿ ಬ್ಯಾಂಕ್‌ಗೆ ಈ ಬಾರಿ ಮೂರು ನಿರ್ದೇಶಕ ಸ್ಥಾನಗಳು ಹೆಚ್ಚಾಗಿವೆ. ಕಳೆದ ಬಾರಿ ಇದ್ದ 10 ಸ್ಥಾನಗಳು ಈ ಬಾರಿ
13ಕ್ಕೆ ಏರಿಕೆಯಾಗಿದ್ದು, ರಬಕವಿ-ಬನಹಟ್ಟಿ ತಾಲೂಕು ಪಿಕೆಪಿಎಸ್‌, ಇಳಕಲ್ಲ ತಾಲೂಕು ಪಿಕೆಪಿಎಸ್‌ನಿಂದ ತಲಾ ಒಂದೊಂದು ಕ್ಷೇತ್ರ ಹಾಗೂ ನೇಕಾರ-ಉಣ್ಣೆ ನೇಕಾರರ ಸಹಕಾರಿ ಸಂಘಗಳ ಕ್ಷೇತ್ರವನ್ನು ಇಬ್ಭಾಗ ಮಾಡಿ, ನೇಕಾರ ಮತ್ತು ಉಣ್ಣೆ ನೇಕಾರ ಪ್ರತ್ಯೇಕ ಮಾಡಲಾಗಿದೆ. ಆದರೆ, ಹೊಸ ತಾಲೂಕುಗಳಲ್ಲಿ ಮುಖ್ಯವಾಗಿ ಗುಳೇದಗುಡ್ಡ ಹಾಗೂ ತೇರದಾಳಕ್ಕೆ ಅವಕಾಶ ಸಿಕ್ಕಿಲ್ಲ.

ಡಿಸಿಸಿ ಬ್ಯಾಂಕ್‌ ಮೇಲೇಕೆ ಕಣ್ಣು?: ಜಿಲ್ಲೆಯ ರಾಜಕೀಯ ಪ್ರಭಾವಿಗಳು, ಸಕ್ಕರೆ ಕಾರ್ಖಾನೆ ಮಾಲಿಕರು, ಪ್ರತಿಷ್ಠಿತರು ಡಿಸಿಸಿ ಬ್ಯಾಂಕ್‌ ಚುನಾವಣೆಯನ್ನು ಇಷ್ಟೇಕೆ ಪ್ರತಿಷ್ಠೆಯಾಗಿ ಮಾಡಿಕೊಂಡಿದ್ದಾರೆಂಬುದು ಸಾಮಾನ್ಯ ಜನರ ಪ್ರಶ್ನೆ. ಸಾಮಾನ್ಯ
ರೈತರು, ಜನರು ಡಿಸಿಸಿ ಬ್ಯಾಂಕ್‌ ಚುನಾವಣೆ ಬಗ್ಗೆ ಅಷ್ಟೊಂದು ತಲೆಯೂ ಕೆಡಿಸಿಕೊಂಡಿಲ್ಲ. ನಾವು ಅದರ ಮತದಾರರಲ್ಲ ಬಿಡಿ
ಎಂಬ ಅಸಡ್ಡೆ ತೋರಿಸುತ್ತಲೇ ಇದ್ದಾರೆ. ಆದರೆ, ಈ ಚುನಾವಣೆ, ಇಷ್ಟೊಂದು ಪ್ರತಿಷ್ಠೆಯಾಗಲು, ಅದರ ಲಾಭ ಉಂಡ ಪ್ರಭಾವಿಗಳಿಗೆ ಮಾತ್ರ ಗೊತ್ತು ಎಂಬ ಮಾತು ಕೇಳಿ ಬರುತ್ತಿದೆ.

ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದವರಿಗೆ ಹಲವು ಅನುಕೂಲಗಳಿವೆ. ಹಣದ ಹರಿವೂ ಬರುತ್ತದೆ ಎಂಬುದು ಕೆಲವರ ಅಭಿಪ್ರಾಯ.
ಇದಕ್ಕೆ ಕಾರಣವೂ ಇದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುತ್ತಿದ್ದು, ಹಲವರು ರೈತರ ಹೆಸರಿನಲ್ಲಿ ಈ ಪ್ರಯೋಜನ ಪಡೆದವರಿದ್ದಾರೆ. ಇನ್ನು ಸರ್ಕಾರ ಬಂದಾಗೊಮ್ಮೆ ರೈತರ ಸಾಲ ಮನ್ನಾ ಮಾಡುತ್ತಿದ್ದು, ಈ ಸಾಲ ಮನ್ನಾ ವಿಷಯದಲ್ಲಿ ಹಲವರು ಹಣ ಹೊಡೆದ ಪ್ರಸಂಗಗಳೂ ಜಿಲ್ಲೆಯಲ್ಲಿ ನಡೆದಿವೆ. ಇದೇ ವಿಷಯಕ್ಕೆ ಜಿಲ್ಲೆಯ ಕೆಲವು ಪಿಕೆಪಿಎಸ್‌ ವ್ಯವಸ್ಥಾಪಕರ ಮೇಲೆ ಪ್ರಕರಣ ದಾಖಲಾದರೆ, ಕೆಲವರು ಅಮಾನತುಗೊಂಡು ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ತಮಗೆ ಬೇಕಾದವರಿಗೆ, ಬೇಕಾದವರ ಹೆಸರಿನಲ್ಲಿ ಶೂನ್ಯ ಬಡ್ಡಿಯಲ್ಲಿ ಸಾಲ, ಮನ್ನಾ ಆದಾಗ ಅದರ ಲಾಭ ಪಡೆಯುವುದು ಒಂದು ಪದ್ಧತಿ ಇದೆ.

ನೇಮಕಾತಿಯಲ್ಲೂ ಹಣ: ಇನ್ನು ಡಿಸಿಸಿ ಬ್ಯಾಂಕ್‌ನಡಿ ಜಿಲ್ಲೆಯ 9 ತಾಲೂಕಿನಲ್ಲಿ ಹಲವು ಶಾಖೆಗಳಿದ್ದು, ಐದು ವರ್ಷಗಳಲ್ಲಿ
ಹಲವು ಹುದ್ದೆಗಳ ನೇಮಕಾತಿ ನಡೆಯುತ್ತದೆ. ನಿವೃತ್ತಿಯಾದವರು, ನಿಧನರಾದವರ ಹುದ್ದೆಗಳಿಗೆ ಹೊಸಬರ ನೇಮಕ ನಡೆಯುವ ಜತೆಗೆ ಹೊಸ ಶಾಖೆಗಳಿಗೆ ಹೊಸ ಸಿಬ್ಬಂದಿ ನೇಮಕಾತಿಯೂ ನಡೆಯುತ್ತದೆ. ಕಳೆದ ಐದು ವರ್ಷದಲ್ಲಿ ಒಮ್ಮೆ 43 ಹಾಗೂ ಒಮ್ಮೆ 7 ವಿವಿಧ ಹುದ್ದೆಗಳಿಗೆ ನೇಮಕ ನಡೆದಿದೆ. ಈ ನೇಮಕಾತಿ, ಹಣವಿಲ್ಲದೇ ನಡೆಯಲ್ಲ. ಒಂದೊಂದು ಹುದ್ದೆಗೂ 35ರಿಂದ 40 ಲಕ್ಷ ಹಣ ಹರಿದಾಡಿತು ಎಂಬ ಪ್ರಭಲ ಆರೋಪ ಕೇಳಿ ಬಂದಿತ್ತು.

ನೋಟು ನಿಷೇಧದ ವೇಳೆ ದಾಳಿ ನಡೆದಿತ್ತು : ಕೇಂದ್ರದ ಸರ್ಕಾರ ಹಳೆಯ 500 ಮತ್ತು 1 ಸಾವಿರ ಮುಖ ಬೆಲೆಯ ಹಳೆಯ ನೋಟು ನಿಷೇಧ ಮಾಡಿದಾಗ ಪ್ರಭಾವಿಗಳೇ ಇರುವ ಡಿಸಿಸಿ ಬ್ಯಾಂಕ್‌ನಲ್ಲಿ ಕೋಟಿ ಕೋಟಿ ಲೆಕ್ಕದ ಹಳೆಯ ಹಣ ಜಮೆಯಾಗಿದ್ದವು. ರೈತರು, ಖಾತೆ ಹೊಂದಿರುವ ಸಾಮಾನ್ಯ ಜನರ ಹೆಸರಿನಲ್ಲಿ ಹಳೆಯ ನೋಟು ಬ್ಯಾಂಕ್‌ಗೆ ಬಂದವು. ಇದು ಕೇಂದ್ರ ಸರ್ಕಾರದ ಪಡಸಾಲೆವರೆಗೂ ವಾಸನೆ ಹೋಗಿತ್ತು. ಹೀಗಾಗಿ ಆದಾಯ ತೆರಿಗೆ ಇಲಾಖೆಯ ಸಹಿತ ವಿವಿಧ ಅಧಿಕಾರಿಗಳ ತಂಡ ಡಿಸಿಸಿ ಬ್ಯಾಂಕ್‌ ಮೇಲೆ ದಾಳಿ ನಡೆಸಿತ್ತು. ಎರಡು ದಿನಗಳ ಕಾಲ ಸಮಗ್ರ ಪರಿಶೀಲನೆ ನಡೆಸಿ ಹೋಗಿತ್ತು. ಆದರೆ, ಮುಂದೆ ಏನಾಯಿತೆಂಬುದು ಜಿಲ್ಲೆಯ ಜನರಿಗೆ ತಿಳಿಯಲೇ ಇಲ್ಲ.

ಸಕ್ಕರೆ ಉದ್ಯಮಿಗಳ ಕೈಗೆ ಬ್ಯಾಂಕ್‌: ಈ ಬಾರಿಯ ನಿರ್ದೇಶಕ ಸ್ಥಾನಗಳ ಚುನಾವಣೆಗೆ ಬಹುತೇಕ ಸಕ್ಕರೆ ಉದ್ಯಮಿಗಳು ಸ್ಪರ್ಧಿಸಿದ್ದಾರೆ. ಅವರೆಲ್ಲ ಗೆದ್ದು, ಡಿಸಿಸಿ ಬ್ಯಾಂಕ್‌ ಆಡಳಿತದಲ್ಲಿ ಭಾಗಿಯಾಗಬೇಕೆಂಬ ಪ್ರತಿಷ್ಠೆಗೂ ಬಿದ್ದಿದ್ದಾರೆ. ಹೀಗಾಗಿ ಹಣದ ಆಮಿಷವೂ ಜೋರಾಗಿ ಸದ್ದು ಮಾಡುತ್ತಿದೆ. ಇಷ್ಟೊಂದು ಹಣ ಖರ್ಚು ಮಾಡಿ, ಡಿಸಿಸಿ ಬ್ಯಾಂಕ್‌ ನಲ್ಲೇನು ಮಾಡುವುದಿದೆ ಎಂದು ಪ್ರಶ್ನೆ ಮಾಡುವ ಅಮಾಯಕರೂ ಇದ್ದಾರೆ. ಆದರೂ, ಜಿಲ್ಲೆಯಲ್ಲಿ ಸಹಕಾರ ರಾಜಕೀಯ ಬಲು ಜೋರಾಗಿ ನಡೆಯುತ್ತಿದೆ.

– ಶ್ರೀಶೈಲ ಕೆ. ಬಿರಾದಾರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಿರ್ಣಾಯಕ ಹೋರಾಟ: ಭಾರೀ ಬೆಲೆ ತೆರಬೇಕಾಗುತ್ತದೆ: ರೈತರ ಎಚ್ಚರಿಕೆ

ನಿರ್ಣಾಯಕ ಹೋರಾಟ: ಭಾರೀ ಬೆಲೆ ತೆರಬೇಕಾಗುತ್ತದೆ: ರೈತರ ಎಚ್ಚರಿಕೆ

GST

ಆಧಾರ್‌ ದೃಢೀಕರಿಸದಿದ್ರೆ ಭೌತಿಕ ಪರಿಶೀಲನೆ

ಬಡರಾಷ್ಟ್ರಗಳಿಗೆ ಭಾರತ ಲಸಿಕೆ ಸಂಗ್ರಾಹಕ ಗಿಫ್ಟ್

ಬಡರಾಷ್ಟ್ರಗಳಿಗೆ ಭಾರತ ಲಸಿಕೆ ಸಂಗ್ರಾಹಕ ಗಿಫ್ಟ್

ಮಣಿಪಾಲ: ಬೆಂಕಿ ಅವಘಡ; ಯುವಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಮಣಿಪಾಲ: ಬೆಂಕಿ ಅವಘಡ; ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Olypic

ಒಲಿಂಪಿಕ್ಸ್‌ ಮುಂದೂಡಿಕೆ; 3 ಬಿ. ಡಾಲರ್‌ಗೂ ಹೆಚ್ಚು ಖರ್ಚು

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

ಬೇಕಿದ್ದ ಮಾತ್ರೆ ಬಿಟ್ಟು ಬೇರೆ ಮಾತ್ರೆ ಸೇವಿಸಿದ್ದರಿಂದ ಇಷ್ಟೆಲ್ಲ ಆಯಿತು :N.R‌.ಸಂತೋಷ್‌

ಬೇಕಿದ್ದ ಮಾತ್ರೆ ಬಿಟ್ಟು ಬೇರೆ ಮಾತ್ರೆ ಸೇವಿಸಿದ್ದರಿಂದ ಇಷ್ಟೆಲ್ಲ ಆಯಿತು :N.R‌.ಸಂತೋಷ್‌

ಚಾಮರಾಜನಗರ ಜಿಲ್ಲೆಯ 129 ಗ್ರಾ.ಪಂ.ಗಳ ಚುನಾವಣೆಗೆ 1046 ಮತಗಟ್ಟೆಗಳ ಸ್ಥಾಪನೆ

ಚಾಮರಾಜನಗರ ಜಿಲ್ಲೆಯ 129 ಗ್ರಾ.ಪಂ.ಗಳ ಚುನಾವಣೆಗೆ 1046 ಮತಗಟ್ಟೆಗಳ ಸ್ಥಾಪನೆ

ಅತಿವೃಷ್ಠಿ ಹಾನಿ ಪರಿಹಾರಕ್ಕೆ ಲಂಚ ಕೇಳಿದ ಮಸಗುಪ್ಪಿ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಅತಿವೃಷ್ಠಿ ಹಾನಿ ಪರಿಹಾರಕ್ಕೆ ಲಂಚ ಕೇಳಿದ ಮಸಗುಪ್ಪಿ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

5ನೇ ದಿನಕ್ಕೆ ರೈತರ ಹೋರಾಟ: ಕೇಂದ್ರ ರೈತರ ಮನವಿ ಅಳಿಸುವುದು ಸೂಕ್ತ: ಕುಮಾರಸ್ವಾಮಿ

5ನೇ ದಿನಕ್ಕೆ ರೈತರ ಹೋರಾಟ: ರೈತರ ಸಮಸ್ಯೆ ಪರಿಹರಿಸುವುದು ಸೂಕ್ತ: ಕೇಂದ್ರಕ್ಕೆ HDK ಮನವಿ

MUST WATCH

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

ಹೊಸ ಸೇರ್ಪಡೆ

ನಿರ್ಣಾಯಕ ಹೋರಾಟ: ಭಾರೀ ಬೆಲೆ ತೆರಬೇಕಾಗುತ್ತದೆ: ರೈತರ ಎಚ್ಚರಿಕೆ

ನಿರ್ಣಾಯಕ ಹೋರಾಟ: ಭಾರೀ ಬೆಲೆ ತೆರಬೇಕಾಗುತ್ತದೆ: ರೈತರ ಎಚ್ಚರಿಕೆ

GST

ಆಧಾರ್‌ ದೃಢೀಕರಿಸದಿದ್ರೆ ಭೌತಿಕ ಪರಿಶೀಲನೆ

ಬಡರಾಷ್ಟ್ರಗಳಿಗೆ ಭಾರತ ಲಸಿಕೆ ಸಂಗ್ರಾಹಕ ಗಿಫ್ಟ್

ಬಡರಾಷ್ಟ್ರಗಳಿಗೆ ಭಾರತ ಲಸಿಕೆ ಸಂಗ್ರಾಹಕ ಗಿಫ್ಟ್

ಮಣಿಪಾಲ: ಬೆಂಕಿ ಅವಘಡ; ಯುವಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಮಣಿಪಾಲ: ಬೆಂಕಿ ಅವಘಡ; ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Olypic

ಒಲಿಂಪಿಕ್ಸ್‌ ಮುಂದೂಡಿಕೆ; 3 ಬಿ. ಡಾಲರ್‌ಗೂ ಹೆಚ್ಚು ಖರ್ಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.