78 ಕೋಟಿ ಹೂಡಿಕೆ; ಡಿಕೆ ಶಿವಕುಮಾರ್ ಪುತ್ರಿಗೆ ಜಾರಿ ನಿರ್ದೇಶನಾಲಯ ಸಮನ್ಸ್

Team Udayavani, Sep 10, 2019, 5:03 PM IST

ಬೆಂಗಳೂರು: ಅಕ್ರಮ ಹಣ ವರ್ಗಾವಣೆ, ದೆಹಲಿ ಫ್ಲ್ಯಾಟ್ ನಲ್ಲಿ ಪತ್ತೆಯಾದ 8 ಕೋಟಿ ರೂಪಾಯಿ ನಗದು ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದ ವಶದಲ್ಲಿದ್ದು, ಏತನ್ಮಧ್ಯೆ ಡಿಕೆ ಶಿವಕುಮಾರ್ ಪುತ್ರಿಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸಮನ್ಸ್ ಜಾರಿ ಮಾಡಿದೆ.

ಸೆಪ್ಟೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ಡಿಕೆಶಿ ಪುತ್ರಿ ಐಶ್ವರ್ಯಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ. ಸೆಪ್ಟೆಂಬರ್ 13ರಂದು ಡಿಕೆ ಶಿವಕುಮಾರ್ ಕಸ್ಡಡಿ ಅವಧಿ ಅಂತ್ಯವಾಗಲಿದೆ.

ಪುತ್ರಿ ಐಶ್ವರ್ಯ ಹೆಸರಿನಲ್ಲಿ ಸೋಲ್ ಅಂಡ್ ಸೇಲ್ಸ್ ನಲ್ಲಿ 78 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಅಲ್ಲದೇ ಐಶ್ವರ್ಯ ನ್ಯಾಶನಲ್ ಗ್ಲೋಬಲ್ ಕಾಲೇಜಿನ ಟ್ರಸ್ಟಿಯಾಗಿದ್ದಾರೆ. ಈ ಹೂಡಿಕೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಇ.ಡಿ. ಐಶ್ವರ್ಯಗೆ ಸಮನ್ಸ್ ನೀಡಿದೆ ಎಂದು ವರದಿ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ