ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಇನ್ನಷ್ಟು ಉತ್ತೇಜನ ಕ್ರಮ ಕೈಗೊಳ್ಳಬೇಕಾಗಿದೆಯೇ ?

Team Udayavani, Dec 1, 2019, 3:33 PM IST

ದೇಶದ ಆರ್ಥಿಕತೆಗೆ ಮತ್ತಷ್ಟು ಪೆಟ್ಟು ಬಿದ್ದಿದೆ. ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಪ್ರಗತಿ ದರವೂ ಶೇ.4.5 ಕುಸಿತ ಕಂಡಿದೆ. ಆದ ಕಾರಣ ಉದಯವಾಣಿ “ಜಿಡಿಪಿ ಕುಸಿತ: ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಇನ್ನಷ್ಟು ಉತ್ತೇಜನ ಕ್ರಮ ಕೈಗೊಳ್ಳಬೇಕಾಗಿದೆಯೇ ?” ಎಂಬ ಪ್ರಶ್ನೆಯನ್ನು ಕೇಳಿತ್ತು. ಅದಕ್ಕೆ ಬಂದ ಪ್ರತಿಕ್ರಿಯೆಗಳು ಇಂತಿವೆ.

ರವೀಂದ್ರ ಪಿ ರವಿ:  ಆರ್ಥಿಕ ಹಿಂಜರಿತ ಚೇತರಿಕೆಗೆ ನನ್ನ ಸಲಹೆಗಳು.

1) ಸ್ವಂತ ಜಮೀನಿನಲ್ಲಿ ಕೈಗಾರಿಕೆ ಮಾಡಲಿಚ್ಚಿಸುವವರಿಗೆ ಜಮೀನು ಕೈಗಾರಿಕಾ ಪರಿವರ್ತನೆಯಿಂದ ಮುಕ್ತಿ ಅಥವಾ ಹಿಂದೆ ಜಾರಿಯಲ್ಲಿದ್ದಂತೆ 2ಎಕರೆವರೆಗಿನ ಜಮೀನು ಪರಿವರ್ತಿಸಿ ಸರ್ಕಾರದ ಪ್ರೋತ್ಸಾಹ ಧನ ನೀಡಬೇಕು.

2)ಎಲ್ಲಾ ವಸ್ತುಗಳನ್ನು ಕೊಳ್ಳಲು ಜಿ ಎಸ್ ಟಿ ಜನಸಾಮಾನ್ಯರು ಕಟ್ಟುವುದರಿಂದ ತೆರಿಗೆ 20,00,000 ದವರೆಗೆ ಶೇ 5.,20 ರಿಂದ 50 ಲಕ್ಷ ದ ವರೆಗೆ ಶೇ 10, 50 ರಿಂದ 1 ಕೋಟಿ ವರೆಗೆ ಶೇ 15,ಅದಕ್ಕಿಂತ ಹೆಚ್ಚಿನವರೆಗೆ ಶೇ 20 ನಿಗದಿ ಮಾಡಿದರೆ ಹೆಚ್ಚು ಸಂಖ್ಯೆಯಲ್ಲಿ ಆದಾಯ ತೆರಿಗೆ ಪಾವತಿಸಲು ಜನತೆ ಮುಂದಾಗುತ್ತಾರೆ. ಇದರಿಂದ ಕಪ್ಪು ಹಣದ ಪ್ರಬಾವ ಕಡಿಮೆಯಾಗುತ್ತದೆ. ಜನತೆ ಹೆಚ್ಚು ಹೆಚ್ಚು ಬಂಡವಾಳ ಹೂಡಿಕೆಗೆ ಮುಂದಾಗುತ್ತಾರೆ. ಇದರಿಂದ ಉದ್ಯೋಗ ಅವಕಾಶ ಗಳು ಹೆಚ್ಚಾಗಿ ತಲಾ ಆದಾಯ ವೃದ್ದಿಯಾಗುತ್ತದೆ.

3)ಪ್ರಾಥಮಿಕ ( ಹೊಸದಾಗಿ ) ಕೈಗಾರಿಕೆ ಸ್ಥಾಪಿಸುವ ಸಣ್ಣ ಕೈಗಾರಿಕೆ ಗಳಿಗೆ ಜಿ ಎಸ್ ಟಿ ಯಿಂದ ಕನಿಷ್ಟ 3 ವರ್ಷಗಳ ವರೆಗೆ ವಿನಾಯಿತಿ ನೀಡಬೇಕು.

4) ಹಳ್ಳಿಗಳಲ್ಲಿ ಕೈಗಾರಿಕೆ ಸ್ಥಾಪಿಸುವ ಯುವಕರಿಗೆ ಸರ್ಕಾರದ ಸಾಲ ಮತ್ತು ಪ್ರೋತ್ಸಾಹ ಧನ ನೀಡಬೇಕು.

5) ನಗದು ಹಣ ಚಲಾವಣಿಯ ನಿರ್ಬಂದಗಳು ಇರಬಾರದು. ಇದರಿಂದ ಬ್ಯಾಂಕ್ ಲಾಕರುಗಳಲ್ಲಿ ಇಟ್ಟಿರುವ ನಗದು ಹಣ ಹೂಡಿಕೆಗೆ ಬರಲು ಸಾಧ್ಯ. ಇದರಿಂದ ಕೈಗಾರಿಕಾ ಪ್ರಗತಿಯಾಗುವುದು. ಹೆಚ್ಚು ಕಠಿಣ ಕಾನೂನು ಹಣ ಮುಚ್ಚಿಡಲು ,ಕಪ್ಪು ಹಣ ಸೃಷ್ಟಿಯಾಗಲು ಕಾರಣ.

ಚಕ್ರವರ್ತಿ ಜಗದೀಶ: ಹೆಚ್ಚು ಕೃಷಿ ವಲಯಕ್ಕೆ ಉತ್ತೇಜನ ನೀಡುವ ಯೋಜನೆಗಳು ಮತ್ತು ಅಸಂಘಟಿತ ವಲಯಗಳಿಗೆ ದುಡಿಯುವವರಿಗೆ ಬಲ ಕೊಂಡಬೇಕು. ಹಾಗೆ ರಿಯಲ್ ಎಸ್ಟೇಟ್ ಪ್ರೋತ್ಸಾಹಿಸಬೇಕು. GSTಯ ತೆರಿಗೆ ಶ್ರೇಣಿಗಳನ್ನು ಕಡಿಮೆ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಕಡಿಮೆ ಮಾಡಬೇಕು.

ಜಿಡಿಪಿಯ ಮಾಪಕವೇ ಕೆಲವು ಸಂದರ್ಭಗಳಲ್ಲಿ ತಪ್ಪು ಇದೆ ಅನ್ನಿಸುತ್ತದೆ. ಮಾರುಕಟ್ಟೆಯಲ್ಲಿ ಔಷಧಿ ಅಂಗಡಿಯಲ್ಲಿ ಔಷಧಗಳ ಮಾರಾಟ ಗಣನೀಯವಾಗಿ ಕಡಿಮೆ ಆಗಿ ಹಣದ ಮೊತ್ತ ಕಡಿಮೆ ಆದರೂ ಜಿಡಿಪಿ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ, ಹಾಗೆಯೇ ಪೆಟ್ರೋಲಿಯಂ ಉತ್ಪನ್ನ ಮಾರಾಟ ದಿಂದ ಹಣದ ಮೊತ್ತ ಕಡಿಮೆ ಆದರೂ ಜಿಡಿಪಿ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಇಲೆಕ್ಟ್ರೀಕ್ ಸಲಕರಣೆಗಳ ಮಾರಾಟ (ಉದಾಹರಣೆಗೆ ಟೀವಿ, ಎಸಿ, ರಿಫ್ರೀಜರೇಟರ್) ಕಡಿಮೆ ಆದರೂ ಜಿಡಿಪಿ ಮೇಲೆ ಪರಿಣಾಮ ಬೀರುತ್ತದೆ. ಈಗ ಸ್ಮಾರ್ಟ್ ಫೋನ್ ಬಂದ ನಂತರ ಟೀವಿ ಮಾರಾಟ ತುಂಬಾ ಕಡಿಮೆ ಯಾಗಿದೆ ಅಲ್ಲದೆ ಟೀವಿ ನೋಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಬೆಲೆ ಬಾಳುವ ವಿದ್ಯುತ್ ಉಪಕರಣಗಳ ಬಳಕೆ ಕೂಡ ಕಡಿಮೆಯಾಗಿದೆ. ಇನ್ನು ವಾಹನ ಖರೀದಿಗೆ ರಸ್ತೆ ಯಲ್ಲಿ ಸಂಚರಿಸುವಾಗ ಹಲವು ಗಂಭೀರ ಸ್ವರೂಪದ ಅಪಘಾತ ಸಂಭವಿಸುವುದನ್ನು ನೋಡಿ, ಕೇಳಿ ಜನರು ಹಣವಿದ್ದರೂ ಖರೀದಿಸಲು ಮುಂದೆ ಬರುತ್ತಿಲ್ಲ. ನಮ್ಮಲ್ಲಿ ವೈಜ್ಞಾನಿಕವಾಗಿ ಯಾವುದೇ ರಸ್ತೆ ಮಾಡದೇ ಅಪಘಾತವಾಗಲು ಕಾರಣ. ಇತ್ತೀಚಿನ ವರ್ಷಗಳಲ್ಲಿ ತಿಂಗಳು ತಿಂಗಳಿಗೆ ವಾಹನಗಳ ಮೊಡಲ್ , ವಿನ್ಯಾಸ ಬದಲಾವಣೆ ಆಗುತ್ತಿರುವುದು ನೋಡಿ ಕೊಂಡ ವಾಹನಗಳ ಮಾರಾಟ ಮಾಡುವ ಸಮಯದಲ್ಲಿ ಅದನ್ನೂ ಕೊಳ್ಳುವವರು ಸಿಗುವುದಿಲ್ಲಾ ಹಾಗೂ Second hand ವಾಹನಗಳಿಗೆ ಬೇಡಿಕೆ ಇಲ್ಲದಿರುವುದರಿಂದ ಬೆಲೆ ಗಣನೀಯವಾಗಿ ಕುಸಿದಿದೆ. ಹಾಗಾಗಿ ಹೊಸ ಕಾರು ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ.

ಇನ್ನು ಬೇಕರಿ ಉತ್ಪನ್ನಗಳನ್ನು ಜನರು ಆರೋಗ್ಯ ಮತ್ತು ದೃಷ್ಟಿಯಿಂದ ತಿನ್ನುವುದನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಎಲ್ಲಾ ವಸ್ತುಗಳನ್ನು ಕೊಳ್ಳಲು ಹಣವಿದ್ದರೂ ಈಗಿನ ಜನರಿಗೆ ಆರೋಗ್ಯ ದೃಷ್ಟಿಯಿಂದ ಹಾಗೂ ಹೆಚ್ಚಿನವರಿಗೆ ಆ ವಸ್ತುಗಳ ಮೇಲೆ ವ್ಯಾಮೋಹ ಇಲ್ಲದಿರುವುದು ಕೂಡ ಇಳಿಕೆಗೆ ಪ್ರಮುಖ ಕಾರಣ.

ಮೇಲಿನ ಎಲ್ಲಾ ವಸ್ತುಗಳ ಮಾರಾಟ ಕಡಿಮೆ ಆದ ನಂತರ ಕಂಪೆನಿಯಲ್ಲಿ ಇರುವ ಕೆಲಸಗಾರರನ್ನೇ ತೆಗೆಯುವಾಗ ಹೊಸ ಕಾರ್ಮಿಕರ ಸೇರ್ಪಡೆ  ಕಷ್ಟದಾಯಕವಾಗಿದೆ. ಈ ಎಲ್ಲಾ ವಿಷಯಗಳನ್ನು ಗಮನಿಸಿದರೆ ಜಿಡಿಪಿ ಬೆಳವಣಿಗೆ ಆಗಲು ಸಾಧ್ಯತೆ ಕಡಿಮೆ. ಇದಕ್ಕೆ ಆರ್ಥಿಕ ಬಿಕ್ಕಟ್ಟು ಎನ್ನುವುದಕ್ಕಿಂತಲೂ ಜನರ ಭಾವನೆಗಳಿಂದ ಮಾರಾಟ ಕಡಿಮೆಯಾಗಿದೆ ಎನ್ನಬಹುದು.

ಮಹಾದೇವ ಗೌಡ:  ಗೃಹಸಾಲ ವರ್ಷಕ್ಕೆ 3% ರಂತೆ 30 ಲಕ್ಷದವರಿಗೆ 30 ವರ್ಷದವಧಿಗೆ ಗರಿಷ್ಟ 1200 ಚ.ಅ. ನಿವೇಶನದ ತನಕ ಮಾತ್ರ ಬ್ಯಾಂಕ್ ಗಳು ಸಾಲ ಕೊಡಬೇಕು. ಎಲ್ಲಾ ತರಹದ ವಾಹನ ಗಳನ್ನು ಹಳದಿ ಬೊರ್ಡುಗಳನ್ನಾಗಿ ಮಾಡಿ, 1 ಸೀಟ್ ಗೆ ತಕ್ಕಂತೆ ತೇರಿಗೆ ಮತ್ತು ವಿಮೆ ಕಡಿಮೆ ಹಣ ನಿಗದಿ ಮಾಡಬೇಕು. ತೇರಿಗೆ + ವಿಮೆಯನ್ನು ಹಾಲಿಯಿರುವ 1ಲೀ. ಪೇಟ್ರೋಲ್, ಡೀಸೇಲ್ ದರಕ್ಕೆ ಸೇರಿಸಿ ವಾಹನಗಳ ವಿಮೆ ಮತ್ತು ತೇರಿಗೆ ಪ್ರತ್ಯೆಕವಾಗಿ ತೆಗದುಕೊಳ್ಳುವದನ್ನು ರದ್ದು ಮಾಡಲು ಸಾಧ್ಯವಿದೆಯೇ ?

ಎಲ್ಲಾ ತರಹದ ಸಂಘಟಿತ ಉದ್ಯೋಗಗಳನ್ನ ಹೆಚ್ಚು ಮಾಡಬೇಕು. 1000 ಜನಸಂಖೆೄಗೆ ಒಂದು ಕೆರೆ ಮತ್ತು ಗೋ ಶಾಲೆ ಮತ್ತು ಗೋ ಆಶ್ರಮ ನಿರ್ಮಾಣ ಮಾಡಬೇಕು. ರೈತ ಬೆಳದ ಎಲ್ಲಾ ವಸ್ತುಗಳನ್ನು ಸರ್ಕಾರ ಹಾಲನ್ನ ಖರಿದಿ ಮಾಡುವ ರೀತಿಯಲ್ಲೆ ಬೆಳದ ಪದಾರ್ಥಕ್ಕೆ ಮಾರುಕಟ್ಟೆಯ ಬೆಲೆ ಗೆ 50% ಬೆಂಬಲ ಕೊಟ್ಟು ನೇರಾ ಖರೀದಿ ಮಾಡಿದರೇ ಅರ್ಥಿಕ ಚಟುವಟಿಕೆ ಚೇತರಿಸಿಕೊಳ್ಳಬಹುದು (?)

ಜಿ.ಎಸ್.ಟಿ ಯನ್ನು ಕಚ್ಚಾ ಪದಾರ್ಥಕ್ಕೆ ಮಾತ್ರ ಹಾಕಿ ಇನ್ನಿತರ ಹಂತದ ವ್ಯಾಪರಸ್ಥರು ಮತ್ತು ಸರಕು ಸಾಗಾಣಿಕೆದಾರರಿಗೆ ವ್ಯವಹಾರದಲ್ಲಿ ಸರಳತೆಯನ್ನು ಸೃಷ್ಟಿಸಬೇಕು. ಚಿಲ್ಲರೆ ವ್ಯಾಪರಸ್ಥರಿಗೆ ಅವರ ವಹಿವಾಟಿನ ಮೇಲೆ 1% ಹಣ ರಿಪಂಡ್ ನೀಡಬೇಕು ಹೀಗೆ  ಹಲವು ಸುಧಾರಣೆಗಳಿಂದ ಅರ್ಥಿಕತೆಗೆ ಜೀವ ತುಂಬಬಹುದು.

ರಾಜೇಶ್ ಅಂಚನ್:  ಈಗಿರುವ ಜಿಡಿಪಿ ಮಾನದಂಡ ಸಮರ್ಪಕವಾಗಿಲ್ಲ. ಅದರ ಆಧಾರದ ಮೇಲೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅಳೆಯುವುದು ಸರಿಯಾದ ಕ್ರಮವಲ್ಲ. ಇಲ್ಲಿ ಜಿಡಿಪಿ ಮೇಲೇರಿದ ಕೂಡಲೇ ಎಲ್ಲವೂ ಸರಿಯಾಗಿದೆ ಅಂತಾ ಅರ್ಥವಲ್ಲ. ಪ್ರಸ್ತುತ ವ್ಯಾಪಾರ ವಹಿವಾಟಿನಲ್ಲಿ ಇಳಿಕೆಯಾಗಿದೆ. ಈ ನಿಟ್ಟಿನಲ್ಲಿ ಅದನ್ನು ಮೇಲೆತ್ತುವ ಕೆಲಸ ಸರ್ಕಾರ ಮಾಡಬೇಕಿದೆ. ನಮ್ಮ ಬಹುಮುಖ್ಯ ಸಮಸ್ಯೆ ಉದ್ಯೋಗ. ಸರಕಾರ ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯೋನ್ಮುಖವಾಗಬೇಕಿದೆ.

ಬದ್ರಿನಾಥ್ ಶೆಣೈ:  ಹೌದು. ಆರ್ಥಿಕ ತಜ್ಞರು ಈ ಬಗ್ಗೆ ಒಮ್ಮತದ ಅಭಿಪ್ರಾಯವನ್ನು ತಳೆದು ಸರಕಾರದ ಜೊತೆಗೆ ಚರ್ಚಿಸಬೇಕು. ಕೇಂದ್ರ ಸರಕಾರವೂ ಸರ್ವ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ನಾಯಕರು ಸದ್ಯದ ಆರ್ಥಿಕ ವ್ಯವಸ್ಥೆ ಬಗ್ಗೆ ತಲೆಬುಡವಿಲ್ಲದ ಆಧಾರರಹಿತ ಹೇಳಿಕೆ ನೀಡಬಾರದು, ವಾಸ್ತವವನ್ನು ಒಪ್ಪಿಕೊಳ್ಳಬೇಕು.

ರಾಖಿ ಉಡುಪಿ:  ದೇಶದಲ್ಲಿನ ಸರಕಾರಗಳು ತಮ್ಮ ಅಧಿಕಾರ ಉಳಿಸಿಕೊಳ್ಳಲು ಭಾಗ್ಯಗಳನ್ನು ಘೋಷಿಸಿ ದೇಶದ ಸ್ಥಿತಿ ಈ ರೀತಿ ಆಗಿದೆ.  ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರಕಾರಗಳು ಘೋಷಿಸಿದ  ಪುಕ್ಕಟೆ ಯೋಜನೆಗಳು(ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರ ಹೊರತುಪಡಿಸಿ) ಮತ್ತೆ ಸಬ್ಸಿಡಿ ಸಹಾಯಧನ ನಿಲ್ಲಿಸಿ. ಬಡ ಮತ್ತು ಮಾಧ್ಯಮ ವರ್ಗದ ಎಲ್ಲಾ ಸಾಲವನ್ನು ಮನ್ನಾ ಮಾಡಲಿ ಹಾಗೂ ಜನಪ್ರತಿನಿಧಿಗಳಿಗೆ ಖರ್ಚು ಮಾಡುವ ಸಾವಿರಾರು ಕೋಟಿ ಖರ್ಚನ್ನು ಕಡಿಮೆ ಮಾಡಲಿ. ಬಡ ಮತ್ತು ಮಾಧ್ಯಮ ವರ್ಗದ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲಿ.  ಆಗ ದೇಶ ತನ್ನಷ್ಟಕ್ಕೆ ಸದೃಢವಾಗುತ್ತದೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ