ಜೆಡ್ಎಸ್ಐಗೆ ಮೊದಲ ಮಹಿಳಾ ನಿರ್ದೇಶಕಿ
Team Udayavani, Aug 5, 2021, 10:30 PM IST
ಕೋಲ್ಕತ: ಭಾರತದ ಪ್ರಾಣಿಶಾಸ್ತ್ರ ಸಮೀಕ್ಷೆ ಸಂಸ್ಥೆಯ (ಜೆಡ್ಎಸ್ಐ) ನಿರ್ದೇಶಕಿಯಾಗಿ ವಿಜ್ಞಾನಿ ಡಾ. ಧೃತಿ ಬ್ಯಾನರ್ಜಿ ಆಯ್ಕೆಯಾಗಿದ್ದಾರೆ.
105 ವರ್ಷಗಳ ಇತಿಹಾಸವಿರುವ ಜೆಡ್ಎಸ್ಐಗೆ ಇದೇ ಮೊದಲ ಬಾರಿಗೆ ಮಹಿಳೆ ಅತ್ಯುನ್ನತ ಹುದ್ದೆಗೆ ಏರಿದ್ದಾರೆ. ನೇಮಕಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಅತ್ಯುನ್ನತ ಹುದ್ದೆಗೆ ಧೃತಿ ಅವರ ಹೆಸರು ಶಿಫಾರಸು ಮಾಡಿತ್ತು.
2012ರಿಂದ ಜೆಡ್ಎಸ್ಐನ ಡಿಜಿಟಲ್ ಅನುಕ್ರಮ ಮಾಹಿತಿ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ದೃತಿ. 1916ರಲ್ಲಿ ಸ್ಥಾಪಿತವಾದ ಸಂಸ್ಥೆಯಲ್ಲಿ 3 ದಶಕಗಳವರೆಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗಿರಲಿಲ್ಲ. 1949ರಲ್ಲಿ ಮೀರಾ ಮನ್ಸುಹಾನಿ ಅವರನ್ನು ಮೊದಲ ಮಹಿಳಾ ಸಿಬ್ಬಂದಿಯಾಗಿ ನೇಮಕವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್