ಆರ್ಥಿಕತೆಯನ್ನು ಮರಳಿ ಹಳಿಗೆ ತರಬಹುದೇ ಆಯವ್ಯಯ?


Team Udayavani, Feb 10, 2020, 6:30 AM IST

artikate

ಇದೀಗ ದೇಶದ 2.9 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನು 2024ಕ್ಕೆ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯತ್ತ ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಬಗ್ಗೆ ಬಹು ರಂಜಿತವಾಗಿ ಹೇಳಿಕೊಂಡಂತೆ ಕಾಣುತ್ತದೆ. ಆದರೆ ಅದನ್ನು ಸಮರ್ಥಿಸಬಲ್ಲ ಅಂಶಗಳು ಕಾಣುತ್ತಿಲ್ಲ. ಕೇಂದ್ರವು ಹಿಂದಿನ ಹಣಕಾಸು ಕೊರತೆಯನ್ನು ಕಡಿಮೆಗೊಳಿಸುವ ವಿಚಾರದ ಬದಲು ಹೆಚ್ಚಿಸುವ ಪ್ರಸ್ತಾವವನ್ನಿಟ್ಟಿದೆ.

ಹೊಸ ದಶಕದ ಹೊಸ್ತಿಲಿನಲ್ಲಿ ಮಂಡಿಸಿದ ಮುಂಗಡ ಪತ್ರವನ್ನು ಆಶೋತ್ತರಗಳ, ಆರ್ಥಿಕ ಬೆಳವಣಿಗೆಯ, ಸಾಮಾಜಿಕ ಆರೈಕೆಯ ಆಯವ್ಯಯವೆಂದು ಕರೆದುಕೊಳ್ಳಲಾಗಿದೆ. “ಹಲವಾರು ಸವಾಲುಗಳ ದುರ್ಗಮ ಭೂಮಿಕೆಯ ನಡುವೆ ಆರ್ಥಿಕತೆಗೆ ವೇಗೋತ್ಕರ್ಷ ಕೊಡಲಾದ ಬಜೆಟ್‌’ ಎಂದು ಬಣ್ಣಿಸಲಾಗಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮನಃಪೂರ್ವಕ ಪ್ರಯತ್ನ ನಡೆದಿದೆ. ಆದರೆ ದೇಶದ ಅಭಿವೃದ್ಧಿಯನ್ನು ಮೊದಲಿನ ವೇಗಕ್ಕೆ ತರುವ ಮತ್ತು ಆರ್ಥಿಕ ಹಿಂಜರಿತದಿಂದ ಹೊರಬರುವ ನಿಟ್ಟಿನಲ್ಲಿ ಬಜೆಟ್‌ ಪ್ರಯತ್ನ ಸಫ‌ಲವಾಗುವುದು ಕಷ್ಟಸಾಧ್ಯ.

ಆರ್ಥಿಕಾಭಿವೃದ್ಧಿಗೆ ಪುನಶ್ಚೇತನ ನೀಡುವಂತಹ ದಿಟ್ಟ ಕ್ರಮಗಳನ್ನು ಘೋಷಿಸಬಹುದೆಂಬ ಅರ್ಥಶಾಸ್ತ್ರಜ್ಞರ, ಉದ್ಯಮ ವಲಯದ ಮತ್ತು ಸಾಮಾನ್ಯ ಜನರ ಅಕಾಂಕ್ಷೆ ಈಡೇರಿದಂತೆ ಕಾಣುತ್ತಿಲ್ಲ. ಶೇರು ಮಾರುಕಟ್ಟೆ ಅಸ್ಥಿರತೆ ಕಾಣುತ್ತಿದೆ. ಬಜೆಟ್‌ ಮಂಡನೆಯ ಸಮಯದಲ್ಲಿ ವಿತ್ತ ಸಚಿವೆ ಅರ್ಥಶಾಸ್ತ್ರಕ್ಕಿಂತಲೂ ಸಾಹಿತ್ಯದ ಮೇಲೆ ಹೆಚ್ಚಿನ ಆಸಕ್ತಿ ತೋರಿಸುವಂತೆ ಗೋಚರವಾಗುತ್ತಿತ್ತು.

ಗ್ರಾಹಕರ ಬೇಡಿಕೆ ಮತ್ತು ವೆಚ್ಚ ಹೆಚ್ಚಿಸಿ ಆರ್ಥಿಕತೆಯನ್ನು
ಪುನಶ್ಚೇತನಗೊಳಿಸುವಂಥ ಮಾಂತ್ರಿಕತೆ ಕಂಡು ಬಂದಿಲ್ಲ. ಉದ್ಯಮ ಮತ್ತು ಗ್ರಾಹಕರಿಗೆ ಗಮನಾರ್ಹ ಕೊಡುಗೆಗಳೇನೂ ಇರಲಿಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ಜನರ ಕೈಯಲ್ಲಿ ಹೆಚ್ಚು ಹಣ ಉಳಿಯುವಂತಹ ಮತ್ತು ಅವರ ಖರೀದಿ ಸಾಮಾರ್ಥ್ಯ ಹೆಚ್ಚಿಸುವ ಕ್ರಮಗಳು ಬಜೆಟ್‌ನಲ್ಲಿ ಪ್ರಕಟವಾಗಬಹುದೆಂಬ ನಿರೀಕ್ಷೆ ಪ್ರತ್ಯಕ್ಷವಾಗಿ ಗೋಚರವಾಗಲಿಲ್ಲ. ಕಳೆದ ಬಾರಿ ಆರ್ಥಿಕ ಪ್ರಗತಿಗೆ ಪೂರಕ ನಿರ್ಣಯ ಕೈಗೊಳ್ಳದ ಕಾರಣ ಆರ್ಥಿಕತೆ ಕುಂಟುತ್ತಾ ಸಾಗಿತ್ತು.

ಆರ್ಥಿಕತೆಯನ್ನು ಮರಳಿ ಹಳಿಗೆ ತರುವ ಸಲುವಾಗಿ ಎಲ್ಲ ಕ್ಷೇತ್ರವನ್ನು ಸಮಾಧಾನಪಡಿಸಲು ಹೊರಟ ಪ್ರಯತ್ನ ಎಷ್ಟರ ಮಟ್ಟಿಗೆ ಅನುಷ್ಠಾನಗೊಳ್ಳುತ್ತದೆ ಎಂಬ ಅನುಮಾನ ಕಾಡುತ್ತಿದೆ. ಕೈಗಾರಿಕಾ ಉತ್ಪಾದನೆಗೆ ಉತ್ತೇಜನ, ನಿರುದ್ಯೋಗ ಸಮಸ್ಯೆಗೆ ಪರಿಹಾರ, ಮೂಲಸೌಕರ್ಯ ಕ್ಷೇತ್ರಕ್ಕೆ ಹೊಸ ಸಂಚಲನ, ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪ, ಆಹಾರೋತ್ಪಾದನೆಗೆ ಸೂಕ್ತ ಬೆಲೆ, ತನ್ಮೂಲಕ ಗ್ರಾಹಕರು ಮತ್ತು ವಾಣಿಜ್ಯ ಮಾರುಕಟ್ಟೆಯಲ್ಲಿ ಲವಲವಿಕೆ ಮೂಡಿಸಿ ಜನರ ಕೈಗೆ ಹಣದ ಹರಿವು ಬರುವಂತಹ ಪ್ರಾಮಾಣಿಕ ಯತ್ನ ನಡೆದಿಲ್ಲ. ಮೂಲ ಸೌಕರ್ಯದತ್ತ ಮಾಡಿದ ಹೂಡಿಕೆ, ಸ್ಟಾರ್ಟ್‌ಅಪ್‌ಗೆ ಕಿಕ್‌ ಸ್ಮಾರ್ಟ್‌, ಉತ್ತಮ ನೀತಿ. ಆದರೆ ಕಾರ್ಯ ಸಾಧ್ಯತೆಯ ದೃಷ್ಟಿಯಿಂದ ಪರಿಣಾಮವನ್ನು ಕಾದು ನೋಡಬೇಕಾಗಿದೆ.

ಸತತ ಮೂರನೇ ವರ್ಷವೂ ವಿತ್ತೀಯ ಕೊರತೆ ಗುರಿ ತಪ್ಪಿದೆ. ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ. 3.3ರಷ್ಟಕ್ಕೆ ನಿಯಂತ್ರಿಸುವ ಗುರಿಯಿತ್ತು.

ಇದನ್ನು ಬಜೆಟ್‌ನಲ್ಲಿ ಶೇ. 3.8ಕ್ಕೆ ಹೆಚ್ಚಿಸಲಾಗಿದೆ. 2020-21ನೇ ಹಣಕಾಸು ವರ್ಷಕ್ಕೆ ಶೇ. 3.5ರಷ್ಟು ಇರಲಿದೆ. ಇದರ ಅರ್ಥ ಅಗಾಧ ಸಾಲದ ಮೊರೆ ಹೋಗುವುದು ಸೂಕ್ತವಲ್ಲ ಎಂದು ಸರಕಾರ ನಿಶ್ಚಯಿಸಿದೆ. ಆದರೆ ದೇಶ ಎದುರಿಸುತ್ತಿರುವ ಸಂಪನ್ಮೂಲ ಕೊರತೆಯ ಬಗ್ಗೆಯಾಗಲಿ, ಕೃಷಿ ಹಾಗೂ ಕೈಗಾರಿಕಾ ಬಿಕ್ಕಟ್ಟುಗಳ ನಿವಾರಣೆಗಳ ಬಗ್ಗೆಯಾಗಲಿ, ಶೇ. 7.2 ರಷ್ಟು ಪ್ರಮಾಣದ ನಿರುದ್ಯೋಗ ಸಮಸ್ಯೆಯ ಬಗ್ಗೆಯಾಗಲಿ, ದೇಶದ ಆಂತರಿಕ ಹಾಗೂ ಬಾಹ್ಯ ಸಾಲಗಳ ಹೊರೆಯನ್ನು ನಿವಾರಿಸಿಕೊಳ್ಳುತ್ತಿರುವ ಗಂಭೀರ ಪ್ರಯತ್ನ ಎದ್ದು ಕಾಣುತ್ತಿಲ್ಲ. ಸಾರ್ವಜನಿಕ ಬ್ಯಾಂಕಿಂಗ್‌ ಅಸ್ತವ್ಯಸ್ತವಾಗಿದೆ.

ಅನುತ್ಪಾದಕ ಆಸ್ತಿ ಸೆಪ್ಟಂಬರ್‌ ಅಂತ್ಯದಲ್ಲಿ ಶೇ.11.2ರಿಂದ ಡಿಸೆಂಬರ್‌ ಅಂತ್ಯಕ್ಕೆ ಶೇ.9.1ಕ್ಕೆ ಇಳಿದು ಚೇತರಿಕೆ ಕಂಡರೂ ಸಾಲ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಬ್ಯಾಂಕ್‌ಗೆ ವಂಚಿಸು ವ ವರ ಮೇಲೆ ತೀಕ್ಷ್ಣ ಕ್ರಮ ಅಗತ್ಯ. ಬ್ಯಾಂಕ್‌ಗಳ ಸಾಲ ಸುಸ್ತಿಯಾಗಲು ಬಿಡಬಾರದು. ಎನ್‌ಬಿಎಫ್ಸಿಗೆ ಕಾಯಕಲ್ಪ ಅಗತ್ಯ. ಬ್ಯಾಂಕ್‌ಗಳು ರಿಟೈಲ್‌, ಎಂಎಸ್‌ಎಂಇ, ಕೃಷಿ ಸಾಲಗಳಿಗೆ ಆದ್ಯತೆ ನೀಡಬೇಕು.

ಕೇಂದ್ರ ಸರಕಾರದ ಆರ್ಥಿಕ ವ್ಯವಹಾರಗಳ ವಿಭಾಗದ ಪ್ರಕಾರ ಸೆಪ್ಟಂಬರ್‌ 2019ರ ವೇಳೆಗೆ ದೇಶದ ಬಾಹ್ಯ ಸಾಲದ ಪ್ರಮಾಣ 557.52 ದಶಲಕ್ಷ ಕೋಟಿ ಅಮೆರಿಕನ್‌ ಡಾಲರ್‌. ಇದು ರಾಷ್ಟ್ರೀಯ ಉತ್ಪನ್ನದ ಆಸುಪಾಸು ಶೇ. 20ರಷ್ಟಾಗಿದೆ. ಒಟ್ಟು ವೆಚ್ಚ ಮತ್ತು ವರಮಾನ ಸಂಗ್ರಹದಲ್ಲಿ ರೂ. 7.96 ಲಕ್ಷ ಕೋಟಿ ಕೊರತೆಯನ್ನು ಭರಿಸಲು ರೂ. 5.45 ಲಕ್ಷ ಕೋಟಿ ಸಾಲ ಸಂಗ್ರಹಿಸಲು ಸರಕಾರ ಉದ್ದೇಶಿಸಿದೆ. ಕೇಂದ್ರೋದ್ಯಮಗಳ ಶೇರು ವಿಕ್ರಯದ ಮೂಲಕ ರೂ. 2.1 ಲಕ್ಷ ಕೊಟಿ ಗುರಿ ನಿಗದಿಪಡಿಸಲಾಗಿದೆ.

ಕೃಷಿಗೂ ಕೈಗಾರಿಕೆಗೂ ನೇರವಾದ ಸಂಬಂಧವಿದೆ. ಇತರ ಎಲ್ಲಾ ವಲಯಗಳು ಈ ವಲಯಗಳ ಬೆಳವಣಿಗೆಯೇ ಮೇಲೆಯೇ ನಿಂತಿವೆ. ಆಹಾರ ಉದ್ಯೋಗ, ಬೇಡಿಕೆ, ಉತ್ಪಾದನಾ ಸಾಮರ್ಥಯದ ಹೆಚ್ಚಳ ಒಟ್ಟಾರೆ ಒಂದು ದೇಶದ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾಗುವ ಅಂಶಗಳು. ಆದರೆ ಪ್ರಸಕ್ತ ಬಜೆಟ್‌ ಇವುಗಳ ಮೂಲಭೂತ ಅಭಿವೃದ್ಧಿಯ ಬಗ್ಗೆ ಸ್ವಷ್ಟವಾಗಿರುವ ಒಂದು ಮುನ್ನೋಟವನ್ನು ಕೊಡುವುದಿಲ್ಲ.

2022ರ ವೇಳೆಗೆ ರೈತರ ತಲಾ ಆದಾಯ ದುಪ್ಪಟ್ಟಾಗಬೇಕಾದರೆ ದೇಶದ ಆರ್ಥಿಕತೆಯಲ್ಲಿ ಎರಡಂಕಿಯ ಬೆಳವಣಿಗೆಯಾಗಬೇಕು. ಕೃಷಿ ಕ್ಷೇತ್ರದಲ್ಲಿ ರೂ. 2.84 ಲಕ್ಷ ಕೋಟಿಯ ಕ್ರಿಯಾ ಯೋಜನೆ ಹಾಕಿಕೊಳ್ಳಲಾಗಿದ್ದು ವಿವರಗಳು ದೊರಕುವ ನಿರೀಕ್ಷೆ ಇದೆ. ಕೃಷಿ ಕ್ಷೇತ್ರಕ್ಕೆ ರೂ. 15 ಲಕ್ಷ ಕೋಟಿ ಸಾಲ, ಕೃಷಿ ಉತ್ಪನ್ನ ವಿತರಣೆ ಮಾಡುವ ದೊಡ್ಡ ಸರಕಾರದ ಗುರಿಯಿಂದ ಹಾಗೂ ಹಾಲು ಮೀನು ಉತ್ಪಾದನೆಗೆ ವಿಶೇಷ ಬೆಂಬಲದಿಂದ ಯೋಜನೆ ಸಾಕಾರಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕು.

ಇದೀಗ ದೇಶದ 2.9 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನು 2024ಕ್ಕೆ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯತ್ತ ಕೊಂಡೊ ಯ್ಯುವ ಮಹತ್ವಾಕಾಂಕ್ಷೆಯ ಬಗ್ಗೆ ಬಹು ರಂಜಿತವಾಗಿ ಹೇಳಿ ಕೊಂಡಂತೆ ಕಾಣುತ್ತದೆ. ಆದರೆ ಅದನ್ನು ಸಮರ್ಥಿಸಬಲ್ಲ ಅಂಶಗಳು ಕಾಣುತ್ತಿಲ್ಲ. ಅದೇ ಸಂದರ್ಭದಲ್ಲಿ ಜನ ಸಾಮಾನ್ಯರ ತಲಾ ಆದಾಯದ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ತನ್ನ ಹಿಂದಿನ ಹಣಕಾಸು ಕೊರತೆಯನ್ನು ಕಡಿಮೆಗೊಳಿಸುವ ವಿಚಾರದ ಬದಲು ಹೆಚ್ಚಿಸುವ ಪ್ರಸ್ತಾವವನ್ನಿಟ್ಟಿದೆ.

ಹಣಕಾಸು ವಲಯದಲ್ಲಿ ಹೊಸ ಬಂಡವಾಳ ಹೂಡುವುದರ ಬದಲಿಗೆ ಹಿಂದೆಗೆದುಕೊಳ್ಳುತ್ತಿದೆ. ಭಾರತೀಯ ಜೀವ ವಿಮಾ ನಿಗಮವು ದೇಶದ ಒಂದು ನಂಬುಗೆಯ ಸಂಸ್ಥೆ. ಕೇಂದ್ರ ಸರಕಾರ ಸದ್ಯ ಶೇ. 100 ರಷ್ಟು ಪಾಲನ್ನು ಹೊಂದಿದೆ. ಎಲ್‌ಐಸಿಯಲ್ಲಿನ ಸಂಪತ್ತಿನ ಮೌಲ್ಯ 30 ಲಕ್ಷ ಕೋಟಿಗೆ ತಲುಪಿದೆ. ಸರಕಾರವು ಎಲ್‌ಐಸಿಯನ್ನು ಖಾಸಗೀಕರಣಗೊಳಿಸಲು ಮುನ್ನುಡಿ ಬರೆಯುತ್ತಿದೆ.

ಕಳೆದ ವರ್ಷ ಆರ್‌ಬಿಐ ಸರಕಾರಕ್ಕೆ ರೂ. 1.76 ಲಕ್ಷ ಕೋಟಿ ಹೆಚ್ಚುವರಿ ನಿಧಿಯನ್ನು ವರ್ಗಾಯಿಸಿತ್ತು. ಎಲ್‌ಐಸಿ ಸಂಪನ್ಮೂಲ ಕ್ರೋಢೀಕರಣಕ್ಕೆ ಸಾರ್ವಜನಿಕ ಸಂಸ್ಥೆಗಳಲ್ಲಿರುವ ಸರಕಾರಿ ಹೂಡಿಕೆಗಳನ್ನು ಹಿಂಪಡೆಯುವುದು, ಎಲ್‌ಐಸಿ, ಬಿಪಿಸಿಎಲ್‌ನ ಶೇರು ಮಾರಾಟದಿಂದ ರೂ. 2.1 ಲಕ್ಷ ಕೇಳಿ ಹೊಂದಿಸಿಕೊಳ್ಳುವ ಪ್ರಸ್ತಾವನೆಯನ್ನು ಆಯವ್ಯಯ ಹೊಂದಿದೆ. ರೈಲ್ವೆಯನ್ನು ಖಾಸಗೀ ಕರಿಸುವ ಗುರಿಯಿದೆ. ಮಧ್ಯಮ ವರ್ಗದ ಉಳಿತಾಯದತ್ತ ಗಮನ ಹರಿಸಲು ಕಾರಣವಾಗುತ್ತಿದ್ದ ಇನ್‌ಕಮ್‌ ಟ್ಯಾಕ್ಸ್‌ ರಿಬೇಟ್‌ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಘೋಷಣೆ ಇನ್ನೊಂದು ಹೊಸ ಆತಂಕ ಸೃಷ್ಟಿ ಮಾಡಿದೆ. ತೆರಿಗೆದಾರರಿಗೆ ಎರಡು ಆಯ್ಕೆ ನೀಡಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಟಾಪ್ ನ್ಯೂಸ್

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.