ದುಬಾರಿ ವಸ್ತುಗಳು: ಪ್ಲಾಟಿನಂ ಸನ್ಗ್ಲಾಸ್
Team Udayavani, Jun 15, 2020, 4:45 AM IST
ಸನ್ಗ್ಲಾಸ್ ಎಂದಾಕ್ಷಣ ನಮಗೆ ರೇ ಬ್ಯಾನ್ ನೆನಪಾಗುತ್ತದೆ. ರೇ ಬ್ಯಾನ್ ಸನ್ಗ್ಲಾಸುಗಳು ದುಬಾರಿ ಎನ್ನುವ ನಮಗೆ, ಅದಕ್ಕಿಂತಲೂ ಎಷ್ಟೋ ಪಟ್ಟು ದುಬಾರಿಯಾದ ಬ್ರ್ಯಾಂಡುಗಳು ಕಣ್ಣಿಗೆ ಬಿದ್ದಿರದು. ಅವುಗಳ ಸಾಲಿಗೆ ಇಲ್ಲಿ ನೀಡಲಾಗಿರುವ ಸನ್ಗ್ಲಾಸ್ ಸೇರುವುದಿಲ್ಲ. ಏಕೆಂದರೆ ಇದನ್ನು ತಯಾರಿಸಿದ್ದು ಕನ್ನಡಕ ತಯಾರಕ ಕಂಪನಿಯಲ್ಲ. ಬೆಂಟ್ಲಿ ಅಟೊಮೊಬೈಲ್ ಸಂಸ್ಥೆ ಇದನ್ನು ತಯಾರಿಸಿದೆ.
ಐಷಾರಾಮಿ ಕಾರು ತಯಾರಿಕೆಯಲ್ಲಿ ಹೆಸರು ಮಾಡಿರುವ ಬೆಂಟ್ಲಿ ಸಂಸ್ಥೆ, ತನ್ನ 100ನೇ ವರ್ಷಾಚರಣೆಯ ಸಲುವಾಗಿ ಈ ಸನ್ ಗ್ಲಾಸ್ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಇದರ ತಯಾರಿಕೆಗೆ ಪ್ಲಾಟಿನಂ ಲೋಹವನ್ನು ಬಳಸಿರುವುದು ಬಿಟ್ಟರೆ ಚಿನ್ನವಾಗಲಿ, ವಜ್ರದ ಹರಳುಗಳನ್ನಾಗಲಿ ಕೂರಿಸಿಲ್ಲ ಎನ್ನುವುದೇ ಇದರ ವೈಶಿಷ್ಟ್ಯ.
ಬೆಲೆ: 34,00,000 ರೂ.