ಸದಾ ಗಿಜಿಗಿಡುತ್ತಿದ್ದ ಮಂಗಳೂರಿನಲ್ಲಿ ಈಗ ಗಾಢ ಮೌನ !


Team Udayavani, Apr 17, 2020, 6:20 AM IST

ಸದಾ ಗಿಜಿಗಿಡುತ್ತಿದ್ದ ಮಂಗಳೂರಿನಲ್ಲಿ ಈಗ ಗಾಢ ಮೌನ !

ವಿಶೇಷ ವರದಿ-ಮಂಗಳೂರು: ಸುಮಾರು ಒಂದು ತಿಂಗಳಿನಿಂದ ಮಂಗಳೂರು ಮಹಾನಗರ ಸ್ತಬ್ಧಗೊಂಡಿದೆ. ತುಳುನಾಡಿನ ವ್ಯಾಪಾರ-ವಹಿವಾಟು, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಮಾಲ್‌ಗ‌ಳು, ಚಿತ್ರ ಮಂದಿರ, ಸೆಂಟ್ರಲ್‌ ಮಾರ್ಕೆಟ್‌, ಶಾಲಾ- ಕಾಲೇಜುಗಳು, ಪ್ರಮುಖ ಬೀದಿಗಳು, ಬಸ್‌ ನಿಲ್ದಾಣಗಳಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ನಗರಕ್ಕೆ ಈ ಹಿಂದಿದ್ದ ಗತ್ತು ಈಗಿಲ್ಲ. ಅಗತ್ಯ ಸೇವೆಗಳ ಕ್ಷೇತ್ರಗಳಲ್ಲಿ ಮಾತ್ರ ಬೆರಳೆಣಿಕೆಯ ಮಂದಿ ಕಂಡು ಬರುತ್ತಿದ್ದಾರೆ.

ಮೀನುಗಾರಿಕಾ ಬಂದರು ಸ್ತಬ್ಧ
ಸದಾ ಜನಜಂಗುಳಿಯಿಂದಿರುವ ಬಂದ ರಿನ ದಕ್ಕೆಯ ಮೀನುಗಾರಿಕೆ ಬಂದರು ಒಂದು ತಿಂಗಳಿನಿಂದ ಸ್ತಬ್ಧಗೊಂಡಿದೆ. ಸಾಮಾನ್ಯ ದಿನಗಳಲ್ಲಿ ಬಂದರಿನಲ್ಲಿ ಮೀನು ಗಾರ ಕಾರ್ಮಿಕರು, ಐಸ್‌ ಪ್ಲಾಂಟ್‌ ಮಂದಿ, ಗ್ರಾಹಕರು ಸಹಿತ ಮೂರರಿಂದ ನಾಲ್ಕು ಸಾವಿರ ಮಂದಿ ಕಂಡು ಬರುತ್ತಿದ್ದರು. ಈಗ ಬಂದರಿನಲ್ಲಿ ಲಂಗರು ಹಾಕಿರುವ ನೂರಾರು ಬೋಟ್‌ಗಳಷ್ಟೇ ಕಾಣಸಿಗುತ್ತಿವೆ. ಜತೆಗೆ ಹೊರ ರಾಜ್ಯಗಳ ಕೆಲವು ಮೀನುಗಾರರು ಮಾತ್ರ ಅಲ್ಲೇ ಅನಿವಾರ್ಯವಾಗಿ ಉಳಿದು ಕೊಂಡಿದ್ದಾರೆ.

ಬಿಕೋ ಎನ್ನುತ್ತಿರುವ ಬಸ್‌ ನಿಲ್ದಾಣ
ನಗರದಲ್ಲಿ ಅತಿ ಹೆಚ್ಚು ಜನರು ಹಾಗೂ ವಾಹನಗಳು ಬಂದು ಹೋಗುತ್ತಿದ್ದ ಬಿಜೈಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಈಗ ಬಿಕೋ ಎನ್ನುತ್ತಿದೆ. ಮಾಮೂಲಿ ದಿನಗಳಲ್ಲಿ ಸಾವಿರಾರು ಮಂದಿ ಓಡಾಡುತ್ತಿದ್ದ ಇಲ್ಲಿ ಈಗ ಪಾರ್ಕ್‌ ಮಾಡಿರುವ ಬಸ್‌ಗಳಷ್ಟೇ ಇವೆ. ಮುಖ್ಯದ್ವಾರದಲ್ಲಿ ಭದ್ರತಾ ಸಿಬಂದಿ ಸೇವೆಯಲ್ಲಿದ್ದಾರೆ.

ನಗರಕ್ಕೆ ಹೊಸ ಲವಲವಿಕೆ ನೀಡುತ್ತಿದ್ದ ಸಿಟಿ ಬಸ್‌ ನಿರ್ವಾಹಕರ ದನಿ ಕೇಳದೆ ದಿನ ಹಲವು ಸಂದಿವೆ. ದಿನಂಪ್ರತಿ 350ಕ್ಕೂ ಮಿಕ್ಕಿ ಬಸ್‌ಗಳು ಒಂದೇ ಕಡೆಯಿಂದ ಸಂಚಾರ ನಡೆಸುತ್ತಿದ್ದ ಸಿಟಿ ಬಸ್‌ ನಿಲ್ದಾಣದಲ್ಲಿ ಗಾಢ ಮೌನ ಆವರಿಸಿದೆ. ಕೆಲವು ಮೆಡಿಕಲ್‌ ಶಾಪ್‌ಗ್ಳನ್ನು ಹೊರತುಪಡಿಸಿದರೆ ಇತರ ಅಂಗಡಿಗಳು ಮುಚ್ಚಿವೆ. ಲಾಕ್‌ಡೌನ್‌ ಆರಂಭವಾದಾಗಿನಿಂದ ಪಕ್ಕದ ಖಾಸಗಿ ಬಸ್‌ ನಿಲ್ದಾಣದಲ್ಲಿ 30ಕ್ಕೂ ಮಿಕ್ಕಿದ ಬಸ್‌ಗಳನ್ನು ನಿಲ್ಲಿಸಲಾಗಿದೆ.

ಕಾವಲಿಗೆ ಭದ್ರತಾ ಸಿಬಂದಿ
ನಗರದಲ್ಲಿರುವ ಪ್ರಮುಖ 3 ಮಾಲ್‌ಗ‌ಳು ಬಾಗಿಲು ಮುಚ್ಚಿವೆ. ಹಿಂದೆಲ್ಲ ವೀಕೆಂಡ್‌ನ‌ಲ್ಲಿ ಮಾಲ್‌ ಸುತ್ತಿ, ಸಿನೆಮಾ ವೀಕ್ಷಿಸುತ್ತಿದ್ದ ಮಂದಿ ಈಗ ಕೊರೊನಾಗೆ ಹಿಡಿ ಶಾಪ ಹಾಕುತ್ತಿದ್ದಾರೆ. ನಗರದಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣಗಳು, ಬಟ್ಟೆ, ಚಿನ್ನದ ಮಳಿಗೆ, ವಾಹನಗಳ ಶೋ ರೂಂಗಳು, ಕೆಲವು ಸರಕಾರಿ ಕಚೇರಿಗಳು ಮುಚ್ಚಿದ್ದು, ಕೇವಲ ಭದ್ರತಾ ಸಿಬಂದಿ ಮಾತ್ರ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬೀದಿಗಳು ಖಾಲಿ
ನಗರದಲ್ಲಿ ಸಾಮಾನ್ಯ ದಿನಗಳಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಅದರಲ್ಲೂ ನಂತೂರು ವೃತ್ತ, ಎಂ.ಜಿ. ರಸ್ತೆ, ಹಂಪನಕಟ್ಟೆ, ಲಾಲ್‌ಬಾಗ್‌, ಕಂಕನಾಡಿ, ಪಂಪ್‌ವೆಲ್‌, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಸ್ಟೇಟ್‌ಬ್ಯಾಂಕ್‌ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಿರುತ್ತಿತ್ತು. ಆದರೆ ಲಾಕ್‌ಡೌನ್‌ ಆರಂಭವಾದಾಗಿನಿಂದ ಮಧ್ಯಾಹ್ನ 12 ಗಂಟೆ ಬಳಿಕ ವಾಹನ ಸಂಚಾರ ಬಂದ್‌ ಆಗಿರುತ್ತದೆ.

ಟಾಪ್ ನ್ಯೂಸ್

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು ಮಹಾನಗರ ಪಾಲಿಕೆ: ಕೋವಿಡ್‌ ನಿಯಂತ್ರಣಕ್ಕೆ ವಾರ್ಡ್‌ಗೊಂದು ತಂಡ

ಮಂಗಳೂರು ಮಹಾನಗರ ಪಾಲಿಕೆ: ಕೋವಿಡ್‌ ನಿಯಂತ್ರಣಕ್ಕೆ ವಾರ್ಡ್‌ಗೊಂದು ತಂಡ

2gold

ಮಂಗಳೂರು ವಿಮಾನ ನಿಲ್ದಾಣದಲ್ಲಿ 29,14,160 ಮೌಲ್ಯದ ಚಿನ್ನ ವಶ

Musical artist Sheela Divakar passes away

ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್ ನಿಧನ

ದ.ಕ., ಉಡುಪಿಯ 306 ಗ್ರಾ.ಪಂ.ಗಳಲ್ಲಿ ಡಿಜಿಟಲ್‌ ಲೈಬ್ರೆರಿ

ದ.ಕ., ಉಡುಪಿಯ 306 ಗ್ರಾ.ಪಂ.ಗಳಲ್ಲಿ ಡಿಜಿಟಲ್‌ ಲೈಬ್ರೆರಿ

ಸುರಕ್ಷೆಗಾಗಿ ಸಿಟಿ ಬಸ್‌ಗಳಲ್ಲಿ ಸಿಸಿ ಕೆಮರಾ ಅಳವಡಿಕೆ

ಸುರಕ್ಷೆಗಾಗಿ ಸಿಟಿ ಬಸ್‌ಗಳಲ್ಲಿ ಸಿಸಿ ಕೆಮರಾ ಅಳವಡಿಕೆ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.