ಮೇಡ್ ಇನ್ ಇಂಡಿಯಾ ಇ-ಬಸ್ ಪರಿಶೀಲಿಸಿದ ಸಚಿವ ನಿತಿನ್ ಗಡ್ಕರಿ
Team Udayavani, May 7, 2022, 9:21 PM IST
ಮುಂಬೈ: ದೇಶದ ಮೊದಲ ಸಂಪೂರ್ಣ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಬಸ್ ಆದ ಎಕಾ ಇ9 ಅನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪರಿಶೀಲಿಸಿದ್ದಾರೆ.
ಶುಕ್ರವಾರ ಪುಣೆಯಲ್ಲಿ ಬಸ್ಸನ್ನು ಪರಿಶೀಲಿಸಿದ ಅವರು ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಬೆಂಗಳೂರು ಮೂಲದ ಲಾಗ್9 ಮೆಟೀರಿಯಲ್ಸ್ ಸಂಸ್ಥೆಯು ಈ ಬಸ್ಸಿಗೆ ಬ್ಯಾಟರಿ ಪೂರೈಕೆ ಮಾಡಿದೆ.
ಇನ್ನು ಕೆಲ ದಿನಗಳಲ್ಲೇ ಎಕಾ ಇ9 ಬಸ್ಸು ರಸ್ತೆಗಿಳಿಯುವ ಸಾಧ್ಯತೆಯಿದ್ದು, ಮೊದಲ ವರ್ಷವೇ 200 ಬಸ್ಸುಗಳಿಗೆ ಚಾಲನೆ ನೀಡುವುದಾಗಿ ಸಂಸ್ಥೆ ಹೇಳಿಕೊಂಡಿದೆ.
ಇದನ್ನೂ ಓದಿ:ಬುರ್ಖಾ ಧರಿಸದಿದ್ದರೆ ತಂದೆಯ ಕೆಲಸಕ್ಕೆ ಕತ್ತರಿ: ತಾಲಿಬಾನ್