ಎಸ್ ಎಂಕೆ ಅಳಿಯ ಸಿದ್ದಾರ್ಥ 24 ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲ ಎಷ್ಟು ಗೊತ್ತಾ?
Team Udayavani, Jul 30, 2019, 12:40 PM IST
ಬೆಂಗಳೂರು:ಮಾಜಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ ವಿಜಿ ಸಿದ್ದಾರ್ಥ ಮಂಗಳೂರಿನ ಸಮೀಪ ನಾಪತ್ತೆಯಾಗಿದ್ದು, ಇದೀಗ ಕಾಫಿ ಡೇ ಸಂಸ್ಥೆಯ ಶೇರುಗಳಲ್ಲಿ ಭಾರೀ ಕುಸಿತ ಕಂಡಿದೆ. ಅಲ್ಲದೇ 22 ಸಾವಿರ ಕೋಟಿ ರೂಪಾಯಿ ಆಸ್ತಿಯ ಒಡೆಯ ಸಿದ್ದಾರ್ಥ ಬರೋಬ್ಬರಿ 8ಸಾವಿರ ಕೋಟಿ ರೂಪಾಯಿಯಷ್ಟು ಸಾಲದ ಸುಳಿಗೆ ಸಿಲುಕಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ: ಎಸ್ ಎಂಕೆ ಅಳಿಯ ನಾಪತ್ತೆ ನಿಗೂಢ; ಸಿದ್ದಾರ್ಥ ಬರೆದಿಟ್ಟ ಪತ್ರದಲ್ಲಿ ಕಾರಣ ಬಹಿರಂಗ
ಸುಮಾರು 24 ಬ್ಯಾಂಕ್ ಗಳಿಂದ ಸಿದ್ದಾರ್ಥ ಅವರು 8 ಸಾವಿರ ಕೋಟಿಗೂ ಅಧಿಕ ಸಾಲ ಪಡೆದಿದ್ದಾರೆ ಎಂದು ಸಿದ್ದಾರ್ಥ ಆಡಳಿತ ಮಂಡಳಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.
ಯಾವ ಬ್ಯಾಂಕ್ ಗಳಲ್ಲಿ ಎಷ್ಟು ಸಾಲ ಮಾಡಿದ್ದಾರೆ:
*ಆಕ್ಸಿಸ್ ಬ್ಯಾಂಕ್ 315 ಕೋಟಿ ಸಾಲ, ಯೆಸ್ ಬ್ಯಾಂಕ್ 273 ಕೋಟಿ ಸಾಲ
* ಐಡಿಬಿಐ ಬ್ಯಾಂಕ್ ನಲ್ಲಿ 4475 ಕೋಟಿ ಸಾಲ, , ಆದಿತ್ಯ ಬಿರ್ಲಾದಲ್ಲಿ 278 ಕೋಟಿ ಸಾಲ
* ಪಿರಾಮಿಲ್ ನಲ್ಲಿ 175 ಕೋಟಿ, ಆ್ಯಕ್ಸಿಸ್ ಫೈನಾನ್ಸ್ ಮತ್ತು ಕೋಟಕ್ ಮಹೀಂದ್ರಾದಲ್ಲಿ 125 ಕೋಟಿ
*. ಆರ್ ಬಿಎಲ್ ನಲ್ಲಿ 174 ಕೋಟಿ, ಎಕೆ ಕ್ಯಾಪಿಟಲ್ 121 ಕೋಟಿ,
* ಎಸ್ ಟಿಸಿಐನಲ್ಲಿ 100 ಕೋಟಿ, ಆಕ್ಸಿಸ್ ಟ್ರಸ್ಟಿಯಲ್ಲಿ 915 ಕೋಟಿ ಸಾಲ,
*ಇಸಿಎಲ್ ಫೈನಾನ್ಸ್ 150 ಕೋಟಿ, ಕ್ಲಿಕ್ಸ್ ಕ್ಯಾಪಿಟಲ್ 175 ಕೋಟಿ, ಬಜಾಜ್ ಫೈನಾನ್ಸ್ 45 ಕೋಟಿ