ಪತ್ನಿ ಮೇಲೆ ಅನುಮಾನ: 2 ವರ್ಷದ ಮಗುವನ್ನೇ ಕೊಂದ ತಂದೆ

Team Udayavani, Jul 6, 2019, 10:08 AM IST

ಮೈಸೂರು: ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಪತಿಯೊಬ್ಬ 2 ವರ್ಷದ ಗಂಡು ಮಗುವನ್ನೇ ಹತ್ಯೆ ಮಾಡಿದ ಹೃದಯ ವಿದ್ರಾವಕ ಘಟನೆ ಹುಣಸೂರು ತಾಲೂಕಿನ ಅಸ್ವಾಳುವಿನಲ್ಲಿ ನಡೆದಿದೆ.

ಶಶಿಕುಮಾರ ಎಂಬಾತ ಪತ್ನಿ ಪರಿಮಳರೊಂದಿಗೆ ಜಗಳವಾಡಿ ಮಗುವನ್ನು ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ.

5 ವರ್ಷದ ಹಿಂದೆ ದಂಪತಿ ಪ್ರೇಮ ವಿವಾಹವಾಗಿದ್ದು, ಒಮ್ಮೆ ತೊರೆದು ಮತ್ತೆ ಒಂದಾಗಿದ್ದರು ಎಂದು ತಿಳಿದು ಬಂದಿದೆ.

ಬಿಳಿಕೆರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಶಶಿಕುಮಾರ ಮತ್ತು ಪರಿಮಳರನ್ನು ಪೊಲೀಸರು ಬಂಧಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ