ಜೇವರ್ಗಿ ಜನತೆ ಸಂಕಷ್ಟಕ್ಕೆ ಮಿಡಿದ ಡಾ| ಅಜಯ ಸಿಂಗ್‌

25 ಸಾವಿರಕ್ಕೂ ಅಧಿಕ ಪಡಿತರ ಕಿಟ್ ‌- ಲಕ್ಷಕ್ಕೂ ಹೆಚ್ಚು ಆಹಾರ ಪೊಟ್ಟಣ ವಿತರಣೆ ; ಎಲ್ಲರೊಂದಿಗೆ ಬೆರೆತು ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿರುವ ಜನನಾಯಕ

Team Udayavani, May 2, 2020, 4:34 AM IST

ಜೇವರ್ಗಿ ಜನತೆ ಸಂಕಷ್ಟಕ್ಕೆ ಮಿಡಿದ ಡಾ| ಅಜಯ ಸಿಂಗ್‌

ಜೇವರ್ಗಿ ತಾಲೂಕಾಡಳಿತಕ್ಕೆ ಅಕ್ಕಿ ಹಸ್ತಾಂತರಿಸಿದ ಶಾಸಕ ಡಾ| ಅಜಯಸಿಂಗ್‌.

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋವಿಡ್ 19 ವೈರಸ್ ನಂತಹ ಕಷ್ಟದ ಸಮಯದಲ್ಲಿ ಗುಣಮಟ್ಟದ ಆಹಾರ ಪೊಟ್ಟಣ, ಪಡಿತರ ಕಿಟ್‌, ಸ್ಯಾನಿಟೈಸರ್‌, ಮಾಸ್ಕ್ ಗಳನ್ನು ವಿತರಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಿದವರಲ್ಲಿ ಜೇವರ್ಗಿ ಕ್ಷೇತ್ರದ ಜನಪ್ರಿಯ ಶಾಸಕ ಡಾ| ಅಜಯಸಿಂಗ್‌ ಮೊದಲಿಗರು ಎಂದರೆ ಅತಿಶಯೋಕ್ತಿಯಲ್ಲ.

‘ಜನ ಸೇವೆಯೇ ಜನಾರ್ದನ ಸೇವೆ’ ಎನ್ನುವ ಮಾತಿನಂತೆ ದಶಕದಿಂದ ಧರ್ಮಸಿಂಗ್‌ ಫೌಂಡೇಷನ್‌ ಮೂಲಕ ಈಗಾಗಲೇ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ| ಅಜಯಸಿಂಗ್‌ ಕೋವಿಡ್ ಭೀತಿಯಿಂದ ತತ್ತರಿಸಿರುವ ಜೇವರ್ಗಿ ಕ್ಷೇತ್ರದ ಸಾವಿರಾರು ಬಡ ಜನತೆಯ ಕಣ್ಣೀರು ಒರೆಸಿದ್ದಾರೆ. ಅಲ್ಲದೇ ಕ್ಷೇತ್ರಾದ್ಯಂತ ಸಂಚರಿಸಿ ಜನರ ಮನೆ ಬಾಗಿಲಿಗೆ ಹೋಗಿ ಪಡಿತರ ಕಿಟ್‌ ವಿತರಿಸಿ ಮಾತನಾಡಿಸಿ, ಕೋವಿಡ್ 19 ವೈರಸ್ ಕುರಿತು ಜಾಗೃತಿ ಮೂಡಿಸಿ ಮಾದರಿ ಕಾರ್ಯ ಮಾಡುತ್ತಿದ್ದಾರೆ.

ಕ್ಷೇತ್ರದಲ್ಲಂತೂ ಸರ್ಕಾರದ 108 ಆಂಬ್ಯುಲೆನ್ಸ್‌ ಬರುವ ಎರಡು ವರ್ಷ ಮುಂಚೆಯೇ ಜೇವರ್ಗಿಯಲ್ಲಿ ಆಂಬ್ಯುಲೆನ್ಸ್‌ಗಳನ್ನು ಕಾರ್ಯರೂಪಕ್ಕೆ ತಂದಿದ್ದರು. ಅಲ್ಲದೇ, ಹತ್ತಾರು ಆರೋಗ್ಯ ಶಿಬಿರ ನಡೆಸಿ ಅವಶ್ಯವಿರುವವರಿಗೆ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಕಲ್ಪಿಸಿ, ಬಡವರ ಆರೋಗ್ಯದಾತರಾಗಿರುವ ಡಾ| ಅಜಯ ಸಿಂಗ್‌ ಈಗ ಹಸಿದವರಿಗೆ ಅನ್ನ ನೀಡುವ ಮುಖಾಂತರ ಅನ್ನದಾತರಾಗಿದ್ದಾರೆ. ಆರೋಗ್ಯ ಭಾಗ್ಯದ ಜತೆಗೆ ಈಗ ಅನ್ನಭಾಗ್ಯ ಕಲ್ಪಿಸಿರುವ ಡಾ| ಅಜಯಸಿಂಗ್‌ ಅವರನ್ನು ಕ್ಷೇತ್ರದಲ್ಲಿ ಜನ ‘ದೇವರು’ ಎಂತಲೇ ಕರೆಯುತ್ತಾರೆ.


ಬೆಂಗಳೂರಿನಲ್ಲಿ ಸಿಲುಕಿರುವ ಕಾರ್ಮಿಕರಿಗೆ ಶಾಸಕರು ಆಹಾರ ಧಾನ್ಯ ವಿತರಿಸಿದರು.

ಮಾದರಿ ಕಾರ್ಯ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಡವರು-ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರಿಂದ ಅನೇಕ ಜನಪ್ರತಿನಿಧಿಗಳು ತಮ್ಮದೇಯಾದ ನಿಟ್ಟಿನಲ್ಲಿ ಸಹಾಯ ಮಾಡುತ್ತಿದ್ದಾರೆ. ಆದರೆ ಜೇವರ್ಗಿ ಶಾಸಕ
ಡಾ| ಅಜಯಸಿಂಗ್‌ ಅವರ ಹಾಗೆ ಪರಿಣಾಮಕಾರಿಯಾಗಿ ಅತ್ಯಂತ ಗುಣಮಟ್ಟದ ವಸ್ತುಗಳನ್ನು ನೀಡಿ ಯಾರೂ ಸ್ಪಂದಿಸಿಲ್ಲ ಎಂಬುದು ಹಲವರ ಅಭಿಪ್ರಾಯ. ಕೆಲವು ಅಧಿಕಾರಿಗಳಂತೂ ಜೇವರ್ಗಿ ಶಾಸಕರಂತೆ ಸ್ಪಂದಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮನಃಪೂರ್ವಕ ಕೆಲಸಗಾರ: ಡಾ| ಅಜಯಸಿಂಗ್‌ ಯಾವುದಾದರೂ ಕೆಲಸ ಆರಂಭಿಸಿದರೆ ಅದು ಪೂರ್ಣವಾಗುವ ವರೆಗೂ ಬಿಡುವವರಲ್ಲ. ಇದಕ್ಕೆ ಕ್ಷೇತ್ರದಲ್ಲಾದ ಕಾರ್ಯಗಳೇ ಸಾಕ್ಷಿಯಾಗಿವೆ. ಈ ಹಿಂದೆ ಆರೋಗ್ಯ ಶಿಬಿರಗಳನ್ನು ನಡೆಸಿ ಸಾವಿರಾರು ರೋಗಿಗಳಿಗೆ ಲಕ್ಷಾಂತರ ರೂ. ವೆಚ್ಚದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಿ ಕೊಟ್ಟಿರುವುದೇ ದೊಡ್ಡ ಸಾಕ್ಷಿ.

ಪ್ರಸ್ತುತ ಕೋವಿಡ್ 19 ವೈರಸ್ ಸಂದರ್ಭದಲ್ಲಿ ಸಿಲುಕಿರುವ ಬಡವರಿಗೆ, ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಎಲ್ಲ ನಿಟ್ಟಿನಿಂದ ಸ್ಪಂದಿಸುತ್ತಿದ್ದು, ಪಡಿತರ ಒಮ್ಮೆ ಕೊಟ್ಟರೆ ಖಾಲಿಯಾಗಬಹುದು. ಆದರೆ ಪ್ರತಿದಿನ ಆಹಾರ ಪೊಟ್ಟಣ ನೀಡಿದರೆ ಸದುಪಯೋಗವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಅಡುಗೆಯನ್ನೇ ಮಾಡಿ ಪೂರೈಸಲಾಗುತ್ತಿದೆ. ಇದಕ್ಕೆ ಬೇಕಾಗುವ ತರಕಾರಿ, ದವಸ ಧಾನ್ಯ ರೈತರಿಂದಲೇ ಖರೀದಿ ಮಾಡುವ ಮೂಲಕ ರೈತರಿಗೂ ನೆರವಾಗಿದ್ದಾರೆ.


ಜೇವರ್ಗಿ ಪಟ್ಟಣದ ಗುಡಿಸಲಲ್ಲಿ ವಾಸಿಸುತ್ತಿರುವ ಬಡವರಿಗೆ ಆಹಾರದ ಪೊಟ್ಟಣಗಳನ್ನು ಧರ್ಮಸಿಂಗ್‌ ಫೌಂಡೇಷನ್‌ ವತಿಯಿಂದ ವಿತರಿಸುತ್ತಿರುವುದು.

ಮುಖ್ಯ ಸಚೇತಕರಾಗಿ ಡಾ| ಸಿಂಗ್‌
ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕರಾಗಿ ಡಾ| ಅಜಯಸಿಂಗ್‌ ಆಯ್ಕೆಯಾಗುತ್ತಿದ್ದಂತೆ ಕೋವಿಡ್ 19 ವೈರಸ್ ಗೆ ದೇಶದಲ್ಲೇ ಮೊದಲ ಸಾವು ಕಲಬುರಗಿಯಲ್ಲಿ ಸಂಭವಿಸಿದ್ದರಿಂದ ಪ್ರಯೋಗಾಲಯ ಪ್ರಾರಂಭವಾಗಬೇಕೆಂದು ವಿಧಾನಸಭೆಯಲ್ಲಿ ಬಲವಾಗಿ ಒತ್ತಾಯಿಸಿದರು.

ಹಿಂದುಳಿದ ಭಾಗಕ್ಕೆ ಕೋವಿಡ್‌ ಪರೀಕ್ಷಾ ಕೇಂದ್ರ ಆಗಲೇಬೇಕೆಂದು ಪಟ್ಟು ಹಿಡಿದಿದ್ದರು. ವೈದ್ಯರಾಗಿ ಇವರು ನೀಡಿದ ಸಲಹೆಗಳನ್ನು ಸರ್ಕಾರ ಸ್ವಾಗತಿಸಿ ಕಾರ್ಯರೂಪಕ್ಕೆ ತಂದಿತು. ಅದೇ ರೀತಿ ಕಲಬುರಗಿಗೆ ಆಗಮಿಸಿದ ಬಳಿಕ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ವಾಸ್ತವ ಸ್ಥಿತಿಗತಿಗಳನ್ನು ಅವಲೋಕಿಸಿದರು.

ಅದೇ ರೀತಿ ಜಿಲ್ಲಾಡಳಿತಕ್ಕೆ ಮಾಸ್ಕ್ ಗಳನ್ನು ಸಲ್ಲಿಸಿದರು. ಮುಖ್ಯವಾಗಿ ಬೆಂಗಳೂರಿನಲ್ಲಿ ಸಿಲುಕಿದ್ದ 1,000ಕ್ಕೂ ಹೆಚ್ಚು ಕಾರ್ಮಿಕರಿಗೆ ಅವರಿದ್ದಲ್ಲಿಗೆ ಹೋಗಿ ಪಡಿತರ ಹಾಗೂ ದಿನಸಿ ಸಾಮಗ್ರಿಗಳನ್ನು ತಲುಪಿಸಿದರು.


ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ 19 ವೈರಸ್ ಕುರಿತಾಗಿ ಶಾಸಕ ಡಾ| ಅಜಯಸಿಂಗ್‌ ಮಾಹಿತಿ ಪಡೆದರು.

ತಂದೆಯ ಹಾದಿಯಲ್ಲಿ ಮಗನ ನಡೆ
ದಿ| ಧರ್ಮಸಿಂಗ್‌ ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಸಹಾಯಹಸ್ತ ಕೋರಿ ಬಂದವರಿಗೆ ನಿರಾಸೆ ಮಾಡಿ ವಾಪಸ್‌ ಕಳುಹಿಸಿದವರಲ್ಲ. ಹೀಗಾಗಿಯೇ ಅವರು ಬಡವರ ಭಾಗ್ಯವಿಧಾತರಾಗಿ ಎಲ್ಲರ ಮನದಲ್ಲಿ ಬೇರೂರಿರುವುದು ಎಲ್ಲರಿಗೂ ತಿಳಿದ ಸಂಗತಿ.

ಅದೇ ರೀತಿ ಅವರ ಪುತ್ರ ಡಾ| ಅಜಯಸಿಂಗ್‌ ಸಹ ಎಲ್ಲರೊಂದಿಗೆ ಅನ್ಯೋನ್ಯವಾಗಿ ಬೆರೆತು ಕಷ್ಟ-ನೋವುಗಳಿಗೆ ಸ್ಪಂದಿಸುತ್ತ ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ.

ಎರಡನೇ ಬಾರಿ ಪ್ರಚಂಡ ಗೆಲುವು ಸಾಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದು ಇದಕ್ಕೆ ಸಾಕ್ಷಿ. ಯಾರೇ ಕರೆದಲ್ಲಿ ಹೋಗುವ ಡಾ| ಅಜಯಸಿಂಗ್‌ ಅವರು ಎಲ್ಲರೊಂದಿಗೆ ಸ್ವಯಂ ಹಾಗೂ ತಾಳ್ಮೆಯಿಂದ ಇರುವುದನ್ನು ಕಲಿತಿರುವುದೇ ತಂದೆಯಿಂದ. ಹೀಗಾಗಿಯೇ ಕ್ಷೇತ್ರದ ಸರ್ವ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.


ಲಾಕ್‌ಡೌನ್‌ದಿಂದ ಹೊಲದಲ್ಲೇ ಹಾಳಾಗಿರುವ ಕಲ್ಲಂಗಡಿ ಹಾಗೂ ಇತರ ತೋಟಗಾರಿಕಾ ಬೆಳೆಗಳನ್ನು ಶಾಸಕ ಡಾ| ಅಜಯಸಿಂಗ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋವಿಡ್ 19 ವೈರಸ್ ವಿರುದ್ಧ ಯುದ್ಧ
– ಬಡವರಿಗೆ, ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ದಿನಾಲು ಊಟ ಒದಗಿಸಲು ಜೇವರ್ಗಿ ಪಟ್ಟಣ ಸೇರಿ 42 ಪಂಚಾಯತಿಗಳಿಗೆ ದಿನಾಲೂ 14,000 ಮೇಲ್ಪಟ್ಟು ಅನ್ನದ ಪಾಕೆಟ್‌ಗಳ ವಿತರಣೆ. ಜತೆಗೆ ರೈತರಿಂದ ಖರೀದಿಸಲಾಗುವ ತರಕಾರಿ ಪೂರೈಕೆ.

– ಜೇವರ್ಗಿ ತಾಲೂಕಾಡಳಿತಕ್ಕೆ ತಹಶೀಲ್ದಾರ್‌ ಮೂಲಕ ಈ ವರೆಗೆ 200 ಕ್ವಿಂಟಲ್‌ಗ‌ೂ ಅಧಿಕ ಅಕ್ಕಿ ಧಾನ್ಯ ವಿತರಣೆ.

– ಜಿಲ್ಲೆಯ ಸಂಸದರ ಜೊತೆ ಕೋವಿಡ್ 19 ವೈರಸ್ ಕುರಿತಾದ ಸಭೆ. ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ.

– ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಿನ ತಹಶೀಲ್ದಾರ್‌ ಜೊತೆ ನಾಲ್ಕು ಸಭೆ. ಅಧಿಕಾರಿಗಳಿಗೆ ಸೂಚನೆ.

– ಜೇವರ್ಗಿ ತಾಲೂಕಿನಾದ್ಯಂತ 30 ಸಾವಿರ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ವಿತರಣೆ.

– ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ದೊರಕಲು ತಾಲೂಕಿನ ಆಸ್ಪತ್ರೆಗಳ ಪರಿಶೀಲನೆ.

– ಜೇವರ್ಗಿ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳಿಗೆ ಸೀಲ್ಡ್‌ ಮಾಸ್ಕ್ ವಿತರಣೆ.

– ಕಲಬುರಗಿ ಜಿಲ್ಲಾಧಿಕಾರಿಗೆ 11,000 ಮಾಸ್ಕ್ ವಿತರಣೆ ಜತೆಗೆ ಜಿಲ್ಲಾಧಿಕಾರಿ ಜೊತೆ ಕೋವಿಡ್ 19 ವೈರಸ್ ಕುರಿತಾದ ಸಭೆ.

– ಲಾಕ್‌ಡೌನ್‌ದಿಂದ ಬೆಂಗಳೂರಿನಲ್ಲಿ ಸಿಲುಕಿರುವ ಕಲಬುರಗಿ ಜಿಲ್ಲೆಯ ಹಾಗೂ ಜೇವರ್ಗಿ ಕ್ಷೇತ್ರದ ಕಾರ್ಮಿಕರಿಗೆ ಪಡಿತರ ಕಿಟ್‌ ಹಾಗೂ ಊಟ ವಿತರಣೆ.

– ಕಲಬುರಗಿ ಇಎಸ್‌ಐ ಹಾಗೂ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ.


ಬೇರೆ ಊರಿಗೆ ಹೋಗದೇ ಜೇವರ್ಗಿಯಲ್ಲಿ ಸಿಲುಕಿ ಕ್ವಾರಂಟೈನ್‌ ಮುಗಿಸಿ ವಾಪಸ್‌ ತೆರಳುತ್ತಿರುವವರ ಜತೆ ಶಾಸಕ ಡಾ| ಅಜಯಸಿಂಗ್‌ ಸಮಾಲೋಚನೆ.

ಜೇವರ್ಗಿ ಕ್ಷೇತ್ರದ ಅಭಿವೃದ್ಧಿಗೆ ಲಕ್ಷ್ಯ ವಹಿಸುವುದು ಹಾಗೂ ಕ್ಷೇತ್ರದ ಜನರ ನೋವುಗಳಿಗೆ ಸ್ಪಂದಿಸುವುದು ತಮ್ಮ ಪ್ರಥಮ ಆದ್ಯತೆ. ಕೋವಿಡ್ 19 ವೈರಸ್ ನಂತಹ ಸಂಕಷ್ಟದ ಸಂದರ್ಭದಲ್ಲಿ ಪರಿಣಾಮಕಾರಿ ನಿಟ್ಟಿನಲ್ಲಿ ಸ್ಪಂದಿಸಲಾಗುತ್ತಿದೆ. ಯಾವುದೇ ಟೀಕೆಗಳಿಗೆ ಕಿವಿಗೊಡದೇ ಮುಂದೆ ನೋಡಿ ಜನಪರ ಕೆಲಸ ಮಾಡುವುದೇ ತಮ್ಮ ಧ್ಯೇಯವಾಗಿದೆ. ಕೋವಿಡ್ 19 ವೈರಸ್ ನಿಂದ ರೈತರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದು, ತೋಟಗಾರಿಕೆ ಬೆಳಗಳು ಸಂಪೂರ್ಣ ನಾಶವಾಗಿವೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು.

– ಡಾ| ಅಜಯಸಿಂಗ್‌, ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ

ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ ಜೇವರ್ಗಿ ತಾಲೂಕಿನ 42 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 148 ಹಳ್ಳಿಗಳಿಗೆ ಧರ್ಮಸಿಂಗ್‌ ಫೌಂಡೇಷನ್‌ ವತಿಯಿಂದ ಬಡವರಿಗೆ, ನಿರ್ಗತಿಕರಿಗೆ ಹಾಗೂ ಅಲೆಮಾರಿ ಜನಾಂಗದವರಿಗೆ ಶಾಸಕ ಡಾ| ಅಜಯ್‌ಸಿಂಗ್‌ ನೇತೃತ್ವದಲ್ಲಿ ಈಗಾಗಲೇ ಎರಡು ಹೊತ್ತು 1.35 ಲಕ್ಷ ಆಹಾರದ ಪೊಟ್ಟಣಗಳನ್ನು ವಿತರಿಸಿರುವುದು ಮಾದರಿ ಕಾರ್ಯವಾಗಿದೆ.

– ರವಿ ಕುರಳಗೇರಾ, ಕುರಳಗೇರಾ ಗ್ರಾ.ಪಂ ಉಪಾಧ್ಯಕ್ಷ

ಕಾಲಿಗೆ ಚುಚ್ಚಿದ ಮುಳ್ಳು ಇನ್ನೊಬ್ಬರು ತೆಗೆದರೆ ಎಷ್ಟೋ ಸಂತೋಷವಾಗುತ್ತದೆ. ಆದರೆ ದೇಹಕ್ಕೆ ಅಂಟಿದ ಕ್ಯಾನ್ಸರ್‌ ಅನ್ನು ಶಸ್ತ್ರ ಚಿಕಿತ್ಸೆ ಮೂಲಕ ಕಿತ್ತೂಗೆದು ಮರುಜನ್ಮ ನೀಡಿದ್ದ ಅಜಯಸಿಂಗ್‌ ಸಾಹೇಬರು ದಿಕ್ಕು ತೋಚದ ಇಂದಿನ ಸಂದರ್ಭದಲ್ಲಿ ಅನ್ನ, ಆಹಾರವನ್ನು ನೀಡಿ ಮರುಜನ್ಮ ನೀಡಿದ್ದಾರೆ.

– ದಾಮಮ್ಮ, ಜೇವರ್ಗಿ ಪಟ್ಟಣದ ನಿವಾಸಿ

ಜೇವರ್ಗಿ ಶಾಸಕರು ಜನಸೇವಕ ರಾಜಕಾರಣಿ. ಬಡವರು, ದೀನ ದಲಿತರ ಬಗೆಗಿನ ಅವರ ಕಾಳಜಿ, ಕನಿಕರ, ಮಮಕಾರ ಶ್ಲಾಘನೀಯ. ಕಷ್ಟದಲ್ಲಿರುವ ಬಡವರ ಹಸಿವು ನೀಗಿಸುವ ಕೆಲಸ ಮಾಡುತ್ತಿರುವ ಅವರು ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಆಹಾರದ ಪೊಟ್ಟಣ ವಿತರಿಸಿದ್ದಾರೆ. ತಾಲೂಕಾಡಳಿತಕ್ಕೆ 250 ಕ್ವಿಂಟಲ್‌ ಅಕ್ಕಿ, ತರಕಾರಿ, ಮಸಾಲೆ ಪದಾರ್ಥ ಸೇರಿದಂತೆ ವಿವಿಧ ಆಹಾರ ಸಾಮಗ್ರಿ ನೀಡುವ ಮೂಲಕ ನಿತ್ಯ 15 ಸಾವಿರ ನಿರ್ಗತಿಕರಿಗೆ, ಗುಡಿಸಲು ವಾಸಿಗಳಿಗೆ, ಬಡವರಿಗೆ ಆಹಾರ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

– ವಿಜಯಕುಮಾರ ಪಾಟೀಲ, ಮಾಜಿ ಅಧ್ಯಕ್ಷರು, ಯೂತ್‌ ಕಾಂಗ್ರೆಸ್‌ ಜೇವರ್ಗಿ

ಕ್ಷೇತ್ರದ ಸರ್ವ ಜನರ ಆರೋಗ್ಯದ ಒಳಿತಿಗಾಗಿ ಶ್ರಮಿಸುತ್ತಾ ಬರುತ್ತಿರುವ ಜೇವರ್ಗಿ ಶಾಸಕ ಡಾ| ಅಜಯಸಿಂಗ್‌ ಅವರು, ಕೋವಿಡ್ 19 ವೈರಸ್ ಸಂಕಟದ ಈ ಸಮಯದಲ್ಲಿ ಮನೆಯ ಮಗನಂತೆ ಸ್ಪಂದಿಸುತ್ತಿರುವುದು ರಾಜ್ಯಕ್ಕೇ ಮಾದರಿಯಾಗಿದೆ.

– ನೀಲಕಂಠ ಆವಂಟಿ, ಕಾಂಗ್ರೆಸ್‌ ಯುವ ಮುಖಂಡ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.