ಡಿಪ್ಲೊಮಾ ಸೀಟು: ಸೌಕರ್ಯದ ಕತ್ತರಿ

Team Udayavani, Apr 21, 2019, 6:30 AM IST

ಬೆಂಗಳೂರು: ಪಿಯುಸಿ ಅಥವಾ ಎಸೆಸೆಲ್ಸಿ ಅನಂತರ ಡಿಪ್ಲೊಮಾ ಮೊದಲಾದ ಕೋರ್ಸ್‌ಗಳಿಗೆ ಸೇರಲು ತುದಿಗಾಲಿನಲ್ಲಿ ನಿಂತಿರುವ ಸುಮಾರು 30ರಿಂದ 40 ಸಾವಿರ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ.

2019-20ನೇ ಸಾಲಿಗೆ ರಾಜ್ಯದ ಎಲ್ಲ ಎಂಜಿನಿಯರಿಂಗ್‌ ಮತ್ತು ಡಿಪ್ಲೊಮಾ ಕಾಲೇಜುಗಳು ಕಡ್ಡಾಯವಾಗಿ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ (ಎಐಸಿಟಿಇ) ಅನುಮತಿ ಪಡೆಯಬೇಕು. ಈ ಹಿನ್ನೆಲೆಯಲ್ಲಿ ಎಐಸಿಟಿಇ ತಂಡ ಈಗಾಗಲೇ ಕಾಲೇಜುಗಳಿಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದ್ದು ಎ. 27ಕ್ಕೆ ವರದಿಯನ್ನು ರಾಜ್ಯಕ್ಕೆ ಸಲ್ಲಿಸಲಿದೆ.

ಮೌಲಸೌಕರ್ಯ ಇಲ್ಲದಿರುವ ಕಾಲೇಜು ಅಥವಾ ಕೋರ್ಸ್‌ ರದ್ದಾಗುವ ಸಾಧ್ಯತೆ ಇದೆ. ಸರಕಾರಿ ಕಾಲೇಜುಗಳು 25ರಿಂದ 30 ವರ್ಷದ ಹಿಂದೆ ಸ್ಥಾಪನೆಯಾಗಿರುವುದರಿಂದ ಪ್ರಯೋಗಾಲಯ ಸಹಿತ ಅನೇಕ ಸೌಲಭ್ಯಗಳ ಕೊರತೆ ಇರಬಹುದು. ಈ ಹಿನ್ನೆಲೆ ಯಲ್ಲಿ ಸರಕಾರಿ ತಾಂತ್ರಿಕ ಸಂಸ್ಥೆಗಳಿಗೆ ಕಂಟಕ ಎದು ರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 70 ಸರಕಾರಿ ಪಾಲಿಟೆಕ್ನಿಕ್‌, 8 ಸರಕಾರಿ ಮಹಿಳಾ ಪಾಲಿಟೆಕ್ನಿಕ್‌, ಎರಡು ಸಂಧ್ಯಾ ಪಾಲಿಟೆಕ್ನಿಕ್‌, 42 ಅನುದಾನಿತ ಮತ್ತು 142 ಖಾಸಗಿ ಪಾಲಿಟೆಕ್ನಿಕ್‌ಗಳಿವೆ. 82 ಸರಕಾರಿ ಡಿಪ್ಲೊಮಾ ಕಾಲೇಜು, 174 ಖಾಸಗಿ ಡಿಪ್ಲೊಮಾ ಹಾಗೂ 44 ಅನುದಾನಿತ ಕಾಲೇಜುಗಳಿವೆ.

ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಮಂದಿ ತಾಂತ್ರಿಕ ಸಂಸ್ಥೆಗಳಲ್ಲಿ ಕಲಿಯುತ್ತಿದ್ದು ಎಸೆಸೆಲ್ಸಿ , ಪಿಯುಸಿ ಉತ್ತೀರ್ಣರಾದವರು ಪಾಲಿಟೆಕ್ನಿಕ್‌ ಕಾಲೇಜುಗಳ ಪ್ರವೇಶ ಪಡೆಯುತ್ತಿದ್ದಾರೆ.

ಸರಕಾರಿ
ಕಾಲೇಜುಗಳ ವಿದ್ಯಾರ್ಥಿ ಗಳಿಗೆ ಇನ್ಶೂ ರೆನ್ಸ್‌ ಮಾಡಿಲ್ಲ ಎಂಬ ಅಥವಾ ಇನ್ಯಾವುದೋ ಕ್ಷುಲ್ಲಕ ಕಾರಣಕ್ಕೆ ಎಐಸಿಟಿಇ ಮಾನ್ಯತೆ ರದ್ದತಿಯ ತೀರ್ಮಾನ ತೆಗೆದುಕೊಳ್ಳಬಾರದು. ರಾಜ್ಯದ ಸರಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ ಕಾಲೇಜುಗಳು 50-60 ವರ್ಷದ ಇತಿಹಾಸ ಹೊಂದಿರುವುದರಿಂದ ಕೆಲವು ಕೊರತೆ ಇರಬಹುದು. ಆದರೆ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ವ್ಯವಸ್ಥೆ ನೀಡುತ್ತಿದ್ದೇವೆ. ಎಐಸಿಟಿಇ ಯಿಂದ ವರದಿ ಬಂದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ.
– ಎಚ್‌.ಯು. ತಳವಾರ, ನಿರ್ದೇಶಕ, ತಾಂತ್ರಿಕ ಶಿಕ್ಷಣ ಇಲಾಖೆ

  • ರಾಜು ಖಾರ್ವಿ ಕೊಡೇರಿ

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ