ಎ.ಆರ್. ರಹಮಾನ್ ಹಾಡಿಗೆ ಫ್ರೆಂಚ್ ವ್ಯಕ್ತಿಯ ಭರತನಾಟ್ಯ!
Team Udayavani, Apr 17, 2022, 8:05 AM IST
ವಿದೇಶಿಗರು ಬಾಲಿವುಡ್‌ನ ಹಾಡುಗಳಿಗೆ ನೃತ್ಯ ಮಾಡಿ ಆಗಾಗ ಟ್ರೆಂಡ್ ಆಗುತ್ತಿರುತ್ತಾರೆ. ಅದೇ ರೀತಿಯಲ್ಲಿ ಪ್ರಸಿದ್ಧರಾಗಿರುವವರಲ್ಲಿ ಒಬ್ಬರು ಫ್ರಾನ್ಸ್‌ನ ಜಿಕಾ. ಅವರು ಬಾಲಿವುಡ್ ಜತೆ ಟಾಲಿವುಡ್‌ನ ಅನೇಕ ಹಾಡುಗಳಿಗೆ ನೃತ್ಯ ಮಾಡಿ ಭಾರತೀಯರಿಗೆ ಹತ್ತಿರವಾಗಿದ್ದಾರೆ.
ಇದೀಗ ಜಿಕಾ, ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರ “ಸ್ನೇಹಿತನೆ ಸ್ನೇಹಿತನೆ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ವಿಶೇಷವಾಗಿ ಭರತನಾಟ್ಯ ಮಾಡಿದ್ದು, ಭಾರತೀಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ದೆಹಲಿ: ಹನುಮ ಜಯಂತಿ ಶೋಭಾ ಯಾತ್ರೆ ವೇಳೆ ಭುಗಿಲೆದ್ದ ಹಿಂಸಾಚಾರ
ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್ ಆಗಿದೆ. ಇನ್ನಷ್ಟು ಹಾಡುಗಳಿಗೆ ಭರತನಾಟ್ಯ ಮಾಡಿ ಎಂದು ಅವರ ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಕೇಳಲಾರಂಭಿಸಿದ್ದಾರೆ.
View this post on Instagram