ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ
Team Udayavani, Oct 3, 2021, 11:00 PM IST
ಕಾಬೂಲ್: ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಮಸೀದಿಯೊಂದರ ಮುಂದೆ ಭಾನುವಾರ ಬಾಂಬ್ ಸ್ಫೋಟವಾಗಿದೆ.
ಘಟನೆಯಲ್ಲಿ ಇಬ್ಬರು ನಾಗರಿಕರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಕಾಬೂಲ್‌ನ ಈದ್ಗಾ ಮಸೀದಿಯಲ್ಲಿ ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್‌ನ ತಾಯಿಯ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದೇ ವೇಳೆ ಮಸೀದಿ ಮುಂದೆ ಬಾಂಬ್ ಸ್ಫೋಟಿಸಿದೆ. ಮಸೀದಿಯ ಸುತ್ತ ಮುತ್ತ ತಾಲಿಬಾನ್ ಬಿಗಿ ಭದ್ರತೆ ಕೈಗೊಂಡಿದ್ದರೂ ಸ್ಫೋಟ ಸಂಭವಿಸಿದೆ.
ಈ ದಾಳಿಯ ಹಿಂದೆ ಐಸಿಸ್ ಉಗ್ರರ ಕೈವಾಡವಿರುವ ಶಂಕೆಯಿದೆ ಎಂದು ತಾಲಿಬಾನ್ ಹೇಳಿದೆ.
ಇದನ್ನೂ ಓದಿ:ಜಮ್ಮು – ಕಾಶ್ಮೀರ ಉರಿಯಲ್ಲಿ ಡ್ರಗ್ಸ್ ಸಾಗಾಟ?