ಬರ ನಿರ್ವಹಣೆಯಲ್ಲಿ ಹಿಂದೆ ಬೀಳಬೇಡಿ :ಡಿಸಿ,ಸಿಇಓಗಳಿಗೆ ಸಿಎಂ ಎಚ್‌ಡಿಕೆ

ಸರ್ಕಾರದ ಬಳಿ ಹಣಕಾಸಿನ ಕೊರತೆ ಇಲ್ಲ

Team Udayavani, May 15, 2019, 3:22 PM IST

ಬೆಂಗಳೂರು: ರಾಜ್ಯದಲ್ಲಿ ಬರಗಾಲ ಕಾಣಿಸಿಕೊಂಡಿದ್ದು ಅಧಿಕಾರಿಗಳು ಪರಿಸ್ಥಿತಿ ನಿರ್ವಹಣೆ ಯಲ್ಲಿ ಹಿಂದೆ ಬೀಳಬಾರದು. ಸರ್ಕಾರದ ಬಳಿ ಹಣಕಾಸಿನ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ  ಬುಧವಾರ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪಂಚಾಯತ್‌ ಸಿಇಓಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಬರ ಪರಿಸ್ಥಿತಿಯ ಅವಲೋಕನ ನಡೆಸಿದರು.

ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ. ಈಗಾಗಲೆ ಡಿಸಿಗಳ ಖಾತೆಗಳಿಗೆ 10 ಕೋಟಿ ರೂಪಾಯಿ ಹಣವನ್ನುನೀಡಲಾಗಿದೆ. ಸಂಪೂರ್ಣ ಹಣವನ್ನು ಖರ್ಚು ಮಾಡಿ . ಹೆಚ್ಚುವರಿ ಅಗತ್ಯ ಬೇಕಾದಲ್ಲಿ ತಿಳಿಸಿ ಎಂದು ಅಧಿಕಾರಿಗಳಿಗೆ ಸಿಎಂ ಹೇಳಿದರು.

ಜಾನುವಾರುಗಳಿಗೆ ಕುಡಿವ ನೀರಿಗೆ ಮೊದಲ ಆಧ್ಯತೆ ನೀಡಿ. ಪರಿಸ್ಥಿತಿಯನ್ನು ನಿರ್ವಹಿಸದೆ ಇದ್ದಲ್ಲಿ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಇದೇ ವೇಳೆ ಸಿಎಂ ಎಚ್ಚರಿಕೆ ನೀಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ