ಬಯಲು ಶೌಚ ಪ್ರಿಯರಿಗೆ ಸನ್ಮಾನ! :ಚೊಂಬು ಹಿಡಿದು ಹೊರಟವರಿಗೆ ಗುಲಾಬಿ ಹೂ


Team Udayavani, Jul 29, 2022, 5:04 PM IST

16

ಗದಗ: ಸಾಮಾನ್ಯವಾಗಿ ಸಾಧನೆ ಮಾಡಿದವರಿಗೆ, ಸಭೆ-ಸಮಾರಂಭಗಳಲ್ಲಿ ಮುಖ್ಯ ಅತಿಥಿಗಳಿಗೆ, ಪ್ರಶಸ್ತಿ ಪುರಸ್ಕೃತರಿಗೆ, ನವ ಜೋಡಿಗಳಿಗೆ ಹೂವಿನ ಹಾರ ಹಾಕಿ ಸತ್ಕರಿಸುವುದು ರೂಢಿ. ಆದರೆ, ಇಲ್ಲೊಂದು ಗ್ರಾಮದಲ್ಲಿ ಬೆಳಗಿನ ಜಾವ ಚೊಂಬು ಹಿಡಿದು ಹೊರಟವರ ಕೈಗೆ ಗುಲಾಬಿ ಹೂ ನೀಡಿ, ಕೊರಳಿಗೆ ಹೂವಿನ ಹಾರ ಹಾಕಿ ಸತ್ಕರಿಸಲಾಗುತ್ತಿದೆ!

ಅರೇ.. ಚೊಂಬು ಹಿಡಿದು ಹೊರಟವರಿಗೆ ಹಾರ ಹಾಕಿ ಸತ್ಕಾರವೇ ಎಂದು ಗಲಿಬಿಲಿಯಾಗಬೇಡಿ. ಗದಗ ಜಿಪಂ ವತಿಯಿಂದ ಸ್ವತ್ಛ ಭಾರತ ಮಿಷನ್‌ ಗ್ರಾಮೀಣ ಯೋಜನೆಯಡಿ ಗ್ರಾಮದಲ್ಲಿ ಶೌಚಾಲಯ ಬಳಕೆ ಕುರಿತು ಜನಜಾಗೃತಿ ಕಾರ್ಯಕ್ರಮದಲ್ಲಿ ಚೊಂಬು ಹಿಡಿದು ಹೊರಟ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿರುವ ಪರಿಯಿದು.

ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ 2,380 ಕುಟುಂಬಗಳಿದ್ದು, 2,087 ವೈಯಕ್ತಿಕ ಶೌಚಾಲಯಗಳಿವೆ. ಆದರೆ, ಬಹುತೇಕ ಗ್ರಾಮಸ್ಥರು ವೈಯಕ್ತಿಕ ಶೌಚಾಲಯ ಬಳಸದೆ ಚೊಂಬು ಹಿಡಿದುಕೊಂಡು ರಸ್ತೆ ಬದಿ, ಕೆರೆ ದಂಡೆ ಹಾಗೂ ಖಾಲಿ ಜಾಗದಲ್ಲಿ ಬಯಲು ಬಹಿರ್ದೆಸೆಗೆ ಹೋಗುವುದನ್ನು ರೂಢಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ವತಿಯಿಂದ ಹಲವು ಬಾರಿ ಗ್ರಾಮಸ್ಥರಿಗೆ ಶೌಚಾಲಯ ಬಳಸಬೇಕು, ರೋಗ ಮುಕ್ತ ಜೀವನ ನಡೆಸಬೇಕು ಎಂದು ತಿಳಿವಳಿಕೆ ನೀಡಿದರೂ ಚೊಂಬು ಹಿಡಿದುಕೊಂಡೇ ಬಯಲು ಬಹಿರ್ದೆಸೆಗೆ ತೆರಳುವುದನ್ನು ನಿಲ್ಲಿಸಿರಲಿಲ್ಲ. ಇದನ್ನರಿತ ಗ್ರಾಪಂ ಅಧಿ ಕಾರಿಗಳು ಹಾಗೂ ಸಿಬ್ಬಂದಿ, ಬಹಿರ್ದೆಸೆಗೆ ಹೋಗುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದಲ್ಲಿ ತಾವೇ ರಸ್ತೆಗಿಳಿದಿದ್ದಾರೆ.

ಚೊಂಬು ಹಿಡಿದವರಿಗೆ ಹಾರ: ಗ್ರಾಮದಲ್ಲಿ ಬೆಳಗಿನ ಜಾವ ಚೊಂಬು ಹಿಡಿದು ಬಹಿರ್ದೆಸೆಗೆ ಹೋಗುವವರಿಗೆ ಹೂವಿನ ಹಾರ ಹಾಕುವುದು, ಗುಲಾಬಿ ಹೂವು ಕೊಡುವುದು ಹಾಗೂ ಸೀಟಿ ಹೊಡೆಯುವ ಮೂಲಕ ಮುಜುಗರದ ಸನ್ನಿವೇಶ ಉಂಟು ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಹೂವಿನ ಹಾರ ಹಾಕಿ, ಕೈಗೆ ಗುಲಾಬಿ ಹೂ ನೀಡಲಾಗುತ್ತಿದೆ. ಶೌಚಾಲಯ ಬಳಕೆ ಮಾಡಿ ರೋಗದಿಂದ ಮುಕ್ತವಾಗಿರಿ ಎಂಬ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಲಹೆ ಪಡೆದ ಸಾರ್ವಜನಿಕರು ಶೌಚಾಲಯ ಬಳಸುವುದಾಗಿ ತಿಳಿಸುತ್ತಿದ್ದಾರೆ. ಕೆಲವರು ಸಮುದಾಯ ಶೌಚಾಲಯ ನಿರ್ಮಿಸಿಕೊಡಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದಾರೆ.

ಶೌಚಾಲಯ ನಿರ್ಮಾಣಕ್ಕೆ ಸಹಾಯಧನ: ಜಿಪಂ ವತಿಯಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಎಸ್ಸಿ-ಎಸ್ಟಿ ಸಮುದಾಯದವರಿಗೆ 15,000 ರೂ., ಸಾಮಾನ್ಯ ಜನರಿಗೆ 12,000 ರೂ. ಸಹಾಯಧನ ನೀಡಲಾಗುತ್ತಿದೆ. ಸಾರ್ವಜನಿಕರು ಸಿಟಿಜನ್‌’ ಅಪ್ಲಿಕೇಶನ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸ್ವಚ್ಛ ಸೋಮವಾರ ಅಭಿಯಾನ: ಗದಗ ಜಿಪಂ ವತಿಯಿಂದ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸ್ವತ್ಛ ಭಾರತ ಮಿಷನ್‌ ಗ್ರಾಮೀಣ ಯೋಜನೆಯಡಿ ಸ್ವತ್ಛ ಸೋಮವಾರ ಅಭಿಯಾನದ ಅಂಗವಾಗಿ ಶೌಚಾಲಯ ಬಳಕೆ, ತ್ಯಾಜ್ಯ ವಸ್ತುಗಳ ನಿರ್ವಹಣೆ, ಅಂತರ್ಜಲ ಪುನಃಶ್ಚೇತನ, ನೀರಿನ ಮೂಲಗಳ ಸಂರಕ್ಷಣೆ, ಮಳೆ ನೀರು ಇಂಗಿ ಸುವ ವಿಧಾನಗಳು, ನೀರಿನ ಸ್ವಚ್ಛತೆ, ಇಂಗು ಗುಂಡಿ ನಿರ್ಮಾಣ ಮಾಡಿಕೊಳ್ಳುವುದು, ವೈಯಕ್ತಿಕ, ಕೌಟುಂಬಿಕ ಸಮುದಾಯ ಶುಚಿತ್ವ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರಮದಾನ, ನನ್ನ ಶಾಲೆ ಕಸ ಮುಕ್ತ ಶಾಲೆ ವಿಶೇಷ ಅಭಿಯಾನ, ಪ್ಲಾಸ್ಟಿಕ್‌ ನಿಷೇಧದ ಕುರಿತು ಕಿರಾಣಿ, ಚಹಾ ಅಂಗಡಿ ಮಾಲಿಕರಿಗೆ ತಿಳಿವಳಿಕೆ ನೀಡುವುದು ಸೇರಿದಂತೆ ಗ್ರಾಮೀಣ ಜನರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಸ್ವಚ್ಛ ಭಾರತ ಮಿಷನ್‌ ಗ್ರಾಮೀಣ ಯೋಜನೆಯಡಿ ಸ್ವತ್ಛ ಸೋಮವಾರ ಅಭಿಯಾನದ ಅಂಗವಾಗಿ ಪ್ರತಿ ಗ್ರಾಮದಲ್ಲಿ ಪ್ರತಿ ಸೋಮವಾರ ಸ್ವಚ್ಛತೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಸ್ಪಂದಿಸುತ್ತಿದ್ದಾರೆ. ●ಸಂತೋಷ ಕುಮಾರ ಪಾಟೀಲ, ತಾಪಂ ಇಒ

ಗ್ರಾಮದಲ್ಲಿ ಅನೇಕ ಜನರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದರೂ ಅವುಗಳನ್ನು ಬಳಸದೆ ಬಯಲನ್ನೇ ಆಧರಿಸಿದ್ದರು. ಗ್ರಾಪಂ ವತಿಯಿಂದ ಹಮ್ಮಿಕೊಂಡ ಜನಜಾಗೃತಿ ಅಭಿಯಾನದಲ್ಲಿ ಮುಜುಗರಕ್ಕೊಳಗಾಗಿ ಕೆಲವರು ಶೌಚಾಲಯಗಳನ್ನು ಬಳಸಲು ಮುಂದಾಗಿದ್ದಾರೆ. ●ತಾಯಪ್ಪ ಕೆಂಗಾರ, ಅಬ್ಬಿಗೇರಿ ಗ್ರಾಮಸ್ಥ

-ಅರುಣಕುಮಾರ ಹಿರೇಮಠ

ಟಾಪ್ ನ್ಯೂಸ್

12

ಮಧುಗಿರಿ: ಜೆಇ ಲಸಿಕೆ ಪಡೆದ ಮಕ್ಕಳಿಗೆ ತಲೆಸುತ್ತು; ಆಸ್ಪತ್ರೆಗೆ ದಾಖಲು

ct rav

ರಾಜಕೀಯ ಕಾರಣಕ್ಕೆ ರೌಡಿ ಶೀಟ್ ನಲ್ಲಿ ಸೇರಿಸಿರುವವರ ಬಗ್ಗೆ ಹೇಳಿದ್ದೇನೆ : ಸಿ.ಟಿ.ರವಿ

tdy-8

ತನ್ನನು ತಾನೇ ಪಣಕ್ಕಿಟ್ಟು ಮನೆ ಮಾಲೀಕನೊಂದಿಗೆ ಲುಡೋ ಆಡಿ ಸೋತ ಮಹಿಳೆ: ಮುಂದೆ ಆಗಿದ್ದೇನು?

11

ಬಂಟ್ವಾಳ: ಲಾರಿಯಡಿಗೆ ಬಿದ್ದು ಮಹಿಳೆ ಮೃತ್ಯು

bond ravi trailer

ಟ್ರೇಲರ್ ನಲ್ಲಿ ಮಿಂಚಿದ ‘ಬಾಂಡ್ ರವಿ’: ಡಿ.9ಕ್ಕೆ ಪ್ರಮೋದ್ ಹೊಸಚಿತ್ರ ರಿಲೀಸ್

ಬಾಡಿಗೆ ಮನೆಗೆ ಅಡ್ವಾನ್ಸ್‌  ಹಣ ಹೊಂದಿಸಲು ಮನೆ ಕಳ್ಳತನ: ದಂಪತಿ ಸೆರೆ

ಬಾಡಿಗೆ ಮನೆಗೆ ಅಡ್ವಾನ್ಸ್‌  ಹಣ ಹೊಂದಿಸಲು ಮನೆ ಕಳ್ಳತನ: ದಂಪತಿ ಸೆರೆ

ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ: ಸಿಎಂ ಬೊಮ್ಮಾಯಿ

ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

ಅರ್ಹ ಯುವಕರನ್ನು ಮತದಾರರ ಪಟ್ಟಿಗೆ ಸೇರಿಸಿ

5

ಜನಸೇವೆಯೇ ಜನಪ್ರತಿನಿಧಿಗಳ ಆದ್ಯತೆಯಾಗಲಿ

news-3

ಗದಗ: ಮೂವರಿಗೆ ಚಾಕು ಇರಿತ; ಗಾಯಾಳುಗಳು ಆಸ್ಪತ್ರೆಗೆ ದಾಖಲು

18

ವೀರರಾಣಿ ಕಿತ್ತೂರು ಚನ್ನಮ್ಮರ 199ನೇ ವಿಜಯೋತ್ಸವ-244ನೇ ಜಯಂತ್ಯುತ್ಸವ

ತಕ್ಷಣ ಗಡಿ ಉಸ್ತುವಾರಿಗೆ ಸಚಿವರ ನೇಮಿಸಿ: ಎಚ್‌.ಕೆ. ಪಾಟೀಲ್

ತಕ್ಷಣ ಗಡಿ ಉಸ್ತುವಾರಿಗೆ ಸಚಿವರ ನೇಮಿಸಿ: ಎಚ್‌.ಕೆ. ಪಾಟೀಲ್

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

ಪ್ಲಾಸ್ಟಿಕ್‌ ನಿಷೇಧ ಆದೇಶಕ್ಕಿಲ್ಲ ಬೆಲೆ

ಪ್ಲಾಸ್ಟಿಕ್‌ ನಿಷೇಧ ಆದೇಶಕ್ಕಿಲ್ಲ ಬೆಲೆ

12

ಮಧುಗಿರಿ: ಜೆಇ ಲಸಿಕೆ ಪಡೆದ ಮಕ್ಕಳಿಗೆ ತಲೆಸುತ್ತು; ಆಸ್ಪತ್ರೆಗೆ ದಾಖಲು

ct rav

ರಾಜಕೀಯ ಕಾರಣಕ್ಕೆ ರೌಡಿ ಶೀಟ್ ನಲ್ಲಿ ಸೇರಿಸಿರುವವರ ಬಗ್ಗೆ ಹೇಳಿದ್ದೇನೆ : ಸಿ.ಟಿ.ರವಿ

rape 1

80 ವರ್ಷದ ವೃದ್ದೆಯ ಮೇಲೆ ಅತ್ಯಾಚಾರ ಎಸಗಿದ ಯುವಕ

tdy-8

ತನ್ನನು ತಾನೇ ಪಣಕ್ಕಿಟ್ಟು ಮನೆ ಮಾಲೀಕನೊಂದಿಗೆ ಲುಡೋ ಆಡಿ ಸೋತ ಮಹಿಳೆ: ಮುಂದೆ ಆಗಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.