Udayavni Special

ಕೋವಿಡ್‌-19 ಕರ್ತವ್ಯ ನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆ ಸಾವು


Team Udayavani, May 13, 2020, 7:19 AM IST

korora-kartavya

ಸಾಂದರ್ಭಿಕ ಚಿತ್ರ

ಬಳ್ಳಾರಿ: ಕೋವಿಡ್‌-19 ತಡೆ ಹಾಗೂ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದ ಕುರುಗೋಡು ತಾಲೂಕು ಬಾದನಹಟ್ಟಿ ಗ್ರಾಮದ ಆಶಾ ಕಾರ್ಯಕರ್ತೆ ಕೆ. ಸಾಕಮ್ಮ (51) ಸೋಮವಾರ ಮೃತಪಟ್ಟಿ  ದ್ದಾರೆ. ಕೆಲಸದ ಒತ್ತಡದಿಂದಲೇ  ಮೃತಪಟ್ಟಿದ್ದಾರೆಂದು ಕುಟುಂಬ ದವರು ಆರೋಪಿಸುತ್ತಿದ್ದು, ವೈದ್ಯರು ಮಾತ್ರ ಸಾಕಮ್ಮ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳುತ್ತಿದ್ದಾರೆ.

ಸಾಕಮ್ಮ ಅವರು ಲಾಕ್‌ಡೌನ್‌ ಘೋಷಣೆ ಆದಾಗಿನಿಂದ ನಿರಂತರವಾಗಿ  ಜಾಗೃತಿ ಕೆಲಸದಲ್ಲಿ ನಿರತರಾಗಿದ್ದಾರೆ. ಕೆಲಸದ ಒತ್ತಡದಲ್ಲಿ ಅನಾರೋಗ್ಯಕ್ಕೆ ಗುರಿಯಾಗಿರುವ ಅವರು, 2 ದಿನಗಳ ಹಿಂದಷ್ಟೇ ಗ್ರಾಮದಲ್ಲಿ ಕುಸಿದುಬಿದ್ದಿದ್ದಾರೆ. ಆಗ ಅಲ್ಲಿಯೇ ಇದ್ದ ಜನ ಇವರನ್ನು ಸಮಾಧಾನಪಡಿಸಿ, ನೀರು ಕುಡಿಸಿ  ಮನೆಗೆ ಕಳುಹಿಸಿದ್ದಾರೆ. ಮರುದಿನ ಪುನಃ ಕೆಲಸಕ್ಕೆ ಹಾಜರಾಗಿದ್ದು, ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ.

ಕೂಡಲೇ ಆ್ಯಂಬುಲೆನ್ಸ್‌ ನಲ್ಲಿ ವಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗಲೇ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ವಿಮ್ಸ್‌  ನಿರ್ದೇಶಕ ಡಾ|ಬಿ. ದೇವಾನಂದ್‌ ಪ್ರತಿಕ್ರಿಯಿಸಿ, ಸಿಂಕೋಪಲ್‌ ಅಟ್ಯಾಕ್‌ನಿಂದ (ತಲೆ ಸುತ್ತು) ಕುಸಿದು ಬಿದ್ದಿದ್ದಾರೆ. ಕೂಡಲೇ ವಿಮ್ಸ್‌ಗೆ ಕರೆತರಲಾಗಿದ್ದು, ಇಲ್ಲಿಗೆ ಬರುವುದರೊಳಗೆ ಮೃತಪಟ್ಟಿದ್ದರು. ಕೋವಿಡ್‌-19 ಜಾಗೃತಿ ಕಾರ್ಯದಲ್ಲಿ  ತೊಡಗಿದ್ದ ಹಿನ್ನೆಲೆಯಲ್ಲಿ ಅವರ ಗಂಟಲು ದ್ರವದ ಸ್ಯಾಂಪಲ್‌ ಗಳನ್ನು ಪಡೆದು ಕೊರೊನಾ ಟೆಸ್ಟಿಂಗ್‌ಗೆ ಕಳುಹಿಸಲಾಗಿತ್ತು.

ಆಗ ವಿಮ್ಸ್‌ನಲ್ಲಿನ ಟೆಸ್ಟಿಂಗ್‌ ಲ್ಯಾಬ್‌ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕಳುಹಿಸಲಾಗಿದ್ದು, ನೆಗೆಟಿವ್‌ ಎಂದು ವರದಿ ಬಂದಿದೆ. ಕುಟುಂ ಬಸ್ಥರಿಗೆ ಮೃತದೇಹ ಒಪ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಿಹಾರ-ಉದ್ಯೋಗಕ್ಕಾಗಿ ಬೇಡಿಕೆ: ಈ ಮಧ್ಯೆ ಸಾಕಮ್ಮ ಕೆಲಸದ ಒತ್ತಡದಿಂದಲೇ ಮೃತಪಟ್ಟಿದ್ದಾರೆಂದು ಆರೋಪಿಸಿರುವ ಅವರ ಮಗ  ಕೆ.ಮಂಜುನಾಥ್‌, ಸೂಕ್ತ ಪರಿಹಾರ, ಸರ್ಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲಿವರೆಗೂ ಆಸ್ಪತ್ರೆಯಿಂದ ಮೃತದೇಹ ಕೊಂಡೊಯ್ಯುವುದಿಲ್ಲ ಎಂದೂ ಎಚ್ಚರಿಸಿದ್ದಾರೆ. ಒಂದು ವೇಳೆ ಬೇಡಿಕೆ  ಈಡೇರಿಸುವುದು ವಿಳಂಬವಾದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಡೀಸಿ ಕಚೇರಿ ಎದುರು ಧರಣಿ ನಡೆಸುವುದಾಗಿಯೂ ಮನವಿಯಲ್ಲಿ ತಿಳಿಸಿದ್ದಾರೆ. ಜತೆಗೆ 50 ಲಕ್ಷ ರೂ. ಆರೋಗ್ಯ ವಿಮೆಯ ಸೌಲಭ್ಯ ಕಲ್ಪಿಸಬೇಕೆಂದು  ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್‌.ವರಲಕ್ಷ್ಮಿ ಆಗ್ರಹಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಡುಪಿ ಜಿಲ್ಲೆಯಲ್ಲಿ 72 ಮಂದಿಯಲ್ಲಿ ಕೋವಿಡ್ ಸೋಂಕು ದೃಢ

ಉಡುಪಿ ಜಿಲ್ಲೆಯಲ್ಲಿ 72 ಮಂದಿಯಲ್ಲಿ ಕೋವಿಡ್ ಸೋಂಕು ದೃಢ

lockdown

ಜುಲೈ 16 ರಿಂದ ದಕ್ಷಿಣ ಕನ್ನಡ ಸಂಪೂರ್ಣ ಲಾಕ್ ಡೌನ್ : ಮಾರ್ಗಸೂಚಿ ಹೀಗಿದೆ

Covid ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಮನವಿ : BBMP ನೌಕರರ ಸಂಘದಿಂದ ಸಾಮೂಹಿಕ ರಜೆ ಎಚ್ಚರಿಕೆ

Covid ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಮನವಿ:BBMP ನೌಕರರ ಸಂಘದಿಂದ ಸಾಮೂಹಿಕ ರಜೆ ಎಚ್ಚರಿಕೆ

ಹೆತ್ತವರ ಪ್ರೇರಣೆ ಮತ್ತು ಕಾಲೇಜಿನ ವಾತಾವರಣ ನನ್ನ ಯಶಸ್ಸಿನ ಮೂಲ : ಅಭಿಜ್ಞಾ ರಾವ್

ಹೆತ್ತವರ ಪ್ರೇರಣೆ ಜೊತೆಗೆ ಕಾಲೇಜಿನ ವಾತಾವರಣ ನನ್ನ ಯಶಸ್ಸಿಗೆ ಸ್ಫೂರ್ತಿ : ಅಭಿಜ್ಞಾ ರಾವ್

ಬಿಗಡಾಯಿಸಿದ ರಾಜಸ್ಥಾನ್ ರಾಜಕೀಯ ಬಿಕ್ಕಟ್ಟು: ಸತ್ಯ ಎಂದಿಗೂ ಸೋಲಲ್ಲ: ಸಚಿನ್ ಪೈಲಟ್

ಬಿಗಡಾಯಿಸಿದ ರಾಜಸ್ಥಾನ್ ರಾಜಕೀಯ ಬಿಕ್ಕಟ್ಟು: ಸತ್ಯ ಎಂದಿಗೂ ಸೋಲಲ್ಲ: ಸಚಿನ್ ಪೈಲಟ್

ಚಾಮರಾಜನಗರ: ದ್ವಿತೀಯ ಪಿಯುಸಿ ಶೇ. 69.29 ಫಲಿತಾಂಶ

ಚಾಮರಾಜನಗರ: ದ್ವಿತೀಯ ಪಿಯುಸಿ ಶೇ. 69.29 ಫಲಿತಾಂಶ

abhijna

ಉಡುಪಿ ದ್ವಿತೀಯ ಪಿಯುಸಿ ಫಲಿತಾಂಶ: 6 ಪ್ರಮುಖ ರ‌್ಯಾಂಕ್, ವಿಜ್ಞಾನದಲ್ಲಿ ಅಭಿಜ್ಞಾ ಪ್ರಥಮ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಚಿವ ಈಶ್ವರಪ್ಪ ಹಾಗೂ ಕುಟುಂಬಸ್ಥರ ಕೋವಿಡ್ ವರದಿ ನೆಗೆಟಿವ್

ಸಚಿವ ಈಶ್ವರಪ್ಪ ಹಾಗೂ ಕುಟುಂಬಸ್ಥರ ಕೋವಿಡ್ ವರದಿ ನೆಗೆಟಿವ್

ಸಂಪುಟದಲ್ಲಿ ಯಾವುದೇ ಗೊಂದಲ ಇಲ್ಲ; ಸಚಿವ ಎಸ್ ಟಿ ಸೋಮಶೇಖರ್

ಸಂಪುಟದಲ್ಲಿ ಯಾವುದೇ ಗೊಂದಲ ಇಲ್ಲ; ಸಚಿವ ಎಸ್ ಟಿ ಸೋಮಶೇಖರ್

eshwarappa

ಸಿಬ್ಬಂದಿಗೆ ಸೋಂಕು: ಕ್ವಾರಂಟೈನ್ ಆದ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿ

suresgh-kumar

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದ.ಕ ದ್ವಿತೀಯ, ಬಾಲಕಿಯರೇ ಮೇಲುಗೈ

ರಾಯಚೂರು: ಕೋವಿಡ್ 19ಗೆ ಮತ್ತಿಬ್ಬರು ವೃದ್ಧೆಯರು ಬಲಿ

ರಾಯಚೂರು: ಕೋವಿಡ್ 19ಗೆ ಮತ್ತಿಬ್ಬರು ವೃದ್ಧೆಯರು ಬಲಿ

MUST WATCH

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk


ಹೊಸ ಸೇರ್ಪಡೆ

ಉಡುಪಿ ಜಿಲ್ಲೆಯಲ್ಲಿ 72 ಮಂದಿಯಲ್ಲಿ ಕೋವಿಡ್ ಸೋಂಕು ದೃಢ

ಉಡುಪಿ ಜಿಲ್ಲೆಯಲ್ಲಿ 72 ಮಂದಿಯಲ್ಲಿ ಕೋವಿಡ್ ಸೋಂಕು ದೃಢ

lockdown

ಜುಲೈ 16 ರಿಂದ ದಕ್ಷಿಣ ಕನ್ನಡ ಸಂಪೂರ್ಣ ಲಾಕ್ ಡೌನ್ : ಮಾರ್ಗಸೂಚಿ ಹೀಗಿದೆ

Covid ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಮನವಿ : BBMP ನೌಕರರ ಸಂಘದಿಂದ ಸಾಮೂಹಿಕ ರಜೆ ಎಚ್ಚರಿಕೆ

Covid ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಮನವಿ:BBMP ನೌಕರರ ಸಂಘದಿಂದ ಸಾಮೂಹಿಕ ರಜೆ ಎಚ್ಚರಿಕೆ

60 ಡಬಲ್‌ ಡೆಕ್ಕರ್‌ ಬಸ್‌ಗಳ ಸೇವಾರಂಭ

60 ಡಬಲ್‌ ಡೆಕ್ಕರ್‌ ಬಸ್‌ಗಳ ಸೇವಾರಂಭ

ಹೆತ್ತವರ ಪ್ರೇರಣೆ ಮತ್ತು ಕಾಲೇಜಿನ ವಾತಾವರಣ ನನ್ನ ಯಶಸ್ಸಿನ ಮೂಲ : ಅಭಿಜ್ಞಾ ರಾವ್

ಹೆತ್ತವರ ಪ್ರೇರಣೆ ಜೊತೆಗೆ ಕಾಲೇಜಿನ ವಾತಾವರಣ ನನ್ನ ಯಶಸ್ಸಿಗೆ ಸ್ಫೂರ್ತಿ : ಅಭಿಜ್ಞಾ ರಾವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.