ಯುರೋಪ್: ಲಾಕ್‌ಡೌನ್ ಸಡಿಲ: ಜರ್ಮನಿಯಲ್ಲಿ ಫುಟ್ಬಾಲ್ ಶುರು
Team Udayavani, May 31, 2020, 10:52 AM IST
ಕೋವಿಡ್-19 ಕಾಡಿದರೂ ಜರ್ಮನಿಗರು ಫುಟ್ಬಾಲ್ ಹುಚ್ಚು ಬಿಟ್ಟಿಲ್ಲ. ಲಾಕ್‌ಡೌನ್ ತೆರವಾಗುತ್ತಲೇ ಅವರು ಫುಟ್ಬಾಲ್ ಪಂದ್ಯಾಟಗಳನ್ನು ಹಮ್ಮಿಕೊಂಡಿದ್ದಾರೆ. ಜರ್ಮನಿಯ ಸ್ಟೇಡಿಯಂಗಳಲ್ಲಿ ಆಯ್ದ ಪ್ರೇಕ್ಷಕರು ಮಾತ್ರವೇ ಇದ್ದ ಫುಟ್ಬಾಲ್ ಪಂದ್ಯಾಟಗಳು ನಡೆದಿವೆ. ಎಲ್ಲ ರೀತಿಯ ಅಂಗಡಿಗಳು ತೆರೆದುಕೊಂಡಿವೆ. ಮಾಲ್‌ಗಳೂ ತೆರೆದಿವೆ. ಇಲ್ಲಿ ಶುಚಿತ್ವ ಗರಿಷ್ಠ ಮಟ್ಟದಲ್ಲಿದೆ. ಶಾಲೆಗಳು ಭಾಗಶಃ ತೆರೆದಿವೆ. ಪರೀಕ್ಷೆಗಳೂ ನಡೆಯುತ್ತಿವೆ. ಆದರೆ ಸಾರ್ವಜನಿಕರು ಸೇರುವ ದೊಡ್ಡ ಕಾರ್ಯಕ್ರಮಗಳಿಗೆ ಆಗಸ್ಟ್‌ವರೆಗೆ ನಿಷೇಧವಿದೆ.
ಇಟಲಿಯಲ್ಲಿ ಪ್ರಾರ್ಥನೆಗೆ ಸೈ
ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ಕಂಡ ಇಟಲಿಯಲ್ಲಿ ಲಾಕ್‌ಡೌನ್ ಸಡಿಲ ಗೊಳಿಸಲಾಗಿದೆ. ಮನೆ ಹೊರಗೆ 200 ಮೀ. ದೂರಕ್ಕೆ ವ್ಯಾಯಾಮ, ನಡೆದಾಡುವುದಕ್ಕೆ ಅವಕಾಶವಿದೆ. ಬಾರ್-ರೆಸ್ಟೋರೆಂಟ್‌ಗಳು ತೆರೆದಿವೆ. ಸೆಲೂನ್‌ಗಳೂ ಕಾರ್ಯಾರಂಭಿಸಿವೆ. ಮೇ 18ರ ಲಾಗಾಯ್ತು ಕ್ಯಾಥೋಲಿಕ್ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ಅಂತ್ಯಕ್ರಿಯೆಗೆ 15 ಮಂದಿಗೆ ಮಾತ್ರ ಅವಕಾಶವಿದೆ. ಆದರೆ ಶಾಲೆಗಳು ತೆರೆದಿಲ್ಲ. ಸೆಪ್ಟೆಂಬರ್‌ವರೆಗೆ ಮುಚ್ಚಲಾಗವುದು ಎಂದು ಅಲ್ಲಿನ ಆಡಳಿತ ಹೇಳಿದೆ. ಹೆಚ್ಚಿನ ಈಜುಕೊಳ, ಜಿಮ್‌ಗಳು ತೆರೆದಿವೆ.
ಫ್ರಾನ್ಸ್‌ನಲ್ಲಿ ಗ್ರೀನ್ ಝೋನ್‌ಗಳಿಗೆ ಸ್ವಾತಂತ್ರ್ಯ
ಫ್ರಾನ್ಸ್ ದೇಶದಲ್ಲೂ ಹಲವು ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಬಾರ್-ರೆಸ್ಟೋರೆಂಟ್‌ಗಳು ತೆರೆದುಕೊಂಡಿವೆ. ಶಾಲೆಗಳು, ಅಂಗನವಾಡಿಗಳು ತೆರೆದಿವೆ. ಆದರೆ 15 ಮಂದಿ ವಿದ್ಯಾರ್ಥಿಗಳು ಮಾತ್ರ ಒಂದು ತರಗತಿಯಲ್ಲಿರಬಹುದು. ಶಾಲೆಗಳು ಗ್ರೀನ್ ಝೋನ್‌ನಲ್ಲಿದ್ದರೆ ಮಾತ್ರ ತೆರೆಯಬಹುದು. 10 ಮಂದಿಗಿಂತ ಕಡಿಮೆಯಿದ್ದರೆ ಸೇರಬಹುದು. ವಯೋವೃದ್ಧರೂ ಹೊರಗಡೆ ಹೋಗಬಹುದು. ಜೂ.22ರಿಂದ ಬೀಚ್‌ಗಳು, ಸಿನೆಮಾ ಮಂದಿರಗಳು ತೆರೆದುಕೊಳ್ಳಲಿವೆ.
ಅಂಗಡಿ, ಶಾಲೆ ತೆರೆದ ಬೆಲ್ಜಿಯಂ
ಬೆಲ್ಜಿಯಂ ದೇಶದಲ್ಲಿ ನಾಲ್ವರ ಗುಂಪಿಗೆ ಮಾತ್ರ ಅವಕಾಶವಿದೆ. ಬಟ್ಟೆ ಅಂಗಡಿಗಳು, ಉಳಿದೆಲ್ಲ ಅಂಗಡಿಗಳು ತೆರೆದುಕೊಂಡಿವೆ. ಶಾಲೆ-ಕಾಲೇಜುಗಳು ಮೇ 18ರಿಂದ ತೆರೆದುಕೊಂಡಿವೆ. ರೆಸ್ಟೋರೆಂಟ್‌ಗಳು ಜೂ.8ರಿಂದ ತೆರೆದುಕೊಳ್ಳಲಿವೆ.
ಡೆನ್ಮಾಕ್‌ನಲ್ಲಿ ಎಪ್ರಿಲ್‌ನಿಂದಲೇ ಲಾಕ್‌ಡೌನ್ ತೆರವು
ಲಾಕ್‌ಡೌನ್ ಮೊದಲು ಜಾರಿ ಮಾಡಿದ ದೇಶಗಳಲ್ಲಿ ಡೆನ್ಮಾರ್ಕ್ ಮೊದಲಿನದ್ದು. ಈ ಕಾರಣದಿಂದ ಎಪ್ರಿಲ್‌ನಿಂದಲೇ ಇಲ್ಲಿ ಲಾಕ್‌ಡೌನ್ ಹಂತಹಂತವಾಗಿ ತೆರವಾಗುತ್ತಿದೆ. ಶಾಲೆಗಳು, ಅಂಗನವಾಡಿಗಳು ತೆರೆದಿವೆ. ಮೇ 18ರಿಂದ ಪರೀಕ್ಷೆಗಳು ನಡೆಯುತ್ತಿವೆ. ಸೆಲೂನ್‌ಗಳು, ಕ್ರೀಡಾ ಪಂದ್ಯಾಟಗಳಿಗೆ ಅವಕಾಶ ಕೊಡಲಾಗಿದೆ. ಶಾಪಿಂಗ್ ಮಾಲ್‌ಗಳು, ಅಂಗಡಿಗಳು ತೆರೆದುಕೊಂಡಿವೆ. 10 ಜನರು ಮಾತ್ರ ಒಂದೆಡೆ ಸೇರಲು ಅವಕಾಶವಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸಬಹುದು.
ಹೊಟೇಲ್‌ಗಳು ತೆರೆದುಕೊಂಡಿವೆ. ಆದರೆ ಸಿನೆಮಾ, ಒಳಾಂಗಣ ಕ್ರೀಡಾ ಪಂದ್ಯಾಟಗಳಿಗೆ, ಈಜು, ನೈಟ್‌ಕ್ಲಬ್‌ಗಳಿಗೆ ಅವಕಾಶ ಕೊಟ್ಟಿಲ್ಲ. ಜೂನ್-ಆಗಸ್ಟ್‌ಗೆ ಅವಕಾಶ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ಸ್ವಿಜರ್ಲೆಂಡ್‌ನಲ್ಲಿ ಸಿನೆಮಾ ಪ್ರದರ್ಶನಕ್ಕೆ ಅವಕಾಶ
ಎಪ್ರಿಲ್ 27ರಿಂದಲೇ ಹಂತಹಂತವಾಗಿ ಲಾಕ್‌ಡೌನ್ ತೆರವು ಮಾಡಲಾಗಿದೆ. ಗಾರ್ಡನ್ ಸೆಂಟರ್‌ಗಳು, ಸೆಲೂನ್‌ಗಳು ತೆರೆದಿವೆ. ಶಾಲೆಗಳು, ಲೈಬ್ರೆರಿಗಳು, ಮ್ಯೂಸಿಯಂಗಳನ್ನು ತೆರೆಯಲಾಗಿದೆ. ರೆಸ್ಟೋರೆಂಟ್‌ಗಳು, ಬಾರ್‌ಗಳು ಬೆಳಗಿನ ಜಾವ 2ರವರೆಗೆ ಮಾತ್ರ ತೆರೆಯಬಹುದು. ಎಲ್ಲ ಕಡೆ ಸ್ಯಾನಿಟೈಸರ್ ಇಡುವುದು ಕಡ್ಡಾಯ. ಮೇ 30ರಿಂದ 30 ಮಂದಿಯ ಗುಂಪು ಸೇರಬಹುದು.
ಜೂ.6ರಿಂದ ಸಿನೆಮಾ ಮಂದಿರ ತೆರೆಯಲು, 300 ಮಂದಿ ಸೇರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಪೋರ್ಚುಗಲ್‌ನಲ್ಲಿ ಸೀಮಿತ ಅವಕಾಶ
ಈ ದೇಶದಲ್ಲಿ ಅಂಗಡಿ, ಮಾಲ್‌ಗಳು ತೆರೆದರೂ ನಿರ್ದಿಷ್ಟ ಸಂಖ್ಯೆಯ ಗ್ರಾಹಕರಿಗಷ್ಟೇ ಅವಕಾಶವಿದೆ. ಅಂಗನವಾಡಿ ತೆರೆಯಲಾಗಿದೆ. ಆದರೆ ಶಾಲೆಗಳನ್ನು ತೆರೆದಿಲ್ಲ. ಜೂನ್‌ನಿಂದ ಸಿನೆಮಾ ಮಂದಿರ, ದೊಡ್ಡ ಶಾಪಿಂಗ್ ಮಾಲ್‌ಗಳು ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳಲಿವೆ.
ಮದುವೆ, ಹೊರಾಂಗಣ ಕ್ರೀಡೆಗೆ ಆಸ್ಟ್ರಿಯಾದಲ್ಲಿ ಅನುಮತಿ
ಲಾಕ್‌ಡೌನ್ ಸಡಿಲಗೊಳಿಸಿದ ಮೊದಲ ಸಾಲಿನ ದೇಶಗಳಲ್ಲಿ ಆಸ್ಟ್ರಿಯಾವೂ ಒಂದು. ದೊಡ್ಡ ಅಂಗಡಿಗಳು, ಶಾಪಿಂಗ್ ಕೇಂದ್ರಗಳನ್ನು ಇಲ್ಲಿ ತೆರೆಯಲಾಗಿದೆ. ಗಾರ್ಡನ್‌ಗಳು, ಹೊರಾಂಗಣ ಕ್ರೀಡೆಗೆ ಅವಕಾಶವಿದೆ.
10 ಜನರು ಒಂದೆಡೆ ಸೇರಬಹುದು. ಮೇ ಮಧ್ಯ ಭಾಗದಿಂದ ರೆಸ್ಟೋರೆಂಟ್‌ಗಳು ತೆರೆದಿವೆ. ಜಿಮ್‌ಗಳು, ಸ್ವಿಮ್ಮಿಂಗ್ ಪೂಲ್‌ಗಳು ಮೇ ಕೊನೆಯಿಂದ ತೆರೆಯಲಿವೆ. ಮದುವೆಗಳಲ್ಲಿ 100 ಮಂದಿ ಭಾಗಿಯಾಗಬಹುದು ಎಂದು ಅಲ್ಲಿನ ಸರಕಾರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್
ಒಂದೇ ಒಂದು ತಪ್ಪಿನಿಂದ ಪ್ಲೇ ಆಫ್ ಟಿಕೆಟ್ ತಪ್ಪಿಸಿಕೊಂಡ ರಿಷಭ್ ಪಂತ್
ಹೈದರಾಬಾದ್-ಪಂಜಾಬ್ ಲಾಸ್ಟ್ ಶೋ; ಇಂದು ಕೊನೆಯ ಲೀಗ್ ಪಂದ್ಯ ; ಕೇವಲ ಔಪಚಾರಿಕ ಮುಖಾಮುಖಿ
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ
ವರ್ಲ್ಡ್ ಸ್ಕೂಲ್ ಗೇಮ್ಸ್ : ಕೊಡಗಿನ ಉನ್ನತಿಗೆ ಕಂಚು