ಡೆಲ್ಲಿಗೆ ಪ್ಲೇ-ಆಫ್ ಶ್ರೇಯಸ್‌; ಮುಂಬೈಗೆ 4 ವಿಕೆಟ್‌ ಸೋಲು; ಮುಂದಿನ ಹಾದಿ ಕಠಿಣ


Team Udayavani, Oct 2, 2021, 8:55 PM IST

ಡೆಲ್ಲಿಗೆ ಪ್ಲೇ-ಆಫ್ ಶ್ರೇಯಸ್‌; ಮುಂಬೈಗೆ 4 ವಿಕೆಟ್‌ ಸೋಲು; ಮುಂದಿನ ಹಾದಿ ಕಠಿಣ

ಶಾರ್ಜಾ: ಶ್ರೇಯಸ್‌ ಅಯ್ಯರ್‌ ಮತ್ತು ಆರ್‌.ಅಶ್ವಿ‌ನ್‌ ಅವರ ಅಜೇಯ ಜತೆಯಾಟದ ನೆರವಿನಿಂದ ಮುಂಬೈ ಇಂಡಿಯನ್ಸ್‌ ವಿರುದ್ಧ 4 ವಿಕೆಟ್‌ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌ 2021ನೇ ಐಪಿಎಲ್‌ ಪಂದ್ಯಾವಳಿಯ ಪ್ಲೇ ಆಫ್ ಸುತ್ತು ಪ್ರವೇಶಿಸಿದೆ. 12 ಪಂದ್ಯಗಳಲ್ಲಿ 7ನೇ ಸೋಲನುಭವಿಸಿದ ಹಾಲಿ ಚಾಂಪಿಯನ್‌ ಮುಂಬೈ ತಂಡದ ಮುಂದಿನ ಹಾದಿ ಕಠಿಣಗೊಂಡಿದೆ.

ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ 8 ವಿಕೆಟಿಗೆ 129 ರನ್‌ ಗಳಿಸಿದರೆ, ಡೆಲ್ಲಿ 19.1 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 132 ರನ್‌ ಬಾರಿಸಿತು. ಇದರೊಂದಿಗೆ ಐಪಿಎಲ್‌ ಇತಿಹಾಸದಲ್ಲಿ 130 ಹಾಗೂ ಇದಕ್ಕೂ ಕಡಿಮೆ ಮೊತ್ತದ ಚೇಸಿಂಗ್‌ ವೇಳೆ ಡೆಲ್ಲಿ ಗೆಲುವಿನ ದಾಖಲೆಯನ್ನು ಕಾಯ್ದುಕೊಂಡಂತಾಯಿತು.

ಚೇಸಿಂಗ್‌ ಹಾದಿಯಲ್ಲಿ 93ಕ್ಕೆ 6 ವಿಕೆಟ್‌ ಬಿದ್ದಾಗ ಡೆಲ್ಲಿಗೆ ಆತಂಕ ಎದುರಾಗಿತ್ತು. ಆದರೆ ಅಯ್ಯರ್‌-ಅಶ್ವಿ‌ನ್‌ 36 ಎಸೆತಗಳಿಂದ 39 ರನ್‌ ಒಟ್ಟುಗೂಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಯ್ಯರ್‌ 33 ಎಸೆತಗಳಿಂದ 33 ರನ್‌ (2 ಬೌಂಡರಿ), ಅಶ್ವಿ‌ನ್‌ 21 ಎಸೆತಗಳಿಂದ 20 ರನ್‌ ಮಾಡಿ ಅಜೇಯರಾಗಿ ಉಳಿದರು. ಕೃನಾಲ್‌ ಪಾಂಡ್ಯ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ತಂಡದ ಗೆಲುವನ್ನು ಸಾರಿದರು.

ಶಾ, ಧವನ್‌, ಸ್ಮಿತ್‌ ಅವರ ವಿಕೆಟ್‌ 30 ರನ್ನಿಗೆ ಬಿದ್ದಾಗ ಮುಂಬೈ ತಿರುಗಿ ಬೀಳುವ ಎಲ್ಲ ಸೂಚನೆ ನೀಡಿತ್ತು. ಆಗ ನಾಯಕ ಪಂತ್‌ (26) ಡೆಲ್ಲಿ ನೆರವಿಗೆ ನಿಂತರು.

ಆವೇಶ್‌, ಅಕ್ಷರ್‌ ಆವೇಶ:
ಆವೇಶ್‌ ಖಾನ್‌, ಅಕ್ಷರ್‌ ಪಟೇಲ್‌ ಮತ್ತು ಅನ್ರಿಚ್‌ ನೋರ್ಜೆ ಸೇರಿಕೊಂಡು ಮುಂಬೈ ಮೇಲೆರಗಿದರು. ಖಾನ್‌ ಮತ್ತು ಪಟೇಲ್‌ ತಲಾ 3 ವಿಕೆಟ್‌ ಉಡಾಯಿಸಿದರು. ವಿಶ್ವದ ಅತಿ ವೇಗದ ಬೌಲರ್‌ ನೋರ್ಜೆ ವಿಕೆಟ್‌ ಮೇಡನ್‌ ಮೂಲಕ ಮ್ಯಾಜಿಕ್‌ ಮಾಡಿದರು. ಶಾರ್ಜಾದಲ್ಲಿ ರನ್‌ ಹರಿದು ಬರುವುದು ನಿಂತಿದೆ ಎಂಬುದು ಮತ್ತೂಮ್ಮೆ ಸಾಬೀತಾಯಿತು.

ಆವೇಶ್‌ ಖಾನ್‌ ತಮ್ಮ ಮೊದಲ ಓವರ್‌ನಲ್ಲೇ ರೋಹಿತ್‌ ಶರ್ಮ (7) ವಿಕೆಟ್‌ ಉಡಾಯಿಸಿದರು. ಬಳಿಕ ಅಕ್ಷರ್‌ ಪಟೇಲ್‌ ಅಗ್ರ ಕ್ರಮಾಂಕದ ಮೇಲೆ ಘಾತಕವಾಗಿ ಎರಗಿ ಡಿ ಕಾಕ್‌ (19), ಸೂರ್ಯಕುಮಾರ್‌ (33) ಮತ್ತು ಸೌರಭ್‌ ತಿವಾರಿ (15) ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ಪವರ್‌ ಪ್ಲೇ ಮುಗಿದ ಕೂಡಲೇ ಚೆಂಡನ್ನು ಕೈಗೆತ್ತಿಕೊಂಡ ಪಟೇಲ್‌, ದ್ವಿತೀಯ ಎಸೆತದಲ್ಲೇ ಡಿ ಕಾಕ್‌ ವಿಕೆಟ್‌ ಹಾರಿಸಿದರು.
ಮಧ್ಯಪ್ರದೇಶದ ಆವೇಶ್‌ ಖಾನ್‌ ಮೊದಲೆರಡು ಓವರ್‌ಗಳಲ್ಲಿ ಬಿಟ್ಟುಕೊಟ್ಟದ್ದು ಕೇವಲ 7 ರನ್‌. ಇದರಲ್ಲಿ 8 ಡಾಟ್‌ ಬಾಲ್‌ಗ‌ಳಾಗಿದ್ದವು. ಡೆತ್‌ ಓವರ್‌ನಲ್ಲೂ ಆವೇಶ್‌ ದಾಳಿ ಅತ್ಯಂತ ಹರಿತವಾಗಿತ್ತು. ಹಾರ್ದಿಕ್‌ ಪಾಂಡ್ಯ (17) ಮತ್ತು ಕೋಲ್ಟರ್‌ ನೈಲ್‌ (1) ಆಟ ಮುಗಿಸಿದರು.

ಈವರೆಗೆ ಸಿಡಿಯುವಲ್ಲಿ ವಿಫ‌ಲರಾದ ಸೂರ್ಯಕುಮಾರ್‌ ಯಾದವ್‌ 33 ರನ್‌ ಬಾರಿಸಿ ಮುಂಬೈ ಸರದಿಯ ಟಾಪ್‌ ಸ್ಕೋರರ್‌ ಎನಿಸಿದ್ದು ವಿಶೇಷ. 26 ಎಸೆತ ಎದುರಿಸಿದ ಸೂರ್ಯ 2 ಸಿಕ್ಸರ್‌, 2 ಫೋರ್‌ ಹೊಡೆದು ಮಿಂಚಿದರು.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 636 ಹೊಸ ಪ್ರಕರಣ : ನಾಲ್ವರು ಸೋಂಕಿತರ ಸಾವು

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌

ರೋಹಿತ್‌ ಶರ್ಮ ಸಿ ರಬಾಡ ಬಿ ಅವೇಶ್‌ 7
ಡಿ ಕಾಕ್‌ ಸಿ ಜೋರ್ಜೆ ಬಿ ಅಕ್ಷರ್‌ 19
ಸೂರ್ಯಕುಮಾರ್‌ ಸಿ ರಬಾಡ ಬಿ ಅಕ್ಷರ್‌ 33
ಸೌರಭ್‌ ತಿವಾರಿ ಸಿ ಪಂತ್‌ ಬಿ ಅಕ್ಷರ್‌ 15
ಕೈರನ್‌ ಪೊಲಾರ್ಡ್‌ ಬಿ ನೋರ್ಜೆ 6
ಹಾರ್ದಿಕ್‌ ಪಾಂಡ್ಯ ಬಿ ಅವೇಶ್‌ 17
ಕೃಣಾಲ್‌ ಪಾಂಡ್ಯ ಔಟಾಗದೆ 13
ಕೋಲ್ಟರ್‌ ನೈಲ್‌ ಬಿ ಅವೇಶ್‌ 1
ಜಯಂತ್‌ ಯಾದವ್‌ ಸಿ ಸ್ಮಿತ್‌ ಬಿ ಅಶ್ವಿ‌ನ್‌ 11
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 1
ಇತರ 6
ಒಟ್ಟು(8 ವಿಕೆಟಿಗೆ) 129
ವಿಕೆಟ್‌ ಪತನ; 1-8, 2-37, 3-68, 4-80, 5-87, 6-109, 7-111, 8-122.
ಬೌಲಿಂಗ್‌;
ಅನ್ರಿಚ್‌ ನೋರ್ಜೆ 4-1-19-1
ಅವೇಶ್‌ ಖಾನ್‌ 4-0-15-3
ಆರ್‌. ಅಶ್ವಿ‌ನ್‌ 4-0-41-0
ಕಾಗಿಸೊ ರಬಾಡ 4-0-33-0
ಅಕ್ಷರ್‌ ಪಟೇಲ್‌ 4-0-21-3

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಎಲ್‌ಬಿಡಬ್ಲ್ಯುಬಿ ಕೃಣಾಲ್‌ 6
ಶಿಖರ್‌ ಧವನ್‌ ರನೌಟ್‌ 8
ಸ್ಟಿವನ್‌ ಸ್ಮಿತ್‌ ಬಿ ಕೋಲ್ಟರ್‌ನೆçಲ್‌
ರಿಷಭ್‌ ಪಂತ್‌ ಸಿ ಹಾರ್ದಿಕ್‌ ಬಿ ಜಯಂತ್‌ 26
ಶ್ರೇಯಸ್‌ ಅಯ್ಯರ್‌ ಔಟಾಗದೆ 33
ಅಕ್ಷರ್‌ ಪಟೇಲ್‌ ಎಲ್‌ಬಿಡಬ್ಲ್ಯು ಬಿ ಬೌಲ್ಟ್ 9
ಹೆಟ್‌ಮೈರ್‌ ಸಿ ರೋಹಿತ್‌ ಬಿ ಬುಮ್ರಾ 15
ಆರ್‌. ಅಶ್ವಿ‌ನ್‌ ಔಟಾಗದೆ 20
ಇತರ 6
ಒಟ್ಟು(19.1 ಓವರ್‌ಗಳಲ್ಲಿ 6 ವಿಕೆಟಿಗೆ) 132
ವಿಕೆಟ್‌ ಪತನ:1-14, 2-15, 3-30, 4-57, 5-77, 6-93.
ಬೌಲಿಂಗ್‌;
ಟ್ರೆಂಡ್‌ ಬೌಲ್ಟ್ 4-0-24-1
ಜಯಂತ್‌ ಯಾದವ್‌ 4-0-31-1
ಕೃಣಾಲ್‌ ಪಾಂಡ್ಯ 2.1-0-18-1
ಜಸ್‌ಪ್ರೀತ್‌ ಬುಮ್ರಾ 4-0-29-1
ನಥನ್‌ ಕೋಲ್ಟರ್‌ ನೈಲ್‌ 4-0-19-1
ಕೈರನ್‌ ಪೊಲಾರ್ಡ್‌ 1-0-9-0

ಟಾಪ್ ನ್ಯೂಸ್

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kane Williamson

ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಕಟ: 3 ಭಾರತೀಯರಿಗೆ ಸ್ಥಾನ, ವಿರಾಟ್ ಗೆ ಜಾಗವಿಲ್ಲ

babar azam

ವರ್ಷದ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತೀಯರಿಗೆ ಸ್ಥಾನವಿಲ್ಲ! ಬಾಬರ್ ಗೆ ನಾಯಕತ್ವ

ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್

ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್

kl-rahul

ಮೊದಲ ಏಕದಿನ ಪಂದ್ಯದ ಸೋಲಿಗೆ ಇವರೇ ಕಾರಣ ಎಂದ ನಾಯಕ ರಾಹುಲ್

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.