ಜಿಲ್ಲೆಗಳ ನಿಜ ಚೌಕೀದಾರರು: ಕೋವಿಡ್ ಹೊತ್ತಲ್ಲಿ ಸಾಹಸಗಳು, ಹೃದಯಸ್ಪರ್ಶಿ, ಭರವಸೆಯ ಸಾಧನೆಗಳು

Team Udayavani, May 24, 2021, 6:45 AM IST

district-chawkidar

ಕೊರೊನಾ ಭಾರತದಲ್ಲಿ ಕಾಡುತ್ತಿರುವಾಗ, ಪರಿಸ್ಥಿತಿ ನಿಯಂತ್ರಣ ಮೀರಿ ಹೋಗಿದೆ ಎನ್ನಿಸಿರುವ ಹೊತ್ತಿನಲ್ಲೇ ಪ್ರಧಾನಿ ಜಿಲ್ಲಾಧಿಕಾರಿಗಳಿಗೆ ಹೊಣೆ ಹೊರಿಸಿದ್ದಾರೆ. ಆಯಾ ಜಿಲ್ಲೆಗಳಿಗೆ ಅನುಸಾರವಾಗಿ ತೀರ್ಮಾನ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ. ಇಂತಹ ಹೊತ್ತಿನಲ್ಲಿ ದೇಶದಲ್ಲೇ ಅತ್ಯುತ್ತಮವಾಗಿ ಕೆಲಸ ಮಾಡಿ ಮಾದರಿಯಾದ ಜಿಲ್ಲಾಧಿಕಾರಿಗಳ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ.

ಡಾ| ರಾಜೇಂದ್ರ ಭೋಸಲೆ,
ಅಹ್ಮದ್‌ನಗರ, ಮಹಾರಾಷ್ಟ್ರ
ಅಹ್ಮದ್‌ನಗರ ಜಿಲ್ಲೆಯ ಹಿವಾರೆ ಬಜಾರ್‌ ಹಳ್ಳಿಯಲ್ಲಿ ಕೊರೊನಾ ಪತ್ತೆಯಾಯಿತು. ತತ್‌ಕ್ಷಣ ರಾಜೇಂದ್ರ ಭೋಸಲೆ ಅವರು, ನಾಲ್ಕು ವೈದ್ಯಕೀಯ ತಂಡಗಳನ್ನು ರಚಿಸಿದರು. ಹಳ್ಳಿಯ ಅಷ್ಟೂ ಮಂದಿಯನ್ನು ಪರೀಕ್ಷೆಗೊಳಪಡಿಸಿದರು. ಮನೆಯ ಬಗ್ಗೆ ಚಿಂತೆ ತೆಗೆದುಹಾಕುವಂತೆ ಜನರಲ್ಲಿ ವಿಶ್ವಾಸ ಮೂಡಿಸಿದರು. ಸರಪಂಚರನ್ನೂ ಒಪ್ಪಿಸಿದರು. ಕಡೆಗೆ ಹಳ್ಳಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಅದೇ ಮಾದರಿಯನ್ನುಅಹ್ಮದ್‌ನಗರದ 1,316 ಹಳ್ಳಿಗಳಲ್ಲಿ ಅಳವಡಿಸಲಾಗಿದೆ.

ಎಲ್‌.ವೈ.ಸುಹಾಸ್‌, ಗೌತಮ ಬುದ್ಧ ನಗರ, ಉ.ಪ್ರ.
ಗೌತಮ ಬುದ್ಧ ನಗರ ಜಿಲ್ಲಾಧಿಕಾರಿ ಎಲ್‌.ವೈ.ಸುಹಾಸ್‌ ವಯಸ್ಸು ಕೇವಲ 39. ಇಂತಹ ಚಿಕ್ಕವಯಸ್ಸಿನಲ್ಲಿ ಕೊರೊನಾದಂತಹ ದೊಡ್ಡ ಸವಾಲನ್ನು ನಿಭಾಯಿಸುವ ಅನಿವಾರ್ಯ ಎದುರಾಗಿದೆ. ಈ ಜಿಲ್ಲೆ ಉತ್ತರಪ್ರದೇಶದಲ್ಲೇ ಗರಿಷ್ಠ ಸೋಂಕಿತರಿರುವ ಜಾಗವೆಂಬ ಕುಖ್ಯಾತಿಯನ್ನು ಪಡೆದಿದೆ. ಇಂತಹ ಹೊತ್ತಿನಲ್ಲಿ ಸುಹಾಸ್‌ ಖಾಸಗಿ ಆಸ್ಪತ್ರೆಗಳಿಗೆ ಕಠಿನ ಎಚ್ಚರಿಕೆ ನೀಡಿದರು. ಯಾವುದೇ ಆಸ್ಪತ್ರೆ ಸರಕಾರ ನಿಗದಿಪಡಿಸಿರುವ ದರದಲ್ಲಿ ಮಾತ್ರ ಚಿಕಿತ್ಸೆ ನೀಡಬೇಕು; ಮೀರಿದರೆ ದಂಡ ಖಚಿತ ಎಂದರು. ಅದಕ್ಕಾಗಿ ಸಹಾಯವಾಣಿಯನ್ನೂ ಶುರು ಮಾಡಿದರು. ಹಾಗೆಯೇ ಮನೆಯಲ್ಲೇ ಪ್ರತ್ಯೇಕವಾಗಿರುವವರಿಗೆ ಆಮ್ಲಜನಕ ಪೂರೈಸಲು ವ್ಯವಸ್ಥೆ ಮಾಡಿದರು. ಆಮ್ಲಜನಕ ಮರುಪೂರಣ ಬ್ಯಾಂಕನ್ನೇ ಸಿದ್ಧಪಡಿಸಿದ್ದಾರೆ.

ಡಾ|ರಾಜೇಂದ್ರ ಭರೂದ್‌, ನಂದೂರ್‌ಬಾರ್‌, ಮಹಾರಾಷ್ಟ್ರ
ಇದೊಂದು ಅದ್ಭುತ ಕಥೆ. ಬಹುಶಃ ಇಡೀ ಭಾರತಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಮಾದರಿಯಾಗಬಲ್ಲ ಸಾಧನೆ. ಕೊರೊನಾ 2ನೇ ಅಲೆ ಅಪ್ಪಳಿಸಿದಾಗ, ಇಡೀ ದೇಶಕ್ಕೆ ದೇಶವೇ ತತ್ತರಿಸಿತು. ಮಹಾರಾಷ್ಟ್ರವೂ ಅದರ ಭೀಕರ ಪರಿಣಾಮ ಎದುರಿಸಿತು. ಏನು ಮಾಡಬೇಕೆಂದು ತೋಚದೇ ಎಲ್ಲರೂ ದಿಕ್ಕೆಟ್ಟು ಕೂತಿದ್ದಾಗ, ಆರಂಭದಲ್ಲಿ ವೈದ್ಯರಾಗಿ ಅನಂತರ ಜಿಲ್ಲಾಧಿಕಾರಿಯಾದ ಡಾ|ರಾಜೇಂದ್ರ ಭರೂದ್‌ ಬೇರೆಯದ್ದೇ ಆದ ಮಾದರಿ ತೋರಿಸಿದರು. ಅವರು ಈ ಪರಿಸ್ಥಿತಿಯನ್ನು ಮುಂಚೆಯೇ ಊಹಿಸಿ, ಬರೀ ಬುಡಕಟ್ಟು ಜನರೇ ತುಂಬಿಕೊಂಡಿದ್ದ ನಂದೂರ್‌ಬಾರ್‌ ಜಿಲ್ಲೆಯನ್ನು ರಕ್ಷಿಸುವ ಹೊಣೆ ಹೊತ್ತು ಕೊಂಡರು. ಮುಂಚಿತವಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳತೊಡಗಿದರು. ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದರು, ಪ್ರತ್ಯೇಕ ವಾರ್ಡ್‌ಗಳನ್ನು ಸಿದ್ಧಪಡಿಸಿದರು. ವೈದ್ಯಕೀಯ ಆಮ್ಲಜನಕದ ಪೂರೈಕೆ ಕೊರತೆಯಾಗದಂತೆ ನೋಡಿಕೊಂಡರು. ಹಾಸಿಗೆಗಳ ಸಮಸ್ಯೆಯಂತೂ ಎದುರಾಗದಂತೆ ನೋಡಿಕೊಂಡರು. ಯೋಜಿತವಾಗಿ ಲಸಿಕೆಯೂ ಹಾಕಲ್ಪಡುವಂತೆ ವ್ಯವಸ್ಥೆ ಮಾಡಿದರು. ಇವತ್ತೂ ಅಲ್ಲಿ ರೋಗಿಗಳಿಗೆ ಹಾಸಿಗೆಗಳಿಲ್ಲ ಅನ್ನುವ ಮಾತೇ ಇಲ್ಲ. ಹಾಗೆಯೇ ಎರಡು ಆಮ್ಲಜನಕ ತಯಾರಿ ಘಟಕಗಳಲ್ಲಿ, ನಿಮಿಷಕ್ಕೆ 2,400 ಲೀ. ಆಮ್ಲಜನಕ ತಯಾರಾಗುತ್ತಿದೆ. ಈ ವ್ಯವಸ್ಥೆಯ ಪರಿಣಾಮ ಪಕ್ಕದ ಗುಜರಾತ್‌, ಮಧ್ಯಪ್ರದೇಶದಿಂದಲೂ ಇಲ್ಲಿಗೆ ರೋಗಿಗಳು ಬಂದು ದಾಖಲಾಗುತ್ತಿದ್ದಾರೆ!

ಗಗನ್‌ದೀಪ್‌ ಸಿಂಗ್‌, ಚೆನ್ನೈ ಮಹಾನಗರಪಾಲಿಕೆ, ತ.ನಾಡು
ಚೆನ್ನೈಯಂತಹ ಮಹಾನಗರಿಯಲ್ಲಿ ಕೊರೊನಾ ಸ್ಫೋಟಗೊಂಡರೆ ಪರಿಸ್ಥಿತಿ ಎಷ್ಟು ಗಂಭೀರವಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಅಂತಹ ಹೊತ್ತಿನಲ್ಲಿ ಅಲ್ಲಿನ ನಗರಪಾಲಿಕೆ ಆಯುಕ್ತ 250 ಖಾಸಗಿ ಟ್ಯಾಕ್ಸಿಗಳನ್ನೇ ಮಿನಿ ಆ್ಯಂಬುಲೆನ್ಸ್‌ಗಳನ್ನಾಗಿ ಪರಿವರ್ತಿಸಿ ಬಿಡುಗಡೆ ಮಾಡಿದರು. ಇದರಿಂದ ಸರಕಾರಿ ಆ್ಯಂಬುಲೆನ್ಸ್‌ಗಳ ಮೇಲಿನ ಒತ್ತಡ ಕಡಿಮೆಯಾಯಿತು. ಇಲ್ಲಿ ಆಮ್ಲಜನಕ ವ್ಯವಸ್ಥೆಯೂ ಇದೆ. ಹಾಗೆಯೇ ವಾಹನ ಚಾಲಕ, ಅದೇ ಗಾಳಿಯನ್ನು ಉಸಿರಾಡದಂತೆಯೂ ಬಿಗಿ ಕ್ರಮ ತೆಗೆದುಕೊಳ್ಳಲಾಗಿದೆ.

ಪುಷ್ಪೇಂದ್ರ ಕುಮಾರ ಮೀನಾ, ಕೊಂಡಗಾಂವ್‌°, ಛತ್ತೀಸ್‌ಗಢ
ಇದು 2020ರ ಕಥೆ. ಆ ವರ್ಷ ಮಾರ್ಚ್‌ 24ರಂದು ಇಡೀ ದೇಶಾದ್ಯಂತ ಲಾಕ್‌ಡೌನ್‌ ಹೇರಲಾಯಿತು. ಅಚ್ಚರಿಯೆಂದರೆ ಅದಕ್ಕಿಂತ ಬಹಳ ದಿನಗಳ ಮುನ್ನವೇ ಛತ್ತೀಸ್‌ಗಢದ ಕೊಂಡಗಾಂವ್‌° ಜಿಲ್ಲೆಯ ಜಿಲ್ಲಾಧಿಕಾರಿ ಕೊರೊನಾ ಎದುರಿಸಲು ಪೂರ್ಣ ಸಿದ್ಧತೆ ಆರಂಭಿಸಿದ್ದರು. ಮಾಸ್ಕ್ಗಳು, ಸ್ಯಾನಿಟೈಸರ್‌ಗಳು ಜನರಿಗೆ ಸಿಗುವಂತೆ ಮಾಡಿದರು. ಸಾಮಾಜಿಕ ಅಂತರ ಕಾಪಾಡಲು, ಕೊರೊನಾ ಸಮಸ್ಯೆ ಬಗ್ಗೆ ಇಡೀ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲು ಪೂರ್ಣ ಕ್ರಮ ತೆಗೆದುಕೊಂಡರು. ಶ್ರಮಿಕ ವರ್ಗಕ್ಕೆ ಶಿಬಿರ ಏರ್ಪಡಿಸಿ, ಊಟ, ವಸತಿ, ಕುಟುಂಬದ ಚಿಂತೆ ಮರೆಯುವಂತೆ ಮಾಡಿದರು. ವನದಿಂದ ಉತ್ಪಾದನೆಯಾಗುವ ಪದಾರ್ಥಗಳನ್ನು ಮಾರಲು ವ್ಯವಸ್ಥೆ ಮಾಡಿದರು. ಇದು ಎಷ್ಟು ಪ್ರಭಾವಿಯಾಗಿತ್ತೆಂದರೆ ಉತ್ತರಪ್ರದೇಶ, ರಾಜಸ್ಥಾನ, ಬಿಹಾರ, ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕದ ಕೆಲವು ಕಾರ್ಮಿಕರು ಇಲ್ಲಿನ ಶ್ರಮಶಿಬಿರಗಳಲ್ಲಿ ಸೇರ್ಪಡೆಯಾಗಲು ಬಯಸಿದ್ದರು. ಇಡೀ ದೇಶ ಲಾಕ್‌ಡೌನ್‌ಗೆ ಸಿಲುಕಿದ್ದಾಗ, ಈ ಜಿಲ್ಲೆಯ ಜನ ಮಾತ್ರ ಅದರ ತೀವ್ರತೆಯಿಂದ ಪಾರಾಗಲು ಜಿಲ್ಲಾಧಿಕಾರಿ ಪುಷ್ಪೇಂದ್ರಕುಮಾರ ಮೀನಾ ಕಾರಣವಾಗಿದ್ದರು.

ಎಂ.ಹರಿನಾರಾಯಣ, ಚಿತ್ತೂರು, ಆಂಧ್ರಪ್ರದೇಶ
ವಿಶ್ವದ ಶ್ರೀಮಂತ ದೇಗುಲ ತಿರುಪತಿಯಿರುವುದು ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ. ಇಂತಹ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮೀರಿಹೋಗಿದೆ. ಪರಿಣಾಮ ಅಲ್ಲಿನ ನಗರ ಪ್ರದೇಶಗಳ ಆಸ್ಪತ್ರೆಗಳು ಭರ್ತಿಯಾಗಿವೆ. ಹೀಗಿರುವಾಗ ಗ್ರಾಮೀಣ ಭಾಗದ ಸಾಮುದಾಯಿಕ ಆರೋಗ್ಯಕೇಂದ್ರಗಳನ್ನು, ಕೊರೊನಾ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಜಿಲ್ಲಾದ್ಯಂತ ಹಲವು ಕೊರೊನಾ ಸುರಕ್ಷ ಕೇಂದ್ರಗಳನ್ನು ನಿರ್ಮಿಸಿ, ಪರಿಸ್ಥಿತಿಯನ್ನು ತಹಬದಿಗೆ ತರಲು ಹರಿನಾರಾಯಣ ಅವರು ಬಲವಾದ ಕ್ರಮ ತೆಗೆದುಕೊಂಡಿದ್ದಾರೆ.

ಹೊಸ ಪ್ರಯೋಗಗಳು
– ರಾಜಸ್ಥಾನದ ಬಿಕಾನೆರ್‌ ಜಿಲ್ಲೆಯಲ್ಲಿ ಆಮ್ಲಜನಕ ಮಿತ್ರ ಯೋಜನೆ: ಜೀವಾನಿಲದ ಕೊರತೆ ನೀಗಿಸಲು ಕ್ರಮ
– ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕೊರೊನಾಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗೂ ಕಾಶಿ ಕೋವಿಡ್‌ ರೆಸ್ಪಾನ್ಸ್‌ ಸೆಂಟರ್‌ ಸ್ಥಾಪನೆ
– ಕೇರಳದಲ್ಲಿ ಆಮ್ಲಜನಕ ಸೋರಿಕೆ ತಪ್ಪಿಸಲು ಆಕ್ಸಿಜನ್‌ ನರ್ಸ್‌ ಕಾರ್ಯಕ್ರಮ
– ಗುರುಗ್ರಾಮದಲ್ಲಿ ಮನೆ ಹಾಗೂ ಕಚೇರಿಗೆ ತೆರಳಿ ಕೋವಿಡ್‌ ಲಸಿಕೆ

ಟಾಪ್ ನ್ಯೂಸ್

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.