Udayavni Special

ಬೋಂಡಾ ಸವಿದು ಬೇಸರ ಮರೆಯಿರಿ!


Team Udayavani, Jun 3, 2020, 4:17 AM IST

golibaje

ಬೋಂಡಾ, ಬಜ್ಜಿ, ಪಕೋಡದಂಥ ಕರಿದ ತಿನಿಸುಗಳು ಯಾರಿಗೆ ಇಷ್ಟವಿಲ್ಲ? ಸಣ್ಣ ಮಕ್ಕಳಿಂದ ಹಿಡಿದು, ಡಯಟ್‌ ಮಾಡುವ ಹುಡುಗಿಯರು  ಕೂಡ ಬಜ್ಜಿ, ಬೋಂಡ ಅಂದರೆ ಬಾಯಲ್ಲಿ ನೀರು ಸುರಿಸುತ್ತಾರೆ. ಮತ್ಯಾಕೆ ತಡ, ಹೊಸ  ಬಗೆಯಲ್ಲಿ ಬೋಂಡಾ ಮಾಡಿ ಸವಿಯಿರಿ.

ಮೆಂತೆ ಸೊಪ್ಪಿನ ಬೋಂಡಾ
ಬೇಕಾಗುವ ಸಾಮಗ್ರಿ: ಎಳೆ ಮೆಂತ್ಯೆ ಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ, ಕಡಲೆ  ಹಿಟ್ಟು, ಖಾರದ ಪುಡಿ, ಉಪ್ಪು, ಅರಿಶಿನ, ಇಂಗು, ಓಮ ಕಾಳು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೆಂತ್ಯೆ ಸೊಪ್ಪನ್ನು ಸಣ್ಣಗೆ ಹೆಚ್ಚಿ, ಎಣ್ಣೆಯಲ್ಲಿ  ಹುರಿದುಕೊಳ್ಳಿ. ಅದಕ್ಕೆ ಕಡಲೆ ಹಿಟ್ಟು, ಉಪ್ಪು, ಖಾರದ ಪುಡಿ, ಓಮ, ಚಿಟಿಕೆ ಸೋಡಾ, ಒಂದೆರಡು ಚಮಚ ಬಿಸಿ ಎಣ್ಣೆ ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ (ಬೇಕಿದ್ದರೆ ಸ್ವಲ್ಪ ನೀರು ಬೆರೆಸಬಹುದು) ನಂತರ, ಕಾದ ಎಣ್ಣೆಯಲ್ಲಿ, ಹೊಂಬಣ್ಣ  ಬರುವವರೆಗೆ ಕರಿಯಿರಿ.

ಮಿಶ್ರ ಸೊಪ್ಪಿನ ಬೋಂಡಾ
ಬೇಕಾಗುವ ಸಾಮಗ್ರಿ: ಮೂಲಂಗಿ ಎಲೆ, ನವಿಲುಕೋಸಿನ ಎಲೆ, ಪಾಲಕ್‌  ಸೊಪ್ಪು (ಸಮ ಪ್ರಮಾಣದಲ್ಲಿ), ಕಡಲೆ ಹಿಟ್ಟು, ಹುರಿದ ಎಳ್ಳು, ಉಪ್ಪು, ಖಾರ, ಅಡುಗೆ ಸೋಡಾ, ಹುರಿದ ಕೊಬ್ಬರಿ ತುರಿ, ಕಾಳು ಮೆಣಸು, ಹುಳಿ ಮಜ್ಜಿಗೆ, ಇಂಗು,  ಕರಿಯಲು ಎಣ್ಣೆ. (ಮೇಲೆ ಬರೆದ ಸೊಪ್ಪನ್ನೆಲ್ಲ ಹಾಕಬೇಕೆಂದೇನೂ ಇಲ್ಲ. ಯಾವುದು ಸಿಗುತ್ತದೋ, ಅದನ್ನು ಬಳಸಿದರೆ ಆಯ್ತು.)

ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲ ಸೊಪ್ಪುಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಅದಕ್ಕೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಳ್ಳು, ಒಡೆದ ಕಾಳು ಮೆಣಸು, ಅಡುಗೆ ಸೋಡಾ, ಹುಳಿ ಮಜ್ಜಿಗೆ ಬೆರೆಸಿ ಕಲಸಿ (ನೀರು ಬೆರೆಸುವ ಅಗತ್ಯವಿಲ್ಲ) ಗಟ್ಟಿಯಾಗುವಷ್ಟು ಕಡಲೆ ಹಿಟ್ಟು ಬೆರೆಸಿ, ಬೋಂಡ ಕರಿಯಿರಿ.

ಮೈದಾ ಗೋಲಿ
ಬೇಕಾಗುವ ಸಾಮಗ್ರಿ: ಮೈದಾ ಹಿಟ್ಟು- ಎರಡು ಕಪ್‌, ತುಪ್ಪ- 2 ಚಮಚ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ತುರಿದ ಕೊಬ್ಬರಿ, ಜೀರಿಗೆ, ಮೆಂತ್ಯೆ, ಉಪ್ಪು, ಸೋಡಾ, ಎಣ್ಣೆ.

ಮಾಡುವ ವಿಧಾನ: ಮೈದಾ ಹಿಟ್ಟಿಗೆ ತುಪ್ಪ ಹಾಕಿ, ಹಸಿ ಮೆಣಸಿನ ಚೂರು, ಉಪ್ಪು, ಸೋಡಾ, ಜೀರಿಗೆ ಮತ್ತು ಮೆಂತ್ಯೆ ಪುಡಿ ಸ್ವಲ್ಪ, ಕೊತ್ತಂಬರಿ ಸೊಪ್ಪು, ಹುರಿದ ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಕಲಸಿ 5-6 ಗಂಟೆ ಹಾಗೆಯೇ ಬಿಡಿ. ನಂತರ,  ಸಣ್ಣ ಸಣ್ಣ ಗೋಲಿ ಮಾಡಿ ಕರಿಯಿರಿ.

ಬನಾರಸಿ ಗೋಲಿ
ಬೇಕಾಗುವ ಸಾಮಗ್ರಿ: ಕಡಲೆಬೇಳೆ- 4 ಬಟ್ಟಲು, ಮೊಸರು- 1 ಬಟ್ಟಲು, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡುಗೆ ಸೋಡಾ, ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಇಂಗು, ಧನಿಯ, ಚಿಟಿಕೆ ಸಕ್ಕರೆ, ಕರಿಯಲು ಎಣ್ಣೆ.

ಮಾಡುವ ವಿಧಾನ: ಕಡಲೆ ಬೆಳೆಯನ್ನು ತರಿತರಿಯಾಗಿ ಬೀಸಿಕೊಳ್ಳಿ. ಅದಕ್ಕೆ ಮೊಸರು ಮತ್ತು ನಾಲ್ಕೈದು ಚಮಚ ಕಾದ ಎಣ್ಣೆ ಸೇರಿಸಿ. ಜೊತೆಗೆ, ಉಪ್ಪು, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಇಂಗು, ಧನಿಯಾ ಪುಡಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಕಲೆಸಿ, ಎರಡು ಗಂಟೆ ನೆನೆಸಿ ಇಡಿ. ಕರಿಯುವ ಹೊತ್ತಿಗೆ ಕಾಲು ಚಮಚ ಅಡುಗೆ ಸೋಡಾ ಹಾಕಿ, ಉಂಡೆ ಕಟ್ಟಿ ಬೋಂಡಾದಂತೆ ಕರಿಯಿರಿ.

* ಪರಿಮಳಾ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

‘ಕುಣಿಯೋಕೆ ಬಾರದವರು ನೆಲಡೊಂಕು ಎಂದರು’ ಸಿದ್ದರಾಮಯ್ಯ ವಿರುದ್ಧ ಗುಡುಗಿದ ರಾಮುಲು

‘ಕುಣಿಯೋಕೆ ಬಾರದವರು ನೆಲಡೊಂಕು ಎಂದರು’ ಸಿದ್ದರಾಮಯ್ಯ ವಿರುದ್ಧ ಗುಡುಗಿದ ರಾಮುಲು

ಉಡುಪಿಯ ಹೋಟೆಲ್ ಮಾಲಕರೊಬ್ಬರಿಗೆ ಸೋಂಕು ದೃಢ: ಹೋಟೆಲ್ ಸೀಲ್ ಡೌನ್

ಉಡುಪಿಯ ಹೋಟೆಲ್ ಮಾಲಕರೊಬ್ಬರಿಗೆ ಸೋಂಕು ದೃಢ: ಹೋಟೆಲ್ ಸೀಲ್ ಡೌನ್

ಕೋವಿಡ್ ಭೀತಿ, ಊರಿನತ್ತ ಮುಖ ಮಾಡಿದ ಜನರು ಹೆದ್ದಾರಿಗಳಲ್ಲಿ ವಾಹನಗಳ ಸಾಲು

ಕೋವಿಡ್ ಭೀತಿ, ಊರಿನತ್ತ ಮುಖ ಮಾಡಿದ ಜನರು ಹೆದ್ದಾರಿಗಳಲ್ಲಿ ವಾಹನಗಳ ಸಾಲು

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಗೆ ಕರೆ ಮಾಡಿ ಅಭಿಪ್ರಾಯ ಕೇಳಿದ ಸಚಿವ ಸುರೇಶ್ ಕುಮಾರ್

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಗೆ ಕರೆ ಮಾಡಿ ಅಭಿಪ್ರಾಯ ಕೇಳಿದ ಸಚಿವ ಸುರೇಶ್ ಕುಮಾರ್

ಎಂಟು ಪೊಲೀಸರನ್ನು ಹತ್ಯೆಗೈದಿದ್ದ ನಟೋರಿಯಸ್ ರೌಡಿ ವಿಕಾಸ್ ದುಬೆ ಮನೆ ನೆಲಸಮ

ಎಂಟು ಪೊಲೀಸರನ್ನು ಹತ್ಯೆಗೈದಿದ್ದ ನಟೋರಿಯಸ್ ರೌಡಿ ವಿಕಾಸ್ ದುಬೆ ಮನೆ ನೆಲಸಮ

ಕುಲ್ಗಾಮ್ ಎನ್ ಕೌಂಟರ್ ನಲ್ಲಿ ಓರ್ವ ಉಗ್ರನ ಹತ್ಯೆಗೈದ ಭದ್ರತಾ ಪಡೆಗಳು

ಕುಲ್ಗಾಮ್ ಎನ್ ಕೌಂಟರ್ ನಲ್ಲಿ ಓರ್ವ ಉಗ್ರನ ಹತ್ಯೆಗೈದ ಭದ್ರತಾ ಪಡೆಗಳು

ಕಾಂಗ್ರೆಸ್ ಪಕ್ಷವನ್ನು ಕೆಳಮಟ್ಟದಿಂದ ಸಂಘಟಿಸಲು ಕ್ರಮ: ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ಪಕ್ಷವನ್ನು ಕೆಳಮಟ್ಟದಿಂದ ಸಂಘಟಿಸಲು ಕ್ರಮ: ಸತೀಶ್ ಜಾರಕಿಹೊಳಿ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bondage

ಮದುವೆ ಎಂಬುದು ಬಂಧನವಾದಾಗ…

self teach

ಸ್ವಾವಲಂಬನೆಯ ಪಾಠ ಕಲಿಸಿತು ಕೋವಿಡ್‌ 19!

balya-male

ಬಾಲ್ಯದ ಮಳೆ ದಿನಗಳು…

utsaha

ಉತ್ಸಾಹವಿದ್ದರೆ ಸಾಲದು ಧೈರ್ಯವೂ ಬೇಕು

i know

ನಿಂಗೆ ಗೊತ್ತಿರುತ್ತೆ ಅಂದುಕೊಂಡೆ…‌

MUST WATCH

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya

udayavani youtube

LIC ಅಧಿಕಾರಿಯ ‘Part Time’ ಕೃಷಿ ‘ಪಾಲಿಸಿ’! | LIC Officer Excels in Agriculture


ಹೊಸ ಸೇರ್ಪಡೆ

ಕಂಟೈನ್‌ಮೆಂಟ್‌ ವಲಯ ಹೆಚ್ಚಿಸಿದ ಪಿಎಂಸಿ

ಕಂಟೈನ್‌ಮೆಂಟ್‌ ವಲಯ ಹೆಚ್ಚಿಸಿದ ಪಿಎಂಸಿ

ರಾಜ್ಯದಲ್ಲಿ 6 ಸಾವಿರ ಮಕ್ಕಳಿಗೆ ಸೋಂಕು

ರಾಜ್ಯದಲ್ಲಿ 6 ಸಾವಿರ ಮಕ್ಕಳಿಗೆ ಸೋಂಕು

04-July-23

385 ಕ್ವಿಂಟಲ್‌ ಅನ್ನಭಾಗ್ಯ ಅಕ್ಕಿ ವಶ

‘ಕುಣಿಯೋಕೆ ಬಾರದವರು ನೆಲಡೊಂಕು ಎಂದರು’ ಸಿದ್ದರಾಮಯ್ಯ ವಿರುದ್ಧ ಗುಡುಗಿದ ರಾಮುಲು

‘ಕುಣಿಯೋಕೆ ಬಾರದವರು ನೆಲಡೊಂಕು ಎಂದರು’ ಸಿದ್ದರಾಮಯ್ಯ ವಿರುದ್ಧ ಗುಡುಗಿದ ರಾಮುಲು

ಉಡುಪಿಯ ಹೋಟೆಲ್ ಮಾಲಕರೊಬ್ಬರಿಗೆ ಸೋಂಕು ದೃಢ: ಹೋಟೆಲ್ ಸೀಲ್ ಡೌನ್

ಉಡುಪಿಯ ಹೋಟೆಲ್ ಮಾಲಕರೊಬ್ಬರಿಗೆ ಸೋಂಕು ದೃಢ: ಹೋಟೆಲ್ ಸೀಲ್ ಡೌನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.