ಟೆಲಿಕಾಂ ಕಂಪೆನಿಗಳಿಗೆ ಕೇಂದ್ರದ ‘ರಿಲೀಫ್’?
Team Udayavani, Mar 11, 2020, 12:50 PM IST
ಹೊಸದಿಲ್ಲಿ: ಕೇಂದ್ರ ಸರಕಾರಕ್ಕೆ ಕಟ್ಟಬೇಕಿರುವ ಹೊಂದಾಣಿಕೆ ಮಾಡಲಾದ ಹೆಚ್ಚುವರಿ ಆದಾಯದ (ಎಜಿಆರ್) ಬಾಕಿಯನ್ನು ಕಟ್ಟಲು ಏದುಸಿರು ಬಿಡುತ್ತಿರುವ ಏರ್‌ಟೆಲ್, ವೊಡಾಫೋನ್ ಮುಂತಾದ ಕಂಪೆನಿಗಳಿಗೆ ಒಂದಿಷ್ಟು ರಿಲೀಫ್ ಪ್ಯಾಕೇಜ್‌ಗಳನ್ನು ನೀಡಲು ಕೇಂದ್ರ ಸರಕಾರ ಮುಂದಾಗಿದೆ.
ನೀತಿ ಆಯೋಗದ ಸದಸ್ಯರು, ಕೇಂದ್ರ ಹಣಕಾಸು ಇಲಾಖೆ ಅಧಿಕಾರಿಗಳು ಹಾಗೂ ದೂರಸಂಪರ್ಕ ಇಲಾಖೆಯ ಅಧಿಕಾರಿಗಳು ಸೇರಿ ರೂಪಿಸಿರುವ ಈ ರಿಲೀಫ್ ಪ್ಯಾಕೇಜ್‌ಗೆ ಇದೇ ವಾರಾಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಕೇಂದ್ರ ಸಂಪುಟದಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ಎಜಿಆರ್ ಬಾಕಿ ಕುರಿತಂತೆ ಮಾ. 17ರಂದು ಸುಪ್ರೀಂ ಕೋರ್ಟ್‌ನಿಂದ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಗಳಿದೆ.