ನೊವಾಕ್ ಜೊಕೋಗೆ ಫ್ರೆಂಚ್ ಓಪನ್ ಕೂಡ ಅನುಮಾನ!
Team Udayavani, Jan 18, 2022, 4:43 AM IST
ಪ್ಯಾರಿಸ್ ನೊವಾಕ್ ಜೊಕೋವಿಕ್ “ಬಂದ ಹಾದಿಗೆ ಸುಂಕ ಇಲ್ಲ’ ಎಂಬಂತೆ ಆಸ್ಟ್ರೇಲಿಯದಿಂದ ಸರ್ಬಿಯಾಕ್ಕೆ ವಾಪಸಾಗಿದ್ದಾರೆ.
ಈ ನಡುವೆ ಅವರಿಗೆ ಮುಂಬರುವ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಬಾಗಿಲು ಕೂಡ ಮುಚ್ಚುವ ಸಾಧ್ಯತೆ ಇದೆ. ಲಸಿಕೆ ಪಡೆಯದೇ ಹೋದರೆ ಅವರಿಗೆ ಇಲ್ಲಿ ಆಡುವ ಅವಕಾಶ ಸಿಗದು ಎಂದು ಫ್ರಾನ್ಸ್ ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿದೆ.
ಫ್ರಾನ್ಸ್ ರವಿವಾರವಷ್ಟೇ ನೂತನ “ವ್ಯಾಕ್ಸಿನ್ ಪಾಸ್ ಲಾ’ ಒಂದನ್ನು ಮಂಡಿಸಿದೆ. ಅದರಂತೆ ವ್ಯಾಕ್ಸಿನ್ ಸಿರ್ಟಿಫಿಕೆಟ್ ಹೊಂದಿಲ್ಲದವರಿಗೆ ಹೊಟೇಲ್, ಕೆಫೆ, ಸಿನೆಮಾ ಹಾಲ್, ರೈಲಿನಲ್ಲಿ ದೂರ ಪ್ರಯಾಣ ನಿರ್ಬಂಧಿಸಲಾಗಿದೆ.