Udayavni Special

ಹೊಸಚಿತ್ರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿರುವ ನಿರ್ದೇಶಕ ನಾಗಶೇಖರ್


Team Udayavani, Jun 2, 2020, 4:10 AM IST

chitra hosa

ಸಂಜು ವೆಡ್ಸ್ ಗೀತಾ, ಮೈನಾ ಮೊದಲಾದ ಮ್ಯೂಸಿಕಲ್ ಹಿಟ್ ಚಿತ್ರಗಳನ್ನು ಕನ್ನಡ ಸಿನಿಪ್ರಿಯರಿಗೆ ಕೊಟ್ಟಿರುವ ನಿರ್ದೇಶಕ ನಾಗಶೇಖರ್. ಕಳೆದ ವರ್ಷ ನಟ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಚೊಚ್ಚಲ ಚಿತ್ರ ಅಮರ್ ಚಿತ್ರಕ್ಕೆ ಆ್ಯಕ್ಷನ್ – ಕಟ್ ಹೇಳಿದ್ದ ನಾಗಶೇಖರ್, ಬಳಿಕ ಕೆಲಕಾಲ ತಮಿಳಿನ ನವೆಂಬರ್ ಮಳೈಯಿಲ್ ನಾನುಂ ಅವಳುಂ ಚಿತ್ರದ ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಶೇಕಡಾ 60ರಷ್ಟು ಚಿತ್ರೀಕರಣ ಮುಗಿಸಿರುವ ನಾಗಶೇಖರ್ ಅಂಡ್ ಟೀಂ ಲಾಕ್ ಡೌನ್ ಮುಗಿಯುತ್ತಿದ್ದಂತೆ ಉಳಿದ ಭಾಗವನ್ನು ಪೂರ್ಣಗೊಳಿಸುವ ಯೋಚನೆಯಲ್ಲಿದೆ.

ಇದರ ನಡುವೆಯೇ ನಾಗಶೇಖರ್ ಸದ್ದಿಲ್ಲದೆ ಮತ್ತೊಂದು ಕನ್ನಡ ಚಿತ್ರವನ್ನು ತೆರೆಮೇಲೆ ತರುವ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಹೊಸಕಥೆ ಸಿದ್ಧಮಾಡಿಕೊಂಡಿರುವ ನಾಗಶೇಖರ್, ನಟ ಡಾರ್ಲಿಂಗ್ ಕೃಷ್ಣ ಜೊತೆ ಹೊಸಚಿತ್ರ ಮಾಡಲು ತಯಾರಾಗಿದ್ದಾರೆ. ಈಗಾಗಲೆ ಸ್ಕ್ರಿಪ್ಟ್ ಕೆಲಸ ಮುಗಿಸಿರುವ ನಾಗಶೇಖರ್ ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಡುವ ಪ್ಲಾನ್ ನಲ್ಲಿದ್ದಾರೆ.

ಇನ್ನು ಈ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೂಡ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈಗಾಗಲೆ ನಾಗಶೇಖರ್ ಮತ್ತು ಚಿತ್ರತಂಡ ರಾಧಿಕಾ ಜೊತೆ ಫೋನಿನಲ್ಲಿ ಮೊದಲ ಹಂತದ ಮಾತುಕತೆ ನಡೆಸಿದೆಯಂತೆ. ಮೂಲಗಳ ಪ್ರಕಾರ ನಾಗಶೇಖರ್ ಕಥೆ ಕೇಳಿ ರಾಧಿಕಾ ಗ್ರೀನ್ ಸಿಗ್ನಲ್ ನೀಡಿದ್ದು, ಚಿತ್ರದ ಬಗ್ಗೆ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ಹಾಗೇನಾದರೂ ಆದರೆ ಮೊದಲ ಬಾರಿಗೆ ಕೃಷ್ಣ ಮತ್ತು ರಾಧಿಕಾ ಜೋಡಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದು, ಸಿನಿಪ್ರಿಯರ ನಿರೀಕ್ಷೆ ಮತ್ತಷ್ಟು ಹೆಚ್ಚಿಸಲಿದೆ.

ಉಳಿದಂತೆ, ನಾಗಶೇಖರ್ ಚಿತ್ರಗಳಲ್ಲಿ ಸಂಗೀತಕ್ಕೆ ಹೆಚ್ಚು ಒತ್ತು ನೀಡುವುದರಿಂದ, ಈ ಚಿತ್ರದಲ್ಲೂ ಮೆಲೋಡಿಗಳ ಹಾಡುಗಳ ಅಬ್ಬರ ಜೋರಾಗಿಯೇ ಇರಲಿದೆ. ಈ ಹಿಂದೆ ಸಂಜು ವೆಡ್ಸ್ ಗೀತಾ ಮತ್ತು ಮೈನಾ ಸೇರಿದಂತೆ ನಾಗಶೇಖರ್ ಅವರ ಹಲವು ಚಿತ್ರಗಳಿಗೆ ಸಂಗೀತ ನೀಡಿದ್ದ ಜೆಸ್ಸಿ ಗಿಫ್ಟ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಸತ್ಯಾ ಹೆಗ್ಡೆ ಛಾಯಾಗ್ರಹಣ ಚಿತ್ರಕ್ಕಿದೆ. ಒಟ್ಟಾರೆ ತೆರೆಮರೆಯಲ್ಲಿ ಒಂದಷ್ಟು ಕೆಲಸಗಳಲ್ಲಿ ನಿರತವಾಗಿರುವ ಈ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲಿಯೇ ನಾಗಶೇಖರ್ ಆ್ಯಂಡ್ ಟೀಮ್ ಬಹಿರಂಗಪಡಿಸಲಿದೆ.

ಟಾಪ್ ನ್ಯೂಸ್

ಬಿಎಸ್‌ವೈ ಕಣ್ಣೀರು ಒರೆಸಿದ ವರಿಷ್ಠರು

ಬಿಎಸ್‌ವೈ ಕಣ್ಣೀರು ಒರೆಸಿದ ವರಿಷ್ಠರು

ಬಿಎಸ್‌ವೈ ಸಂವಹನಕಾರನಿಗೆ ಒಲಿದ ಸಿಎಂ ಪಟ್ಟ!

ಬಿಎಸ್‌ವೈ ಸಂವಹನಕಾರನಿಗೆ ಒಲಿದ ಸಿಎಂ ಪಟ್ಟ!

ಅಪ್ಪನ ಹಾದಿಯಲ್ಲಿ ನಡೆದು ಈಗ ಸಿಎಂ ಆಗಿರುವವರು…

ಅಪ್ಪನ ಹಾದಿಯಲ್ಲಿ ನಡೆದು ಈಗ ಸಿಎಂ ಆಗಿರುವವರು…

ಎಲ್ಲವನ್ನೂ  ಸರಿದೂಗಿಸಿಕೊಂಡು ಹೋಗುವ ಜಾಣ್ಮೆ ಅಗತ್ಯ

ಎಲ್ಲವನ್ನೂ  ಸರಿದೂಗಿಸಿಕೊಂಡು ಹೋಗುವ ಜಾಣ್ಮೆ ಅಗತ್ಯ

ಅಕ್ಟೋಬರ್‌ನಲ್ಲಿ ಹೊಸ ಶಿಕ್ಷಣ ನೀತಿಯಡಿ ಪದವಿ ಕಲಿಕಾ ವ್ಯವಸ್ಥೆ ಜಾರಿ

ಅಕ್ಟೋಬರ್‌ನಲ್ಲಿ ಹೊಸ ಶಿಕ್ಷಣ ನೀತಿಯಡಿ ಪದವಿ ಕಲಿಕಾ ವ್ಯವಸ್ಥೆ ಜಾರಿ

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌

Untitled-1

ಜುಲೈ 31ವರೆಗೂ ವ್ಯಾಪಕ ಮಳೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gfdgrertr

ಯಾರಾಗಲಿದ್ದಾರೆ ‘ದ್ವಿತ’ಕ್ಕೆ ನಾಯಕಿ ?  

dfgfgrgr

ಅಕ್ಕನ ಸ್ಥೀತಿ ಗಂಭೀರವಾಗಿದೆ ;ಈ ವಿಡಿಯೋ ಸುಮಲತಾ ಅವರಿಗೆ ತಲುಪಿಸಿ ಎಂದ ನಟಿ ವಿಜಯಲಕ್ಷ್ಮಿ

Untitled-1-Recovered

ಐಎಂಡಿಬಿ ರೇಟಿಂಗ್ ನಲ್ಲಿ ಟಾಪ್ : ಜೋರಾಗಿದೆ ಕಿಚ್ಚನ ‘ವಿಕ್ರಾಂತ್ ರೋಣ’ ಕ್ರೇಜ್

fgfgrrter

ಅಭಿನಯ ಶಾರದೆಯ ಎರಡು ಕಣ್ಣು ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಜಯಂತಿ  

fgytrytr

‘ನಿಮ್ಮಿಂದ ಕಲೆತ ಜೀವನದ ಪಾಠಗಳು ಎಂದೂ ಮರೆಯೋಲ್ಲ’: ಮಾಜಿ ಅತ್ತೆ ನಿಧನಕ್ಕೆ ಅನು ಭಾವುಕ

MUST WATCH

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

udayavani youtube

ಮಳೆಯ ಆರ್ಭಟಕ್ಕೆ ಯಾಣದ ಶ್ರೀ ಭೈರವೇಶ್ವರ ದೇವಾಲಯದ ರಸ್ತೆಯ ಸ್ಥಿತಿ

udayavani youtube

ಎರಡೇ ದಿನದಲ್ಲಿ closeಆಗಿ ನಿಮ್ಮನ್ನು ಯಾಮಾರಿಸ್ತಾರೆ..ಜಾಗ್ರತೆ !!

ಹೊಸ ಸೇರ್ಪಡೆ

ಬಿಎಸ್‌ವೈ ಕಣ್ಣೀರು ಒರೆಸಿದ ವರಿಷ್ಠರು

ಬಿಎಸ್‌ವೈ ಕಣ್ಣೀರು ಒರೆಸಿದ ವರಿಷ್ಠರು

ಬಿಎಸ್‌ವೈ ಸಂವಹನಕಾರನಿಗೆ ಒಲಿದ ಸಿಎಂ ಪಟ್ಟ!

ಬಿಎಸ್‌ವೈ ಸಂವಹನಕಾರನಿಗೆ ಒಲಿದ ಸಿಎಂ ಪಟ್ಟ!

ಅಪ್ಪನ ಹಾದಿಯಲ್ಲಿ ನಡೆದು ಈಗ ಸಿಎಂ ಆಗಿರುವವರು…

ಅಪ್ಪನ ಹಾದಿಯಲ್ಲಿ ನಡೆದು ಈಗ ಸಿಎಂ ಆಗಿರುವವರು…

ಎಲ್ಲವನ್ನೂ  ಸರಿದೂಗಿಸಿಕೊಂಡು ಹೋಗುವ ಜಾಣ್ಮೆ ಅಗತ್ಯ

ಎಲ್ಲವನ್ನೂ  ಸರಿದೂಗಿಸಿಕೊಂಡು ಹೋಗುವ ಜಾಣ್ಮೆ ಅಗತ್ಯ

ಜಪಾನ್‌ ಟೆನಿಸ್‌ ತಾರೆ ಒಸಾಕಾ ನಿರ್ಗಮನ

ಜಪಾನ್‌ ಟೆನಿಸ್‌ ತಾರೆ ಒಸಾಕಾ ನಿರ್ಗಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.