ಸರಕಾರದ ಹೋರಾಟದಲ್ಲಿ ಜನ ಭಾಗಿಯಾಗಲಿ : ಶಾಸಕ ಡಾ| ಭರತ್‌ ಶೆಟ್ಟಿ ವೈ


Team Udayavani, Apr 18, 2021, 5:00 AM IST

ಸರಕಾರದ ಹೋರಾಟದಲ್ಲಿ ಜನ ಭಾಗಿಯಾಗಲಿ : ಶಾಸಕ ಡಾ| ಭರತ್‌ ಶೆಟ್ಟಿ ವೈ

ಆರೋಗ್ಯದ ವಿಚಾರ ಬಂದಾಗ ನಮ್ಮ ದೇಶದ, ರಾಜ್ಯದ, ನನ್ನ ಕ್ಷೇತ್ರದ ಜನರ ಹಿತಾಸಕ್ತಿಯೇ ನಮಗೆ ಮುಖ್ಯವಾಗಿದ್ದು, ಜನರಲ್ಲಿ ಆತಂಕ ಮತ್ತು ಭಯ ಹುಟ್ಟಿಸುವ ಯಾವ ಉದ್ದೇಶವೂ ನಮ್ಮ ಸರಕಾರದ್ದಲ್ಲ.

ಆರೋಗ್ಯ ರಕ್ಷಣೆ ನಮ್ಮಲ್ಲರ ಪ್ರಥಮ ಆದ್ಯತೆಯಾಗಬೇಕು. ಯಾವುದೇ ಕಾನೂನು ಜನರನ್ನು ತೊಂದರೆಗೀಡು ಮಾಡಲು ಅಲ್ಲ. ಕಾನೂನು, ಲಾಕ್‌ಡೌನ್‌ ಏನಿದ್ದರೂ ಸರಕಾರದ ಕೊನೆಯ ಅಸ್ತ್ರವಾಗಿದೆ.

ಜನರು ಸ್ವಯಂ ಪ್ರೇರಿತರಾಗಿ ಜಾಗೃತರಾಗಿದ್ದಾಗ ಕೊರೊನಾವನ್ನು ಮೆಟ್ಟಿ ನಿಲ್ಲಲು ಸಾಧ್ಯವಿದೆ. ಕೊರೊನಾಗೆ ತುತ್ತಾಗುವವರು ಯಾರು ಸೋಂಕಿತ ಹತ್ತಿರವಿದ್ದಾಗ, ಹತ್ತಿರ ಬಂದಾಗ, ಆತ ಮುಟ್ಟಿದ ವಸ್ತುಗಳನ್ನು ಮುಟ್ಟಿದಾಗ ಅಲ್ಲವೇ? ಇದನ್ನೇ ನಾವು ದೂರ ಮಾಡಿದರೆ? ಇದು ನಮ್ಮಿಂದ ಸಾಧ್ಯ. ಅನಗತ್ಯವಾಗಿ ಓಡಾಟ, ಏನೂ ಆಗುವುದಿಲ್ಲ ಎಂಬ ಭಂಡ ಧೈರ್ಯ ತೋರಿಸುವ ಸಮಯವಲ್ಲ. ಯಾವುದೇ ಜನ ಜಾತ್ರೆ, ಕಾರ್ಯಕ್ರಮ, ಜನರನ್ನು ಒಟ್ಟುಗೂಡಿಸುವ ಕಾರ್ಯಕ್ರಮಕ್ಕೆ ನಾವೇ ಸ್ವಯಂ ಪ್ರೇರಿತರಾಗಿ ಹೋಗದೆ ಸಾಮಾಜಿಕ ಅಂತರ ಕಾಪಾಡಿಕೊಂಡಾಗ ಕೊರೊನಾ ನಮಗೆ ಬಾರದಂತೆ ನೋಡಿಕೊಳ್ಳಬಹುದು.
ಸರಕಾರದ ಉದ್ದೇಶವೂ ಇದೇ. ಸೋಂಕು ಹರಡದಂತೆ ನೋಡಿಕೊಳ್ಳು ವುದೇ ಪ್ರಥಮ ಆದ್ಯತೆ. ಇದಕ್ಕಾಗಿ ಜನಸಂದಣಿ ನಿಯಂತ್ರಿಸಲು ಬಯಸುತ್ತದೆ. ಸೋಂಕುಪೀಡಿತರನ್ನು ಜನರ ಗುಂಪಿನಿಂದ ಬೇರ್ಪಡಿಸಿ ಚಿಕಿತ್ಸೆ ನೀಡುವುದು ಆಗಿದೆ. ಈ ಬಾರಿ ಕೊರೊನಾ ಹರಡಿದರೂ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಕಾರಣ ಇದರ ನಿಗ್ರಹವನ್ನು, ಕೊಡಬೇಕಾದ ಚಿಕಿತ್ಸೆಯ ವ್ಯವಸ್ಥೆ ,ಯೋಜನೆ ತಿಳಿದಿರುವುದರಿಂದ ಇದೀಗ ಇರುವ ಗುರಿ ಅಂದರೆ ಸೋಂಕು ನಿಯಂತ್ರಣವೇ ಆಗಿದೆ.

ನಿಮ್ಮ ಬಾತ್‌ ರೂಮ್‌, ಟೇಬಲ್‌ ಮೇಲ್ಭಾಗಗಳು, ಚೇರ್‌ಗಳ ಹಿಡಿಕೆಗಳು, ಬಾಗಿಲ ಚಿಲಕಗಳು ಹೀಗೆ ಎಲ್ಲ ಕಡೆ ಸ್ಯಾನಿಟೆ„ಸ್‌ ದ್ರವವನ್ನು ಸಿಂಪಡಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಔಷಧ ಸಿಂಪಡಣೆಯ ಅನಂತರ ಕೇವಲ 15 ಸೆಕೆಂಡುಗಳಿಂದ ಕೆಲವು ನಿಮಿಷಗಳಲ್ಲಿ ರೋಗಾಣುಗಳು ಸಾಯುತ್ತವೆ ಮತ್ತು ಇದು ನೀವು ಸಿಂಪಡಿಸಿದ ಔಷಧದ ಗುಣಮಟ್ಟದ ಮೇಲೂ ಕೂಡ ಅವಲಂಬಿತವಾಗಿರುತ್ತದೆ ಎಂಬುದು ನೆನಪಿರಲಿ.

ಸಾಧ್ಯವಾದಷ್ಟು ಕೆಲವು ವಸ್ತುಗಳನ್ನು ಪದೇಪದೆ ಮುಟ್ಟುವುದರಿಂದ ದೂರವಿದ್ದರೆ ಒಳ್ಳೆಯದು. ಅದು ನಿಮ್ಮ ನೆಚ್ಚಿನ ಹಣದ ನೋಟುಗಳಾದರೂ ಸರಿ. ನಿಮ್ಮ ಮೊಬೈಲ್‌ ಫೋನ್‌ ಅಥವಾ ಟಿವಿ ಸ್ಕ್ರೀನ್‌, ನಿಮ್ಮ ರಿಮೋಟ್‌ ವಸ್ತುಗಳು ಹೀಗೆ ಇಂತಹ ವಸ್ತುಗಳಿಂದ ಸ್ವಲ್ಪ ದೂರವಿದ್ದರೆ ಒಳ್ಳೆಯದು.

ಯಾವುದೇ ಕಾರಣಕ್ಕೂ ಮೊಬೆ„ಲ್‌ ಫೋನ್‌ ಅನ್ನು ಬಾತ್‌ರೂಮ್‌ಗೆ ತೆಗೆದುಕೊಂಡು ಹೋಗಬೇಡಿ. ತೇವಾಂಶ ಹೆಚ್ಚಿರುವ ಕಾರಣ ಸೂಕ್ಷ್ಮಾಣುಗಳ ಪೋಷಣೆಗೆ ನೀವೇ ಅನುವು ಮಾಡಿಕೊಟ್ಟಂತಾಗುತ್ತದೆ. ಒಂದು ವೇಳೆ ನಿಮಗೆ ಔಷಧ ಸಿಂಪಡಣೆಗೆ ಸಾಧ್ಯತೆ ಇಲ್ಲದೆ ಹೋದರೆ ಅಥವಾ ನೀವು ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಕೈಗಳನ್ನು ಆಗಾಗ ಸ್ಯಾನಿಟೆ„ಸರ್‌ ಉಪಯೋಗಿಸಿ ಸ್ವತ್ಛ ಮಾಡಿಕೊಳ್ಳುತ್ತಿರಿ. ಮತ್ತು ಪ್ರಮುಖವಾಗಿ ಯಾವುದೇ ಕಾರಣಕ್ಕೂ ಮನೆಯ ಹೊರಗಡೆ ಹೋದಂತಹ ಸಂದರ್ಭದಲ್ಲಿ ನಿಮ್ಮ ಕೈಗಳಿಂದ ನಿಮ್ಮ ಕಣ್ಣುಗಳು, ಮೂಗು, ಮುಖ ಹಾಗೂ ಬಾಯಿಯನ್ನು ಆಗಾಗ ಮುಟ್ಟಿ ಕೊಳ್ಳಬೇಡಿ. ಕೋವಿಡ್‌ ಲಕ್ಷಣ ನಮಗೆಲ್ಲ ತಿಳಿದೇ ಇದೆ. ಅನುಮಾನ ಕಂಡು ಬಂದರೆ ತತ್‌ಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ,ಕುಟುಂಬ ಸದಸ್ಯರಿಗೆ, ಹಿರಿಯರಿಗೆ ಹರಡದಂತೆ ಜಾಗ್ರತೆ ವಹಿಸಿ, ಸೋಂಕು ಇದೆ ಎಂದು ಗೊತ್ತಾದರೆ ತತ್‌ಕ್ಷಣ ಚಿಕಿತ್ಸೆ ನೀಡಿದರೆ ಗುಣಮುಖವಾಗುತ್ತದೆ. ಭಯ ಪಡುವ ಅಗತ್ಯವಿಲ್ಲ. ಇದಕ್ಕಾಗಿ ನಮ್ಮ ಕಿವಿ ಮಾತು ಜನರು ಸ್ವಯಂ ನಿಯಂತ್ರಣ ವಹಿಸಬೇಕು. ಸೋಂಕು ನಿರ್ಮೂಲನೆಗೆ ಸಹಕಾರ ನೀಡಬೇಕು ಎಂಬುದು ಕಳಕಳಿಯ ಮನವಿ.

ಟಾಪ್ ನ್ಯೂಸ್

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

Rajeev Chandrashekhar

Corrupt ಡಿಕೆಶಿ ಸರ್ಟಿಫಿಕೆಟ್‌ ಬೇಕಾಗಿಲ್ಲ: ಕೇಂದ್ರ ಸಚಿವ ರಾಜೀವ್‌ ತಿರುಗೇಟು

1-wqewqe

2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ

mamata

CAA, NRC ರದ್ದು: ದೀದಿ ಶಪಥ ಪ್ರಣಾಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪರಿಷ್ಕರಣೆ

Karnataka; ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪರಿಷ್ಕರಣೆ

ವಕೀಲರಿಗೂ ತಟ್ಟಿದ ಬೇಸಿಗೆ ಬಿಸಿ: ಕಪ್ಪು ಕೋಟ್‌ಗೆ ವಿನಾಯಿತಿ

ವಕೀಲರಿಗೂ ತಟ್ಟಿದ ಬೇಸಿಗೆ ಬಿಸಿ: ಕಪ್ಪು ಕೋಟ್‌ಗೆ ವಿನಾಯಿತಿ

1-wewqeqwe

NDA; ಮಂಡ್ಯಕ್ಕೆ ಬಂದಿರುವ ಕುಮಾರಸ್ವಾಮಿಯನ್ನು ಸೋಲಿಸಿ ಮನೆಗೆ ಕಳಿಸಿ: ಸಿದ್ದರಾಮಯ್ಯ

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

ಮತ್ತೆ 60 ಮಂದಿಯಿಂದ ಉಮೇದುವಾರಿಕೆ; 2ನೇ ಹಂತದ ಚುನಾವಣೆಗೆ ಈವರೆಗೆ 168 ಮಂದಿ ಕಣಕ್ಕೆ

ಮತ್ತೆ 60 ಮಂದಿಯಿಂದ ಉಮೇದುವಾರಿಕೆ; 2ನೇ ಹಂತದ ಚುನಾವಣೆಗೆ ಈವರೆಗೆ 168 ಮಂದಿ ಕಣಕ್ಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.