55 ಕ್ರಿಕೆಟಿಗರ ಅಭ್ಯಾಸಕ್ಕೆ ಇಸಿಬಿ ಅನುಮತಿ
Team Udayavani, May 30, 2020, 5:43 AM IST
ಲಂಡನ್: ಲಾಕ್ಡೌನ್ನಿಂದಾಗಿ ಒಳಗೇ ಉಳಿದಿದ್ದ ಇಂಗ್ಲೆಂಡ್ ಕ್ರಿಕೆಟಿಗರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಒಟ್ಟು 55 ಮಂದಿ ಆಟಗಾರರಿಗೆ ಹೊರಾಂಗಣದಲ್ಲಿ ಅಭ್ಯಾಸ ನಡೆಸಲು ಇಸಿಬಿ ಅನುಮತಿ ನೀಡಿದೆ.
ಕಳೆದ ವಾರ 18 ಮಂದಿ ಬೌಲರ್ಗಳಿಗೆ ಅಭ್ಯಾಸ ನಡೆಸಲು ಇಸಿಬಿ ಅನುಮತಿ ನೀಡಿತ್ತು. ಇದಕ್ಕೀಗ ಹೆಚ್ಚುವರಿಯಾಗಿ 37 ಕ್ರಿಕೆಟಿಗರನ್ನು ಸೇರಿಸಲಾಗಿದೆ. ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್, ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಆರ್ಚರ್ ಈ ಯಾದಿಯಲ್ಲಿದ್ದಾರೆ. ಆದರೆ ಅಲೆಕ್ಸ್ ಹೇಲ್ಸ್, ಲಿಯಮ್ ಪ್ಲಂಕೆಟ್, ಜೋ ಕ್ಲಾರ್ಕ್ ಮೊದಲಾದ ಕೆಲವು ಪ್ರಮುಖ ಆಟಗಾರರ ಹೆಸರು ಇಲ್ಲಿ ಕಾಣಿಸಿಕೊಂಡಿಲ್ಲ.
ಸರಕಾರದ ನಿಯಮಾವಳಿಯಂತೆ ಎಲ್ಲ ಸುರಕ್ಷಾ ನಿಯಮಗಳನ್ನು ಅನುಸರಿಸಿ ಮುಚ್ಚಿದ ಸ್ಟೇಡಿಯಂಗಳಲ್ಲಿ ಕ್ರಿಕೆಟಿಗರ ಅಭ್ಯಾಸ ಸಾಗಲಿದೆ.
ಮೊಯಿನ್ ಅಲಿ, ಜಾನಿ ಬೇರ್ಸ್ಟೊ, ಸ್ಟುವರ್ಟ್ ಬ್ರಾಡ್, ಜಾಸ್ ಬಟ್ಲರ್, ಆದಿಲ್ ರಶೀದ್, ಟಾಮ್ ಕರನ್, ಡೇವಿಡ್ ವಿಲ್ಲಿ, ಸ್ಯಾಮ್ ಬಿಲ್ಲಿಂಗ್ಸ್ ಕೂಡ ಅಭ್ಯಾಸ ನಡೆಸುವ ಪ್ರಮುಖ ಕ್ರಿಕೆಟಿಗರಾಗಿದ್ದಾರೆ. ಇದರಿಂದ ತಂಡದ ಆಯ್ಕೆಗೆ ವಿಪುಲ ಅವಕಾಶ ಲಭಿಸಲಿದೆ ಎಂಬುದು ಇಸಿಬಿ ಅಧಿಕಾರಿ ಮೋ ಬೊಬಾಟ್ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ