ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು
Team Udayavani, Feb 8, 2023, 12:41 AM IST
ಶಿವಮೊಗ್ಗ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಉದ್ಯೋ ಗವಿದೆ ಎಂದು ನಂಬಿಸಿ ಹೊಳ ಲೂರಿನ ಯುವಕನೊಬ್ಬನಿಗೆ 72 ಸಾವಿರ ರೂ. ವಂಚಿಸಿದ ಪ್ರಕರಣ ವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಯುವಕನು ಏರ್‌ಪೋರ್ಟ್ ಅಥಾರಿಟಿ ಅಪ್ಲಿಕೇಷನ್‌ನಲ್ಲಿ ತನ್ನ ಮಾಹಿತಿಯನ್ನು ಅಪ್‌ಲೋಡ್ ಮಾಡಿದ್ದ. ಫೆ.2ರಂದು ಮಧ್ಯಾಹ್ನ ಮೋನಿಕಾ ಎಂಬಾಕೆ ಕರೆ ಮಾಡಿ, ನೀವು ಶಿವಮೊಗ್ಗ ವಿಮಾನ ನಿಲ್ದಾಣ ದಲ್ಲಿ ಗ್ರೌಂಡ್ ಸ್ಟಾಫ್ ಆಗಿ ನೇಮಕ ವಾಗಿದ್ದು, ಇದರ ನೋಂದಣಿಗೆಂದು ಯುವಕನಿಂದ ಬಳಿಕ ಹಂತ ಹಂತವಾಗಿ ಫೋನ್ ಪೇ ಮೂಲಕ 72,900 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ.