ದಂತ ಚಿಕಿತ್ಸೆ: ನಾವೇನು ಮುನ್ನೆಚ್ಚರಿಕೆ ವಹಿಸಬೇಕು?

ಬದುಕು ಬದಲಾಗಿದೆ ನಾವೂ ಬದಲಾಗೋಣ

Team Udayavani, Jun 4, 2020, 5:43 AM IST

ದಂತ ಚಿಕಿತ್ಸೆ: ನಾವೇನು ಮುನ್ನೆಚ್ಚರಿಕೆ ವಹಿಸಬೇಕು?

ಸಾಂದರ್ಭಿಕ ಚಿತ್ರ...

ಹಲ್ಲಿನ ಸಮಸ್ಯೆಯನ್ನು ದೀರ್ಘ‌ ಸಮಯ ತಡೆದಿಟ್ಟುಕೊಳ್ಳುವುದು ಕಷ್ಟಸಾಧ್ಯ. ಕೆಲವು ದಿನಗಳ ಕಾಲ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೂ ಅನಂತರ ಅದಕ್ಕೊಂದು ಶಾಶ್ವತ ಪರಿಹಾರ ಅಗತ್ಯವೇ ಆಗಿರುತ್ತದೆ.

ಕೋವಿಡ್ -19 ದಿಂದಾಗಿ ಸುದೀರ್ಘ‌ ಸಮಯ ಬಂದ್‌ ಆಗಿದ್ದ ದಂತ ಚಿಕಿತ್ಸಾಲಯಗಳು ಈಗ ಬಾಗಿಲು ತೆರೆದಿವೆ. ಸರಕಾರ ಸೂಚಿಸಿದ ನಿರ್ದಿಷ್ಟ ಮಾರ್ಗಸೂಚಿಯಂತೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ವಿವಿಧ ರೀತಿಯ ನಿಬಂಧನೆಗಳನ್ನು ಪಾಲಿಸುವುದು ನಮ್ಮ ಕರ್ತವ್ಯವೂ ಆಗಿದೆ.

ಚಿಕಿತ್ಸಾಲಯಗಳಲ್ಲಿ ಜನಸಂದಣಿ ಆಗದಂತೆ ನಾವು ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು. ಯಾವ ಯಾವ ರೀತಿಯ ಮುಂಜಾಗ್ರತೆಗಳನ್ನು ನಾವು ತೆಗೆದುಕೊಳ್ಳಬೇಕು. ತುರ್ತಾಗಿ ಯಾವ ರೀತಿಯ ಸಮಸ್ಯೆಗಳಿಗೆ ಆದ್ಯತೆ ನೀಡಿ ಚಿಕಿತ್ಸೆಗೆ ತೆರಳಬೇಕು ಎಂಬೆಲ್ಲ ಮಾಹಿತಿಗಳು ಇಲ್ಲಿವೆ.

ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗಳು ಆಗಾಗ ಕಾಣಿಸುವುದು ಸಾಮಾನ್ಯ. ಅದನ್ನು ಹಾಗೇ ಬಿಟ್ಟುಬಿಡುವುದು ಅಸಾಧ್ಯ. ಕೋವಿಡ್ -19 ಸಂದರ್ಭದಲ್ಲಿ ದಂತ ಚಿಕಿತ್ಸಾ ಕೇಂದ್ರಕ್ಕೆ ಹೋಗುವಾಗ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ನಾವು ತೆಗೆದುಕೊಳ್ಳಬೇಕು ಎಂದು ನೋಡೋಣ ಬನ್ನಿ.

ಹಲ್ಲು ನೋವಿದ್ದರೆ ಔಷಧ ಪಡೆಯಲು ಅಥವಾ ಹಲ್ಲು ಕೀಳಿಸಲು ದಂತ ವೈದ್ಯಕೀಯ ಆಸ್ಪತ್ರೆಗೆ ಹೋದಾಗ ಮಾಸ್ಕ್, ಗ್ಲೌಸ್‌ ಧರಿಸುವುದು, ಸ್ಯಾನಿಟೈಸರ್‌ ಬಳಸುವುದು, ಸಾಮಾಜಿಕ ಅಂತರವನ್ನು ಕಾಪಾಡುವುದನ್ನು ಕಿಂಚಿತ್ತೂ ಮರೆಯದಿರಿ.

ದಂತ ವೈದ್ಯರಲ್ಲಿಗೆ ತೆರಳುವ ಮೊದಲೇ ಫೋನ್‌ ಮಾಡಿ ಸಮಯ ನಿಗದಿಪಡಿಸಿ. ಯಾಕೆಂದರೆ ಒಬ್ಬರಿಗೆ ಚಿಕಿತ್ಸೆ ನೀಡಿದ ಬಳಿಕ ಚಿಕಿತ್ಸಾ ಕೊಠಡಿಯನ್ನು ಸ್ಯಾನಿಟೈಸರ್‌ ಮತ್ತು ಇತರ ಸ್ವತ್ಛತಾ ದ್ರಾವಣ ಬಳಸಿ ಶುಚಿಗೊಳಿಸಲು ಸಮಯ ಬೇಕಾಗುವುದು. ಇದರಿಂದ ಹೊರಗಡೆ ತುಂಬಾ ಹೊತ್ತು ಕಾಯುವುದನ್ನು ತಪ್ಪಿಸಬಹುದು.

ದಂತ ವೈದ್ಯರು ತಿಳಿಸುವ ಮುನ್ನೆಚ್ಚರಿಕೆ, ಸಲಹೆ, ಮಾರ್ಗದರ್ಶನಗಳನ್ನು ತಪ್ಪದೆ ಪಾಲಿಸಿ. ವೈದ್ಯರು ತಿಳಿಸಿದಂತೆ ಒಂದೇ ಭೇಟಿಯಲ್ಲಿ ಚಿಕಿತ್ಸೆಗೆ ಸಂಬಂಧಿಸಿ ಸಾಧ್ಯವಾದಷ್ಟು ಕೆಲಸಗಳನ್ನು ಮುಗಿಸಿ. ಸಮಯ ಇಲ್ಲ. ಮತ್ತೂಮ್ಮೆ ಬರುತ್ತೇನೆ ಎಂಬುದಕ್ಕೆ ಇದು ಸರಿಯಾದ ಸಮಯವಲ್ಲ.

“ಟೆಲಿಮೆಡಿಸಿನ್‌’ ಮೂಲಕವೂ ಸಣ್ಣಪುಟ್ಟ ಸಮಸ್ಯೆಗಳಿಗೆ ಮಾಹಿತಿ ಪಡೆಯಬಹುದು. ರೋಗಿಗಳು ವೈದ್ಯರಿಗೆ ಫೋನ್‌ ಕಾಲ್‌, ಇ-ಮೇಲ್‌, ವಾಟ್ಸ್‌ಆ್ಯಪ್‌ ಇತ್ಯಾದಿಗಳ ಮೂಲಕ ಸಮಸ್ಯೆ ತಿಳಿಸಿದರೆ ಔಷಧಗಳ ಹೆಸರನ್ನು ಸೂಚಿಸುತ್ತಾರೆ. ಹಲ್ಲು ಅಂದಗೊಳಿಸುವುದು ಸಹಿತ ಯಾವುದಕ್ಕೂ ಸ್ವಯಂ ಚಿಕಿತ್ಸೆ ಸರಿಯಾದ ಕ್ರಮವಲ್ಲ.

ಹಲ್ಲು ಕಟ್ಟಿಸುವುದು, ಸರಿಗೆ ಹಾಕುವುದು ಇತ್ಯಾದಿ ಚಿಕಿತ್ಸೆಗಳನ್ನೂ ಸ್ವಲ್ಪ ಸಮಯ ಮುಂದೂಡುವುದು ಉತ್ತಮ. 6 ತಿಂಗಳುಗಳಿಗೊಮ್ಮೆ ನಡೆಸುವ ದಂತ ತಪಾಸಣೆ (ರುಟೀನ್‌ ಚೆಕಪ್‌) ಇತ್ಯಾದಿಗಳ ಬಗ್ಗೆ ವೈದ್ಯರನ್ನು ಫೋನ್‌ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದು ಮುಂದುವರಿಯುವುದು ಉತ್ತಮ.

ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಬಳಿಕ ಅಂಗಡಿ, ಮಾರುಕಟ್ಟೆಗೆ ತೆರಳದೆ ನೇರವಾಗಿ ಮನೆಗೆ ಬಂದು ಸ್ಯಾನಿಟೈಸರ್‌ ಅಥವಾ ಸೋಪ್‌ ಬಳಸಿ ಚೆನ್ನಾಗಿ ಕೈಯನ್ನು ಸ್ವತ್ಛಗೊಳಿಸಿ. ಬಟ್ಟೆಯನ್ನು ಡಿಟರ್ಜೆಂಟ್‌ ಬಳಸಿ ವಾಶ್‌ ಮಾಡಿ. ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ.

ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್‌ ಮಾಡಿ.- 9148594259

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.