ದಿಡುಪೆ ಕಡಮಗುಂಡಿ: ಹೆಚ್ಚುತ್ತಿರುವ ಪ್ರವಾಸಿಗರು

ಅಕ್ರಮ ಪ್ರವೇಶ, ಸ್ಥಳೀಯರಲ್ಲಿ ಆತಂಕ

Team Udayavani, Jul 3, 2020, 6:22 AM IST

ದಿಡುಪೆ ಕಡಮಗುಂಡಿ: ಹೆಚ್ಚುತ್ತಿರುವ ಪ್ರವಾಸಿಗರು

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ದಂಚಿನಲ್ಲಿರುವ ದಿಡುಪೆ ಕಡಮಗುಂಡಿ ಪ್ರದೇಶದಲ್ಲಿ ಪ್ರವಾಸಿಗರ ಕಿರಿಕಿರಿ ಅತಿಯಾಗಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಸರಕಾರ ಲಾಕ್‌ಡೌನ್‌ ಸಡಿಲಿಸಿದ ಬಳಿಕ ಬೆಂಗಳೂರು, ಮೈಸೂರು, ರಾಮನಗರ ಸಹಿತ ವಿವಿಧೆಡೆಗಳಿಂದ ಪ್ರವಾಸಿಗರು ಬರುತ್ತಿದ್ದು, ಕೆಲವರು ಜಲಪಾತಕ್ಕೆ ತೆರಳದೆ ಪರಿಸರದ ಗದ್ದೆ ತೋಟಗಳಲ್ಲೇ ಮಜಾ ಮಾಡುತ್ತಿರುತ್ತಾರೆ.

ಮತ್ತೆ ಕೆಲವರು ಅಧಿಕೃತ ದಾರಿಯಲ್ಲಿ ತೆರಳದೆ ಸಿಕ್ಕಸಿಕ್ಕಲ್ಲಿ ಖಾಸಗಿ ಜಾಗದ ಮೂಲಕ ತೆರಳುತ್ತಿದ್ದಾರೆ. ಅಧಿಕೃತ ದಾರಿ ಮೂಲಕ ತೆರಳುವಾಗ ಪ್ಲಾಸ್ಟಿಕ್‌, ಮದ್ಯ ಮುಂತಾದವುಗಳನ್ನು ಕೊಂಡೊಯ್ಯಲು ಅಸಾಧ್ಯವಾದ ಕಾರಣ ಕಳ್ಳದಾರಿಯನ್ನು ಬಳಸುತ್ತಿದ್ದಾರೆ.

ಮದ್ಯಪಾನ ಮಾಡಿ ಮಾಂಸಾಹಾರ ಸೇವಿಸುವ ಬಹು ತೇಕರು ತಾವು ಬಳಸಿದ ಪ್ಲಾಸ್ಟಿಕ್‌ಗಳನ್ನು ಖಾಸಗಿ ಜಾಗದಲ್ಲೇ ಎಸೆದು ಹೋಗುತ್ತಿದ್ದಾರೆ. ಜಲಪಾತ ಪ್ರದೇಶದಲ್ಲಿ 15, 20 ಮನೆಗಳಿವೆ.ಇವರು ಈ ಜಲಪಾತದ ನೀರನ್ನೇ ಅವಲಂಬಿತರಾಗಿದ್ದು, ಅದನ್ನು ಪ್ರವಾಸಿಗರು ಕಲುಷಿತ ಗೊಳಿಸುತ್ತಿದ್ದಾರೆ.ಈ ಜಲಪಾತಕ್ಕೆ ಕಜಕೆ ಶಾಲೆ ಮೂಲಕ ಹಾಗೂ ಕುಮೇರು ರಸ್ತೆ, ಅಡ್ಕ-ಆನಡ್ಕ ರಸ್ತೆಯಾಗಿಯೂ ತೆರಳಬಹುದು. ಇವುಗಳ ಹೊರತಾಗಿಯೂ ಕೆಲವರು ಅಕ್ರಮವಾಗಿ ಹೋಮ್‌ ಸ್ಟೇ ನಡೆಸುವವರ ಸಹಾಯ ಪಡೆದು ಖಾಸಗಿ ರಸ್ತೆಯಾಗಿಯೂ ಬರುತ್ತಿದ್ದಾರೆ.

ವನ್ಯಜೀವಿ ವಲಯ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಸಿಬಂದಿ ನೇಮಿಸಿ ಪ್ರತಿಯೊಬ್ಬರಿಗೆ 20 ರೂ. ಶುಲ್ಕ ಪಡೆದು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಜಲಪಾತವು ವನ್ಯಜೀವಿ ವಿಭಾಗದ ಸುಪರ್ದಿಯಲ್ಲಿದೆ ಎಂದು ಸ್ಥಳೀಯಾಡಳಿತ ಕೈಕಟ್ಟಿ ಕುಳಿತಿದೆ.

ಅಕ್ರಮ ಹೋಂ ಸ್ಟೇಗಳ ಕುಮ್ಮಕ್ಕು?
ಈ ಪರಿಸರದಲ್ಲಿ ಕೆಲವು ಅನಧಿಕೃತ ಹೋಂ ಸ್ಟೇಗಳಿವೆ ಎಂದೂ ಸ್ಥಳೀಯರು ದೂರುತ್ತಿದ್ದಾರೆ. ಪ್ರವಾಸಿಗರ ದುಷ್ಕೃತ್ಯಕ್ಕೆ ಇವುಗಳ ಕುಮ್ಮಕ್ಕು ಇದೆ ಎಂದೂ ಆರೋಪಿಸುತ್ತಿರುವ ಸ್ಥಳೀಯರು, ಅನಧಿಕೃತ ಹೋಂ ಸ್ಟೇಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಎರ್ಮಾಯಿ ಫಾಲ್ಸ್‌ ಪರಿಸರದಲ್ಲೂ ಆತಂಕ
ಮಲವಂತಿಗೆ ಗ್ರಾಮದ ಎರ್ಮಾಯಿ, ಎಳನೀರು ಜಲಪಾತಗಳಲ್ಲೂ ಪ್ರವಾಸಿಗರು ಹೆಚ್ಚುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ. ಇಲ್ಲಿನ ಮೂರು ಜಲಪಾತಗಳಿಗೆ ಪಂಚಾ ಯತ್‌ ಪ್ರವೇಶ ನಿಷೇಧಿಸಿದ್ದರೂ, ಜನರು ಬರುತ್ತಿದ್ದಾರೆ. ಇಲ್ಲಿ ಪ್ರವೇಶ ನಿಷೇಧದ ಕುರಿತು ಫಲಕ ಹಾಕಲಾಗಿದೆಯೇ ಹೊರತು, ಸಿಬಂದಿ ಇಲ್ಲದಿರುವುದು ಪ್ರವಾಸಿಗರಿಗೆ ವರದಾನವಾಗಿದೆ. ಜಲಪಾತಗಳಿಗೆ ಬರುವ ಪ್ರವಾಸಿಗರು ಸ್ಥಳೀಯರ ಮನೆಗಳ ಮೇಲೆ ಕಲ್ಲು, ಬಾಟಲಿ ಗಳನ್ನು ಎಸೆದು ದಾಂಧಲೆ ಎಬ್ಬಿಸುತ್ತಿದ್ದು, ಪ್ರಶ್ನಿಸಿದರೆ ಉಡಾಫೆಯಿಂದ ವರ್ತಿಸುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಿಬಂದಿಗೆ ಸೂಚನೆ
ಲಾಕ್‌ಡೌನ್‌ ಸಡಿಲಿಸಿರುವುದರಿಂದ ಸರಕಾರದ ಸೂಚನೆಯಂತೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸ ಲಾಗು ತ್ತಿದೆ. ಅಕ್ರಮ ಪ್ರವೇಶದ ಬಗ್ಗೆ ನಿಗಾ ವಹಿಸಿ ಕ್ರಮ ಕೈಗೊಳ್ಳುವಂತೆ ಅರಣ್ಯ ಸಿಬಂದಿಗೆ ಸೂಚಿಸಲಾಗಿದೆ.
-ಮಂಜುನಾಥ್‌, ವಲಯ ಅರಣ್ಯಾಧಿಕಾರಿ, ವನ್ಯಜೀವಿ ವಲಯ, ಬೆಳ್ತಂಗಡಿ

ಕ್ರಮ ಕೈಗೊಳ್ಳಬೇಕು
ಕಡಮಗುಂಡಿ ಜಲಪಾತಕ್ಕೆ ಪ್ರತಿದಿನ 100ರಿಂದ 200 ಮಂದಿ ಬರುತ್ತಿದ್ದಾರೆ. ಗದ್ದೆ, ತೋಟಗಳಿಗೆ ಹಾನಿ ಯಾಗುತ್ತಿದೆ. ಮದ್ಯದ ಬಾಟಲ್‌, ಪ್ಲಾಸ್ಟಿಕ್‌ಗಳು ಪತ್ತೆ ಯಾಗುತ್ತಿವೆ. ಗಾಂಜಾ ಚಟುವಟಿಕೆ ನಡೆಯುತ್ತಿರುವ ಶಂಕೆ ಮೂಡಿದೆ. ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ.
ವೆಂಕಟೇಶ್‌ ಪ್ರಸಾದ್‌, ಗ್ರಾಮಸ್ಥರು, ದಿಡುಪೆ

ಸಾರ್ವಜನಿಕ ಪ್ರವೇಶ ನಿಷೇಧ
ಕಡಮಗುಂಡಿ ಜಲಪಾತ ನಮ್ಮ ಸುಪರ್ದಿಗೆ ಬರುತ್ತಿಲ್ಲ. ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಕ್ರಮ ವಾಗಿ ನಮ್ಮ ಗ್ರಾ.ಪಂ. ವತಿಯಿಂದ ಇತರ ಮೂರು ಜಲ ಪಾತಗಳಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಕಡ ಮಗುಂಡಿ ಬಗ್ಗೆ ವನ್ಯಜೀವಿ ವಿಭಾಗದ ಅಧಿಕಾರಿಗಳಿಗೆ ವರದಿ ನೀಡಿದ್ದು, ಕ್ರಮ ಕೈಗೊಳ್ಳಲು ಕೋರ ಲಾಗಿದೆ.
-ರಶ್ಮಿ ಬಿ.ಪಿ., ಪಿಡಿಒ,ಮಲವಂತಿಗೆ ಗ್ರಾ.ಪಂ.

ಟಾಪ್ ನ್ಯೂಸ್

ಮಳೆ: ಅಂಗಳದಲ್ಲಿ ಈಜಾಡಿದ ಶಕಿಬ್‌!

ಮಳೆ: ಅಂಗಳದಲ್ಲಿ ಈಜಾಡಿದ ಶಕಿಬ್‌!

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

ದೇಶೀಯ ಡ್ರೋನ್‌ ತಂತ್ರಜ್ಞಾನ ಶೀಘ್ರ: ಗೃಹ ಸಚಿವ ಅಮಿತ್‌ ಶಾ ಘೋಷಣೆ

ದೇಶೀಯ ಡ್ರೋನ್‌ ತಂತ್ರಜ್ಞಾನ ಶೀಘ್ರ: ಗೃಹ ಸಚಿವ ಅಮಿತ್‌ ಶಾ ಘೋಷಣೆ

ಏಳು ಶ್ವೇತ ವರ್ಣದ ಕುದುರೆ ಜತೆಗೆ ವಿಕ್ಕಿ ಕೌಶಲ್‌ ಬಾರಾತ್‌

ಕತ್ರೀನಾ – ವಿಕ್ಕಿ ಕೌಶಲ್‌ ವಿವಾಹ :7 ಶ್ವೇತ ವರ್ಣದ ಕುದುರೆ ಜತೆಗೆ ವಿಕ್ಕಿ ಕೌಶಲ್‌ ಬಾರಾತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19army

ಸೇನೆಯಿಂದ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ  ಭಾಸ್ಕರ ಕಾರಿಂಜರಿಗೆ ಸನ್ಮಾನ

15-crocodile

ಬೆಳ್ತಂಗಡಿ: ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ ರಕ್ಷಣೆ

9Crocodile

ಕಾನರ್ಪ ಕುದೂರು ಸಮೀಪ ಮೊಸಳೆ ಪ್ರತ್ಯಕ್ಷ

ಪುತ್ತೂರು ದೇಗುಲ: ಲಕ್ಷದೀಪೋತ್ಸವ

ಪುತ್ತೂರು ದೇಗುಲ: ಲಕ್ಷದೀಪೋತ್ಸವ

2accident

ಅರಂತೋಡು: ಟೆಂಪೊ ಟ್ರಾವೆಲರ್ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

ಮಳೆ: ಅಂಗಳದಲ್ಲಿ ಈಜಾಡಿದ ಶಕಿಬ್‌!

ಮಳೆ: ಅಂಗಳದಲ್ಲಿ ಈಜಾಡಿದ ಶಕಿಬ್‌!

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.