ಅಪ್ಪನ ನೆನಪು : ಅಪ್ಪನೆಂದರೆ…


Team Udayavani, Jun 21, 2020, 5:18 PM IST

ಅಪ್ಪನ ನೆನಪು :  ಅಪ್ಪನೆಂದರೆ…

ಅಪ್ಪನೆಂದರೆ…

ಮುಂಗಾರು ತೊಯ್ದು ಮಣ್ಣು ಕಂಪು ಬೀರುತ್ತದೆ;
ಮುಂಗೋಳಿ ಕೂಗಿಗೆ ನಿದ್ದೆ ಮಾಯ..!
ಜೋಡಿ ಎತ್ತುಗಳು ಎದ್ದು ದಾರಿ ಕಾಯುತ್ತವೆ;
ಮಡ್ಡಿ, ಅಕ್ಕಚ್ಚು ಉದರ ಪೇಯ.

ಗದ್ದೆ ಬದುಗಳೆಲ್ಲ ಶೃಂಗ ತೋರಣವಾಗುತ್ತವೆ;
ಬಿರಿದ ಒಡಲೊಳಗೆ ನೀರು
ಮುಟ್ಟಾಳೆ ಹೊತ್ತ ವೃದ್ಧ ನೇಗಿಲ ಹಿಡಿದಾನೆ;
ಮೊಗದಲ್ಲಿ ತುಂಬಾ ಬೆವರು.

ತೊರೆ ಕೆರೆ ತುಂಬಿ ತುಳುಕಾಡುತ್ತಿವೆ ಸುತ್ತ;
ಹಾರೆ ಗುದ್ದಲಿಗೆಲ್ಲಿ ಬಿಡುವು?
ಓ ಬೇಲೆ ಎಲ್ಲೆಲ್ಲೂ ಮೇಳೈಸುತ್ತಿವೆ;
ಬಂಗಾರವಾಗಿದೆ ಬಯಲು.

ಹರಿವೆ, ನವಧಾನ್ಯ ಮತ್ತೆ ಚಿಗುರಿದೆ ಅಲ್ಲಿ;
ಚಳಿಗಾಲವಂತು ಸೊಗಸು.
ಏತ ಕಟ್ಟಿದ ಬಳಿಕ ನೀರು ಚಿಮ್ಮಿದೆ ಮೇಲೆ;
ಕೈ ಬೊಗಸೆ ತುಂಬಾ ಕನಸು.

ಬೇಸಗೆಯ ಬೆಚ್ಚಗೆ ಶಾಖ, ಚಿಗುರಿದೆ ಹೂ ಹಣ್ಣು;
ಮರದ ತುಂಬಾ ಗೇರುಬೀಜದ ಫಸಲು.
ತರುಲತೆ ಪೊದೆಯ ನಡುವಣದ ನಿಡುಗಣ್ಣು;
ಆಷಾಡಕ್ಕೊಂದಿಷ್ಟು ಪೇರಿಸುವ ಹವಣು.

ಸೂರು ಸೋರುವ ಮುನ್ನ ಮುಳಿಹುಲ್ಲ ಹುಡುಕಾಟ;
ನೂರು ಯೋಜನ ಅವನ ಬಿರುನಡಿಗೆ.
ಮತ್ತೆ ಏಣಿ ಮೇಲೇರಿ ಆಗಸದಿ ಬರವಣಿಗೆ;
ಅಪ್ಪನೆಂದರೆ  ಗಟ್ಟಿ ಪಾವಟಿಗೆ.

ಹೆಗಲ ಮೇಲೇರಿದರೆ ಆನು ದೇವ ಮೂರ್ತಿ;
ಕವಿತೆ ಮೌನವಾಗುವುದು ಹೀಗೆ.
ಅಪ್ಪ ಎಂದರೆ ಈಗ ಮುಗಿಲ ನಕ್ಷತ್ರ;
ಇರುಳು ಹಡೆಯುವುದು ನೆನಪ
ಬೇಗೆ.

– ಡಾ|ರತ್ನಾಕರ ಮಲ್ಲಮೂಲೆ , ಕಾಸರಗೋಡು.

ಟಾಪ್ ನ್ಯೂಸ್

1-d-s-sfsf

ಬೆಂಗಳೂರಿನಲ್ಲಿ ಐಕಿಯ ಸ್ಟೋರ್:ಸಿಇಓ ಜೆಸ್ಪರ್ ಬ್ರಾಡಿನ್ ಜತೆ ಸಿಎಂ ಚರ್ಚೆ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

1-fsfdf

ಹೆಚ್ಚುತ್ತಿರುವ ಮಂಕಿ ಪಾಕ್ಸ್ ಸೋಂಕಿನ ಪ್ರಮಾಣ : ಸಲಿಂಗಕಾಮಿಗಳಿಗೆ ಎಚ್ಚರಿಕೆ

1-dfdffds

ಬಿಜೆಪಿ ನಿಷ್ಠಾವಂತನಾದ ನನ್ನ ಸಚಿವ ಸ್ಥಾನ ಭದ್ರ: ಸಚಿವ ಪ್ರಭು ಚವ್ಹಾಣ್

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

dk shi 2

ಮಸೀದಿ ಕುರಿತು ತಾಂಬೂಲ ಪ್ರಶ್ನೆ; ಬಿಜೆಪಿ ಈ ರಾಜ್ಯವನ್ನು ಕೊಲ್ಲುತ್ತಿದೆ :ಡಿಕೆಶಿ

ಬಿಸ್ಕೆಟ್‌ ವ್ಯವಹಾರಕ್ಕೆಂದು ಕೋಟಿಗಟ್ಟಲೆ ಸಾಲ ಪಡೆದು ಕ್ಯಾಸಿನೋ ಜೂಜಾಟ ಆಡಿದ ಆರೋಪಿ ಅರೆಸ್ಟ್

ಬಿಸ್ಕೆಟ್‌ ವ್ಯವಹಾರಕ್ಕೆಂದು ಕೋಟಿಗಟ್ಟಲೆ ಸಾಲ ಪಡೆದು ಕ್ಯಾಸಿನೋ ಜೂಜಾಟ ಆಡಿದ ಆರೋಪಿ ಅರೆಸ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

MUST WATCH

udayavani youtube

ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯ ಗೋಚರ

udayavani youtube

‘ನನಗೆ ಏಳೂವರೆ ಶನಿ ಉಂಟು!’

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

ಹೊಸ ಸೇರ್ಪಡೆ

ರೈತರ ಕೆಲಸಕ್ಕೆ ವಿಳಂಬ ಬೇಡ: ಅಶ್ವತಿ

ರೈತರ ಕೆಲಸಕ್ಕೆ ವಿಳಂಬ ಬೇಡ: ಅಶ್ವತಿ

15

ಪ್ರವಾಹ-ಅತಿವೃಷ್ಟಿ ಎದುರಿಸಲು ಸನ್ನದರಾಗಿ

ಮತದಾರರ ನೋಂದಣಿಯಲ್ಲಿ ಬೋಗಸ್‌: ಲಕ್ಷ್ಮಣ್‌

ಮತದಾರರ ನೋಂದಣಿಯಲ್ಲಿ ಬೋಗಸ್‌: ಲಕ್ಷ್ಮಣ್‌

jagaluru

ಪಠ್ಯದಿಂದ ಭಗತ್‌ ಸಿಂಗ್‌ ಪಾಠ ಕೈಬಿಟ್ಟಿದಕ್ಕೆ ಆಕ್ರೋಶ

ಮೂರು ತಿಂಗಳಿಗೊಮ್ಮೆ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಭೆ

ಮೂರು ತಿಂಗಳಿಗೊಮ್ಮೆ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.