Udayavni Special

ಇ.ಡಿ. ಮುಂದೆ ರಿಯಾ ಹಾಜರು; ಹಣಕಾಸು ಅವ್ಯವಹಾರ ಕುರಿತು ವಿಚಾರಣೆ; ಆಸ್ತಿ ವಿವರ ಕೊಡದ ನಟಿ


Team Udayavani, Aug 8, 2020, 11:07 AM IST

ಇ.ಡಿ. ಮುಂದೆ ರಿಯಾ ಹಾಜರು; ಹಣಕಾಸು ಅವ್ಯವಹಾರ ಕುರಿತು ವಿಚಾರಣೆ; ಆಸ್ತಿ ವಿವರ ಕೊಡದ ನಟಿ

ಇ.ಡಿ.ಕಚೇರಿಗೆ ಶುಕ್ರವಾರ ವಿಚಾರಣೆಗಾಗಿ ಆಗಮಿಸಿದ ರಿಯಾ ಚಕ್ರವರ್ತಿ

ಮುಂಬಯಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪ ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ಶುಕ್ರವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ಹಣಕಾಸು ಅಕ್ರಮ ಪ್ರಕರಣ ಸಂಬಂಧ ಬಲ್ಲಾರ್ಡ್‌ ಎಸ್ಟೇಟ್‌ನಲ್ಲಿರುವ ಇಡಿ ಕಚೇರಿಗೆ ರಿಯಾ ಮತ್ತು ಸಹೋದರ ಶೋವಿಕ್‌ ಹಾಜರಾಗಿದ್ದಾರೆ. ಇದೇ ವೇಳೆ, ಅವರ ಬ್ಯುಸಿನೆಸ್‌ ಮ್ಯಾನೇಜರ್‌ ಶ್ರುತಿ ಮೋದಿಗೆ ಕೂಡ ಸಮನ್ಸ್‌ ಜಾರಿಯಾದ ಕಾರಣ, ಅವರೂ ಇ.ಡಿ. ಕಚೇರಿಗೆ ಆಗಮಿಸಿದ್ದರು. ಇದಕ್ಕೂ ಮುನ್ನ ತಮಗೆ ಇ.ಡಿ. ಮುಂದೆ ಹಾಜರಾಗುವು ದಕ್ಕೆ ವಿನಾಯ್ತಿ ನೀಡಬೇಕೆಂದು ರಿಯಾ ಕೋರಿದ್ದ ಮನವಿಯನ್ನು ತಿರಸ್ಕರಿಸಲಾಗಿತ್ತು. ಇದೇ ವೇಳೆ, ತನ್ನ ಆಸ್ತಿಪಾಸ್ತಿಯ ದಾಖಲೆಗಳನ್ನು ಇ.ಡಿ.ಗೆ ನೀಡಲು ರಿಯಾ ನಿರಾಕರಿಸಿದ್ದಾರೆ ಎಂದೂ ಹೇಳಲಾಗಿದೆ.

ಸುಶಾಂತ್‌ರ ಖಾತೆಯಿಂದ 15 ಕೋಟಿ ರೂ.ಗಳನ್ನು ಬೇರೆ ಖಾತೆಗೆ ವರ್ಗಾಯಿಸಲಾಗಿದೆ ಹಾಗೂ ಹಣಕಾಸು ವಂಚನೆ ಮಾಡುವ ಮೂಲಕ ರಿಯಾ ಸುಶಾಂತ್‌ರ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಸುಶಾಂತ್‌ ತಂದೆ ದೂರು ನೀಡಿದ್ದರು.

ಬಿಹಾರದ ಅಧಿಕಾರಿ ಬಿಡುಗಡೆ
ಸುಶಾಂತ್‌ ಪ್ರಕರಣದ ತನಿಖೆಗೆಂದು ಮುಂಬಯಿಗೆ ಆಗಮಿಸಿದ್ದ ಬಿಹಾರ ಐಪಿಎಸ್‌ ಅಧಿಕಾರಿಯನ್ನು ಶುಕ್ರವಾರ ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಗಿದೆ. ಜತೆಗೆ, ಬಿಹಾರಕ್ಕೆ ಮರಳಲು ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ ಮಾತನಾಡಿರುವ ಅಧಿಕಾರಿ ವಿನಯ್‌ ತಿವಾರಿ, ಇಷ್ಟು ದಿನ ಮುಂಬಯಿ ಪೊಲೀಸರು ಕ್ವಾರಂಟೈನ್‌ನಲ್ಲಿ ಇಟ್ಟಿದ್ದು ನನ್ನನ್ನಲ್ಲ, ಬದಲಿಗೆ ಸುಶಾಂತ್‌ ಸಾವಿನ ತನಿಖೆಯನ್ನು ಎಂದು ಹೇಳಿದ್ದಾರೆ.

ಈ ನಡುವೆ, ತಮ್ಮ ವಿರುದ್ಧದ ಪ್ರಕರಣವನ್ನು ಪಾಟ್ನಾದಿಂದ ಮುಂಬಯಿಗೆ ವರ್ಗಾಯಿಸುವಂತೆ ಕೋರಿ ರಿಯಾ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಬಿಹಾರ ಸರಕಾರ ಶುಕ್ರವಾರ ಮನವಿ ಸಲ್ಲಿಸಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು?

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು ?

ಕೋವಿಡ್ : ಶೇ.78.86 ಚೇತರಿಕೆ

ಕೋವಿಡ್ : ಶೇ.78.86 ಚೇತರಿಕೆ

ಏರ್‌ಇಂಡಿಯಾಗೆ ನಿರ್ಬಂಧ

ಏರ್ ‌ಇಂಡಿಯಾಗೆ ನಿರ್ಬಂಧ

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಕುಡಿಯುವ ನೀರು ಯೋಜನೆಗಳಿಗೆ 540 ಕೋಟಿ ಮಂಜೂರು

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಅಮ್ಮನಾದ ಮಾಯಂತಿ ಐಪಿಎಲ್‌ಗೆ ಇಲ್ಲ

ಅಮ್ಮನಾದ “ಮಾಯಂತಿ” ಐಪಿಎಲ್‌ಗೆ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು?

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು ?

ಕೋವಿಡ್ : ಶೇ.78.86 ಚೇತರಿಕೆ

ಕೋವಿಡ್ : ಶೇ.78.86 ಚೇತರಿಕೆ

ಅಪಘಾತ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ: ಸುಪ್ರೀಂ

ಅಪಘಾತ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ: ಸುಪ್ರೀಂ

ಏರ್‌ಇಂಡಿಯಾಗೆ ನಿರ್ಬಂಧ

ಏರ್ ‌ಇಂಡಿಯಾಗೆ ನಿರ್ಬಂಧ

ಕರ್ನಾಟಕದ ಕೆಲವೆಡೆ ಇಂದು ಭಾರೀ ಮಳೆ

ಕರ್ನಾಟಕದ ಕೆಲವೆಡೆ ಇಂದು ಭಾರೀ ಮಳೆ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಮೀನುಗಾರರ ಸಾಲ ಶೀಘ್ರ ಖಾತೆಗೆ: ಕೋಟ

ಮೀನುಗಾರರ ಸಾಲ ಶೀಘ್ರ ಖಾತೆಗೆ: ಕೋಟ

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು?

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು ?

ಕೋವಿಡ್ : ಶೇ.78.86 ಚೇತರಿಕೆ

ಕೋವಿಡ್ : ಶೇ.78.86 ಚೇತರಿಕೆ

ಅಪಘಾತ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ: ಸುಪ್ರೀಂ

ಅಪಘಾತ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ: ಸುಪ್ರೀಂ

ಏರ್‌ಇಂಡಿಯಾಗೆ ನಿರ್ಬಂಧ

ಏರ್ ‌ಇಂಡಿಯಾಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.