ಎರಡೂವರೆ ಸಾವಿರ ಬಲ್ಬ್ ಅಳವಡಿಕೆ ಪೂರ್ಣ

ಮಂಗಳೂರಿನ ರಸ್ತೆಗಳಿಗೆ ಎಲ್‌ಇಡಿ ಬೀದಿದೀಪ

Team Udayavani, Sep 26, 2021, 4:02 AM IST

ಎರಡೂವರೆ ಸಾವಿರ ಬಲ್ಬ್ ಅಳವಡಿಕೆ ಪೂರ್ಣ

ಮಹಾನಗರ: ನಗರದಲ್ಲಿ ಈಗಿರುವ ಬೀದಿ ದೀಪಗಳನ್ನು ಎಲ್‌ಇಡಿ ಬೀದಿ ದೀಪಗಳಾಗಿ ಪರಿವರ್ತಿಸುವ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ಬೀಚ್‌ ಪ್ರದೇಶದಿಂದ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ.

ನಗರದಲ್ಲಿ ಈಗಾಗಲೇ 2,500ಕ್ಕೂ ಹೆಚ್ಚಿನ ಎಲ್‌ಇಡಿ ಬೀದಿದೀಪ ಅಳವಡಿಕೆ ಕೆಲಸ ಪೂರ್ಣಗೊಂಡಿದೆ. ಸದ್ಯ ತಣ್ಣೀರುಬಾವಿ ಸುತ್ತಮುತ್ತ ಎಲ್‌ಇಡಿ ಬೀದಿ ದೀಪ ಅಳವಡಿಕೆ ಕಾರ್ಯ ನಡೆಯುತ್ತಿದೆ. ಮಂಗಳೂರಿನ ಬೀಚ್‌ ಪ್ರದೇಶದಲ್ಲಿರುವ ಬೀದಿ ದೀಪಗಳು ನಿರ್ವಹಣೆ ಸರಿಯಿಲ್ಲ ಎಂಬ ದೂರುಗಳು ಬರುತ್ತಿದ್ದವು. ಸಮುದ್ರದ ಉಪ್ಪಿನಾಂಶದಿಂದಾಗಿ ಬೀದಿ ದೀಪಗಳಲ್ಲಿ ತುಕ್ಕು ಹಿಡಿದು ಆಗಾಗ್ಗೆ ಸಮಸ್ಯೆ ಉಂಟಾಗುತ್ತಿತ್ತು. ಈ ನಿಟ್ಟಿನಲ್ಲಿ ಬೀಚ್‌ ಪ್ರದೇಶದಲ್ಲಿ ಎಲ್‌ಇಡಿ ಅಳವಡಿಸುವ ಕೆಲಸಕ್ಕೆ ಮೊದಲು ಆದ್ಯತೆ ನೀಡಲಾಗಿದೆ. ಅದೇ ರೀತಿ ಇತರ ವಾರ್ಡ್‌ಗಳಲ್ಲಿಯೂ ಕಾಮಗಾರಿ ಸಾಗುತ್ತಿದೆ.

ಒಟ್ಟು 67,000 ಎಲ್‌ಇಡಿ ಬೀದಿ ದೀಪ ಅಳವಡಿಕೆ
ಸ್ಮಾರ್ಟ್‌ಸಿಟಿ ವತಿಯಿಂದ ಮಂಗಳೂರು ನಗರದಲ್ಲಿ ಎಲ್ಲ ವಾರ್ಡ್‌ ಗಳಲ್ಲಿ ಸೇರಿ ಒಟ್ಟು 67,000 ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಕಳೆದ ಮಾರ್ಚ್‌ನಿಂದ ಆರಂಭಗೊಂಡ ಕಂಬಗಳ ಸಮೀಕ್ಷೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಹೊಸದಾಗಿ ಅಳವಡಿಸಲಾಗುವ ಎಲ್‌ಇಡಿ ಬಲ್ಬ್ ಗಳನ್ನು ನಗರದ ರಸ್ತೆಗಳಿಗೆ ಅನುಗುಣವಾಗಿ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ನಗರದ ಜನನಿಬಿಡ ರಸ್ತೆ, ಒಳರಸ್ತೆ, ಸದಾ ವಾಹನ ಸಂಚಾರದ ರಸ್ತೆ ಹೀಗೆ ವಿವಿಧ ಪ್ರಾಕಾರಗಳಲ್ಲಿ ವಿಂಗಡಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ವೈಜ್ಞಾನಿಕ ರೀತಿಯಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಬಲ್ಬ್ ಗಳನ್ನು ಅಳವಡಿಸಲಾಗುತ್ತದೆ. ಈ ವರ್ಷಾಂತ್ಯಕ್ಕೆ ಎಲ್‌ಇಡಿ ಬೀದಿ ದೀಪ ಅಳವಡಿಕೆ ಪೂರ್ಣಗೊಳಿಸುವ ಇರಾದೆ ಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 7 ವರ್ಷಗಳ ಕಾಲ ಬೀದಿ ದೀಪಗಳ ನಿರ್ವಹಣೆಯ ಈಗಾಗಲೇ ಟೆಂಡರ್‌ ವಹಿಸಿಕೊಂಡಿರುವ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ.

ಇದನ್ನೂ ಓದಿ:ದಲಿತ ಬಾಲಕ ದೇವಸ್ಥಾನ ಪ್ರವೇಶ ಪ್ರಕರಣ |ಅಸ್ಪೃಶ್ಯತೆ ಮುಕ್ತ ಗ್ರಾಮಕ್ಕಾಗಿ ಜನತೆ ಪ್ರತಿಜ್ಞೆ 

ಸ್ಮಾರ್ಟ್‌ ಮೀಟರ್‌ ಅಳವಡಿಕೆ
ಮಂಗಳೂರಿನ ಎಲ್‌ಇಡಿ ಬೀದಿ ದೀಪಗಳುಳ್ಳ ವಿದ್ಯುತ್‌ ಕಂಬಗಳಿಗೆ ಮುಂದಿನ ದಿನಗಳಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಸಲು ಚಿಂತನೆ ನಡೆಯುತ್ತಿದೆ. ಈ ರೀತಿ ಸ್ಮಾರ್ಟ್‌ ಮೀಟರ್‌ ಅಳವಡಿಸಿದರೆ ಎಲ್‌ಇಡಿ ಬಲ್ಬ್ಗಳ ಮೇಲ್ವಿಚಾರಣೆ ನಡೆಸಲು ಸುಲಭವಾಗುತ್ತದೆ. ಮೀಟರ್‌ ರೀಡಿಂಗ್‌, ಯಾವ ಪ್ರದೇಶದಲ್ಲಿ ಲೈಟ್‌ ಉರಿಯುತ್ತಿಲ್ಲ, ಯಾವ ಕಂಬದಲ್ಲಿ ಬಲ್ಬ್ ಸರಿಯಿಲ್ಲ ಎಂಬಿತ್ಯಾದಿ ಮಾಹಿತಿಯನ್ನು ಜಿಪಿಎಸ್‌ ಆಧಾರಿತವಾಗಿ ಮೊಬೈಲ್‌ನಲ್ಲಿಯೇ ಪಡೆಯಲು ಸಾಧ್ಯವಾಗುತ್ತದೆ. ಸ್ಮಾರ್ಟ್‌ ಮೀಟರ್‌ ಅಳವಡಿಸುವ ಕುರಿತು ಸ್ಮಾರ್ಟ್‌ಸಿಟಿ, ಸ್ಥಳೀಯಾಡಳಿತದಿಂದ ಮೆಸ್ಕಾಂನ ಅನುಮತಿ ಪಡೆಯುವ ಕೆಲಸ ನಡೆಯುತ್ತಿದೆ.

ಮತ್ತಷ್ಟು ವೇಗ
ನಗರದಲ್ಲಿ ಈಗಾಗಲೇ ಅಳವಡಿಸಿದ ಬೀದಿ ದೀಪಗಳನ್ನು ಎಲ್‌ಇಡಿ ಬೀದಿದೀಪಗಳಾಗಿ ಬದಲಾಯಿಸುವ ಕೆಲಸ ಸ್ಮಾರ್ಟ್‌ಸಿಟಿ ವತಿಯಿಂದ ನಡೆಯುತ್ತಿದೆ. ಈಗಾಗಲೇ ನಗರದಲ್ಲಿ 2,500 ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟ ವೇಗ ನೀಡಲಾಗುತ್ತದೆ. ಎಲ್‌ಇಡಿ ಬೀದಿ ದೀಪ ಅಳವಡಿಕೆಯಿಂದ ವಿದ್ಯುತ್‌ ದರದ ಹೊರೆ ಕಡಿಮೆಯಾಗಲಿದೆ.
-ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

 

ಟಾಪ್ ನ್ಯೂಸ್

ಸಿಲೆಬಸ್ ಕಡಿತದ ಯೋಚನೆಯಿಲ್ಲ, ರಜೆದಿನ ಬಳಸಿ ಪಾಠ ಮಾಡುತ್ತೇವೆ: ಸಚಿವ ಬಿ.ಸಿ.ನಾಗೇಶ್

ಸಿಲೆಬಸ್ ಕಡಿತದ ಯೋಚನೆಯಿಲ್ಲ, ರಜೆದಿನ ಬಳಸಿ ಪಾಠ ಮಾಡುತ್ತೇವೆ: ಸಚಿವ ಬಿ.ಸಿ.ನಾಗೇಶ್

51

ಪಾಕ್ ವಿರುದ್ಧ ಸೋಲಿನ ನಡುವೆಯೂ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ, ಧೋನಿ

ತೆಲಂಗಾಣ ಗಡಿಯಲ್ಲಿ ಎನ್ ಕೌಂಟರ್: ಮೂವರು ನಕ್ಸಲರ್ ಹತ್ಯೆಗೈದ ಪೊಲೀಸರು

ತೆಲಂಗಾಣ ಗಡಿಯಲ್ಲಿ ಎನ್ ಕೌಂಟರ್: ಮೂವರು ನಕ್ಸಲರನ್ನು ಹತ್ಯೆಗೈದ ಪೊಲೀಸರು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

meghana gaonkar

ಶಿವಾಜಿ ಸುರತ್ಕಲ್‌-2: ಮೇಘನಾ ಗಾಂವ್ಕರ್‌ ಎಂಟ್ರಿ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 14,306 ಕೋವಿಡ್ ಪ್ರಕರಣ ಪತ್ತೆ, 443 ಮಂದಿ ಸಾವು

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 14,306 ಕೋವಿಡ್ ಪ್ರಕರಣ ಪತ್ತೆ, 443 ಮಂದಿ ಸಾವು

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದಿನಿಂದ ಶಾಲೆಯಂಗಳದಲ್ಲಿ ಚಿಣ್ಣರ ಕಲರವ

ಇಂದಿನಿಂದ ಶಾಲೆಯಂಗಳದಲ್ಲಿ ಚಿಣ್ಣರ ಕಲರವ

ಕುಂಟುತ್ತಾ ಸಾಗುತ್ತಿದೆ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ: ಸವಾರರಿಗೆ ಸಂಕಷ್ಟ

ಕುಂಟುತ್ತಾ ಸಾಗುತ್ತಿದೆ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ: ಸವಾರರಿಗೆ ಸಂಕಷ್ಟ

ಪ್ರಾಯೋಗಿಕ “ಟ್ರಾಫಿಕ್‌ ಐಲ್ಯಾಂಡ್‌’ನಿಂದ ಸಂಚಾರ ಸಂಕಷ್ಟ

ಪ್ರಾಯೋಗಿಕ “ಟ್ರಾಫಿಕ್‌ ಐಲ್ಯಾಂಡ್‌’ನಿಂದ ಸಂಚಾರ ಸಂಕಷ್ಟ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಹಿಂದೂ ಧಾರ್ಮಿಕ ಸ್ಥಳಗಳನ್ನು ಭಗ್ನಗೊಳಿಸುವವರಿಗೆ ಕ್ಷಮೆಯಿಲ್ಲ: ಶಾಸಕ ಡಾ.ಭರತ್ ಶೆಟ್ಟಿ

ಹಿಂದೂ ಧಾರ್ಮಿಕ ಸ್ಥಳಗಳನ್ನು ಭಗ್ನಗೊಳಿಸುವವರಿಗೆ ಕ್ಷಮೆಯಿಲ್ಲ: ಶಾಸಕ ಡಾ.ಭರತ್ ಶೆಟ್ಟಿ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

Cycle Jatha for World Folio Day

ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ

ಸಿಲೆಬಸ್ ಕಡಿತದ ಯೋಚನೆಯಿಲ್ಲ, ರಜೆದಿನ ಬಳಸಿ ಪಾಠ ಮಾಡುತ್ತೇವೆ: ಸಚಿವ ಬಿ.ಸಿ.ನಾಗೇಶ್

ಸಿಲೆಬಸ್ ಕಡಿತದ ಯೋಚನೆಯಿಲ್ಲ, ರಜೆದಿನ ಬಳಸಿ ಪಾಠ ಮಾಡುತ್ತೇವೆ: ಸಚಿವ ಬಿ.ಸಿ.ನಾಗೇಶ್

HDK

ಸಿದ್ದು ಕಣ್ಣೀರಿಟ್ಟಾಗ ಧೈರ್ಯ ತುಂಬಿದ್ದೇ ಗೌಡರು

14brims

ವೈದ್ಯ ಪಿಜಿ ಕೋರ್ಸ್‌ ಆರಂಭಿಸಲು ಬ್ರಿಮ್ಸ್ ಸಿದ್ದತೆ

ಮೈಸೂರು

18 ದಿನ ಕಂಗೊಳಿಸಿದ ದಸರಾ ದೀಪಾಲಂಕಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.