Udayavni Special

ದುರಂತಕ್ಕೆ ಕಾರಣವಾದ ಕೋಳಿ ಸಾಕಣೆ ಕೇಂದ್ರ ರದ್ದತಿಗೆ ನಿರ್ಣಯ

Team Udayavani, Mar 6, 2021, 4:30 AM IST

ದುರಂತಕ್ಕೆ ಕಾರಣವಾದ ಕೋಳಿ ಸಾಕಣೆ ಕೇಂದ್ರ ರದ್ದತಿಗೆ ನಿರ್ಣಯ

ಪಾಣಾಜೆ: ಇಲ್ಲಿನ ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷೆ ಭಾರತಿ ಭಟ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ಗ್ರಾಮದ ಕಡಮಾಜೆ ಖಾಸಗಿ ಸ್ಥಳದಲ್ಲಿ ಮಾ. 4ರಂದು ನಡೆದ ದುರಂತಕ್ಕೆ ಕಾರಣ ವಾದ ಕೋಳಿ ಸಾಕಣೆಯ ಕೇಂದ್ರವನ್ನು ರದ್ದು ಪಡಿಸಲು ಸಭೆಯು ಸರ್ವಾನು ಮತದಿಂದ ನಿರ್ಣಯ ಕೈಗೊಂಡಿದೆ.

ಪಿಡಿಒ ಚಂದ್ರಮತಿ ಮಾಹಿತಿ ನೀಡಿ ಕಳೆದ 2 ವರ್ಷಗಳಿಂದ ದುರಂತಕ್ಕೆ ಕಾರಣವಾದ ಕೋಳಿ ಸಾಕಣೆ ಕೇಂದ್ರವು ಪರವಾನಿಗೆ ನವೀಕರಣಗೊಳಿಸಿಲ್ಲ.

ಫೋನ್‌ ಮೂಲಕ ನವೀಕರಣ ಗೊಳಿಸುವಂತೆ ವಿನಂತಿಸಲಾಗಿದೆ. ಯಾವುದೇ ಸ್ಪಂದನೆ ನೀಡಿರಲಿಲ್ಲ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತಿ ಇದ್ದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಇಡೀ ಪರಿಸರ ದುರ್ವಾಸನೆ ಬೀರಿದೆ. ನೊಣಗಳು ಸುತ್ತಲಿನ ಪರಿಸರದಲ್ಲಿ ಹಾರಾಡುತ್ತಿದೆ. ಗ್ರಾಮದಲ್ಲಿರುವ ಕೋಳಿ ಸಾಕಣೆ ಕೇಂದ್ರಗಳಿಗೆ ನೊಟೀಸ್‌ ನೀಡಿ ಕೋಳಿ ತ್ಯಾಜ್ಯ ವಿಲೇವಾರಿ ನಿರ್ವಹಣೆಗಳ ಮಾಹಿತಿ ಪಡೆದು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಕೋಳಿ ತ್ಯಾಜ್ಯದ ವಿಲೇವಾರಿಗೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.
ಮನೆಗಳು ಇರುವಲ್ಲಿ ಕೋಳಿ ತ್ಯಾಜ್ಯದ ವಿಲೇವಾರಿಗೆ ಅವಕಾಶ ನೀಡಬಾರದು ಎಂದು ಸದಸ್ಯ ನಾರಾಯಣ ನಾಯಕ್‌ ಆಗ್ರಹಿಸಿದರು. ಎಲ್ಲ ಕೋಳಿ ಸಾಕಣೆ ಕೇಂದ್ರ ಗಳಿಗೆ ನೋಟಿಸ್‌ ಜಾರಿ ಮಾಡಿ ಕೋಳಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಕೈ ಗೊಂಡ ಕ್ರಮಗಳನ್ನು ಪಂಚಾಯತ್‌ಗೆ ತಿಳಿಸುವಂತೆ ಸಭೆಯಲ್ಲಿ ನಿರ್ಣಯಿ ಸಲಾಯಿತು.

ಪಾಣಾಜೆ ಗ್ರಾಮ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.
ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಜ್ಯೋತಿ ಕೋವಿಡ್‌ 19 ಲಸಿಕೆಯ ಬಗ್ಗೆ ಮಾಹಿತಿ ನೀಡಿದರು. ಪಾಣಾಜೆ ಪಶು ಚಿಕಿತ್ಸಾ ಕೇಂದ್ರದ ಜಾನುವಾರು ಅಧಿಕಾರಿ ಪುಷ್ಪರಾಜ್‌ ಶೆಟ್ಟಿ ಇಲಾಖೆಯ ಮಾಹಿತಿ ನೀಡಿದರು. ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ, ಗ್ರಾ.ಪಂ. ಉಪಾಧ್ಯಕ್ಷ ಅಬೂಬಕರ್‌ ಸದಸ್ಯರು ಉಪಸ್ಥಿತರಿದ್ದರು.
ಗ್ರಾ.ಪಂ. ಸಿಬಂದಿ ವಿಶ್ವನಾಥ, ಅರುಣ ಕಲಾಪದಲ್ಲಿ ಸಹಕರಿಸಿದರು.

ಜಲ ಜೀವನ್‌ ಪ್ರತೀ ಮನೆಗೆ ತಲುಪಿಸಿ
ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಲಹೆ ನೀಡಿ ಜಲ ಜೀವನ್‌ ಯೋಜನೆಯಡಿಯಲ್ಲಿ ಪಂಚಾಯತ್‌ ವ್ಯಾಪ್ತಿಯ ಪ್ರತೀ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ 2023-24ರಲ್ಲಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಮಾಡ ಲಾಗಿದೆ. ಪ್ರತೀ ಸದಸ್ಯರು ಪ್ರತೀ ಮನೆಗೆ ಈ ಯೋಜನೆಯನ್ನು ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಟಾಪ್ ನ್ಯೂಸ್

women’s ipl

ಈ ಬಾರಿಯ ಮಹಿಳಾ ಐಪಿಎಲ್ ಗೆ ಮೂರು ತಂಡಗಳು ಮಾತ್ರ!

ವರನಟನ ಸ್ಮರಿಸಿದ ಅಭಿಮಾನಿಗಳು

ವರನಟನ ಸ್ಮರಿಸಿದ ಅಭಿಮಾನಿಗಳು

ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ

ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಟ್ಲ: ಎರಡು ಬೈಕ್ ಗಳಿಗೆ ಢಿಕ್ಕಿ ಹೊಡೆದ ಕಾರು; ಓರ್ವನಿಗೆ ಗಾಯ

ವಿಟ್ಲ: ಎರಡು ಬೈಕ್ ಗಳಿಗೆ ಢಿಕ್ಕಿ ಹೊಡೆದ ಕಾರು; ಓರ್ವನಿಗೆ ಗಾಯ

ಬಂಟ್ವಾಳ: ಗಾಳಿ ಮಳೆಗೆ ಹಲವೆಡೆ ಹಾನಿ

ಬಂಟ್ವಾಳ: ಗಾಳಿ ಮಳೆಗೆ ಹಲವೆಡೆ ಹಾನಿ

ಶಿಶಿಲ ದೇವರ ಮೀನಿಗೂ ಕಾಡಲಿದೆಯೇ ಜಲಕ್ಷಾಮ?

ಶಿಶಿಲ ದೇವರ ಮೀನಿಗೂ ಕಾಡಲಿದೆಯೇ ಜಲಕ್ಷಾಮ?

ಪುತ್ತೂರು ಸಂತೆ ಇಂದು ಪುನರಾರಂಭ :  ವರ್ಷದ ಬಳಿಕ ವಹಿವಾಟು

ಪುತ್ತೂರು ಸಂತೆ ಇಂದು ಪುನರಾರಂಭ :  ವರ್ಷದ ಬಳಿಕ ವಹಿವಾಟು

ಪೊಳಲಿ: ಸರಳ ಜಾತ್ರೆ ; ರಥೋತ್ಸವ ಸಂಪನ್ನ

ಪೊಳಲಿ: ಸರಳ ಜಾತ್ರೆ ; ರಥೋತ್ಸವ ಸಂಪನ್ನ

MUST WATCH

udayavani youtube

Kanchipuram ಸೀರೆಗಳ ನಿಮ್ಮ Favorite Spot

udayavani youtube

ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ

udayavani youtube

ಸಾವಿರ ಮಂದಿಗೆ ಕೇವಲ 2 ಫ್ಯಾನ್!

udayavani youtube

ಸಾರಿಗೆ ನೌಕರರ ಕುಟುಂಬದ ಸದಸ್ಯರಿಂದ ತಟ್ಟೆ, ಲೋಟ ಪ್ರತಿಭಟನೆ

udayavani youtube

ಇಲ್ಲಿ ಮನುಷ್ಯರಂತೆ ಕೋಣಗಳಿಗೂ ಇದೆ Swimming Pool

ಹೊಸ ಸೇರ್ಪಡೆ

women’s ipl

ಈ ಬಾರಿಯ ಮಹಿಳಾ ಐಪಿಎಲ್ ಗೆ ಮೂರು ತಂಡಗಳು ಮಾತ್ರ!

ವರನಟನ ಸ್ಮರಿಸಿದ ಅಭಿಮಾನಿಗಳು

ವರನಟನ ಸ್ಮರಿಸಿದ ಅಭಿಮಾನಿಗಳು

ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ

ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.