ಡಿಎಲ್, ಇತರ ದಾಖಲೆ ಮಾನ್ಯತೆ ವಿಸ್ತರಣೆ
Team Udayavani, May 25, 2020, 6:09 AM IST
ಹೊಸದಿಲ್ಲಿ: ಡ್ರೈವಿಂಗ್ ಲೈಸನ್ಸ್ ಸೇರಿದಂತೆ ವಿವಿಧ ಮೋಟಾರು ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಅಲ್ಲದೆ, ಫೆ.1ರಿಂದ ಬಾಕಿ ಇರುವ ದಾಖಲೆಗಳ ನವೀಕರಣಕ್ಕೆ ಯಾವುದೇ ಹೆಚ್ಚುವರಿ ಅಥವಾ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸರಕಾರ ತಿಳಿಸಿದೆ.
ಕೋವಿಡ್ 19 ಲಾಕ್‌ಡೌನ್ ಅವಧಿಯಲ್ಲಿ ಜನಸಾಮಾನ್ಯ ರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಸಂಬಂಧ ಆದೇಶ ಹೊರಡಿಸಿದೆ. ಮೋಟಾರು ವಾಹನಗಳ ದಾಖಲೆಗಳ ಮಾನ್ಯತಾ ಅವಧಿ 2020ರ ಫೆ.1ಕ್ಕೆ ಅಥವಾ ಅನಂತರದ ಅವಧಿಗೆ ಮುಗಿದಿದ್ದರೆ, ಅದರ ಮಾನ್ಯತಾ ಅವಧಿಯನ್ನು ಜುಲೈ 31ರವರೆಗೆ ವಿಸ್ತರಣೆ ಮಾಡಲಾಗುವುದು. ಅಲ್ಲದೆ, ಈ ಅವಧಿ ಯಲ್ಲಿ ಮಾಡಲಾಗುವ ಮಾನ್ಯತಾ ನವೀಕರಣಕ್ಕೆ ಹೆಚ್ಚುವರಿ ಅಥವಾ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದ ರಿಂದ ವಾಹನ ದಾಖಲೆ ಗಳ ಮಾನ್ಯತೆ ಅವಧಿ ಮುಗಿದು ಅವು ರದ್ದಾಗುವ ಭೀತಿ ಆವರಿ ಸಿದ್ದ ಅನೇಕರಿಗೆ ಸಮಾಧಾನ ಸಿಕ್ಕಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ