RCB vs DC: ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ
Team Udayavani, Apr 28, 2019, 3:41 PM IST
ಹೊಸದಿಲ್ಲಿ; ಐಪಿಎಲ್ 2019 ನೇ ಆವೃತ್ತಿಯ ಸೂಪರ್ ಸಂಡೆ ಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಈ ಆವೃತ್ತಿಯ 46ನೇ ಪಂದ್ಯವಾದ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ದೆಹಲಿಯ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ಸೆಣಸಲಿವೆ.
ಅಂಕಪಟ್ಟಿಯಲ್ಲಿ ಡೆಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಕೊನೆಯ ತಂಡವಾಗಿದೆ. ಹೀಗಾಗಿ ಪ್ಲೇ ಆಫ್ ಗೆ ಪ್ರವೇಶ ಮಾಡಬೇಕಾದರೆ ಆರ್ ಸಿಬಿ ಗೆ ಈ ಪಂದ್ಯ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.
ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಪಾರ್ಥಿವ್ ಪಟೇಲ್ , ವಿರಾಟ್ ಕೊಹ್ಲಿ, ಡಿವಿಲಿಯರ್ಸ್, ಮಾರ್ಕಸ್ ಸ್ಟೋಯಿನ್ಸ್ , ಹೆನ್ರಿಕ್ ಕ್ಲಾಸನ್, ಶಿವಂ ದುಬೆ, ಗುರಕೀರತ್ ಸಿಂಗ್ ಮನ್ , ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಉಮೇಶ್ ಯಾದವ್, ಯುಜುವೇಂದ್ರ ಚಾಹಲ್.
ಡೆಲ್ಲಿ ಕ್ಯಾಪಿಟಲ್ಸ್: ಪ್ರಥ್ವಿ ಶಾ , ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ , ಶೆರ್ಫಾನ್ ರುಥೇರ್ಫೊರ್ಡ್ , ಕಾಲಿನ್ ಇಂಗ್ರಾಮ್, ಅಕ್ಷರ್ ಪಟೇಲ್, ಕಗಿಸೊ ರಾಬಾಡಾ , ಸಂದೀಪ್ ಲ್ಯಾಮಿಚನೆ , ಅಮಿತ್ ಮಿಶ್ರಾ , ಇಶಾಂತ್ ಶರ್ಮಾ .
A look at the Playing XI for #DCvRCB
Live – https://t.co/C7JiQnn3ob pic.twitter.com/vMwbHQeKnC
— IndianPremierLeague (@IPL) April 28, 2019