ಗಂಗೊಳ್ಳಿ: ಇನ್ನೂ ದುರಸ್ತಿಯಾಗದ ಬ್ರೇಕ್ವಾಟರ್
Team Udayavani, Jul 4, 2020, 6:17 AM IST
ಗಂಗೊಳ್ಳಿ: ಕಡಲ್ಕೊರೆತ ತಡೆಗಾಗಿ ಗಂಗೊಳ್ಳಿ ಹಾಗೂ ಕೋಡಿಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಬ್ರೇಕ್ವಾಟರ್ ಮತ್ತಷ್ಟು ಕುಸಿಯುತ್ತಲೇ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ, ಗುತ್ತಿಗೆದಾರರಿಗೆ ತ್ವರಿತ ಕಾಮಗಾರಿಗೆ ಸೂಚನೆ ನೀಡಿದ್ದರೂ, ಇನ್ನೂ ಕೂಡ ದುರಸ್ತಿಯಾಗಿಲ್ಲ.
ಕೋಡಿಯಲ್ಲಿ ಸುಮಾರು 900 ಮೀ. ಹಾಗೂ ಗಂಗೊಳ್ಳಿಯಲ್ಲಿ 700 ಮೀ. ಉದ್ದದ 102 ಕೋ.ರೂ. ವೆಚ್ಚದ ಬ್ರೇಕ್ ವಾಟರ್ ಕಾಮಗಾರಿ ಕಳೆದ ವರ್ಷ ಪೂರ್ಣಗೊಂಡಿತ್ತು. ಮೇನಲ್ಲಿ ಗಂಗೊಳ್ಳಿ ಭಾಗದಲ್ಲಿ ಟೆಟ್ರಾಫೈಡ್ ಹಾಗೂ ಕಲ್ಲುಗಳನ್ನು ಹಾಕಿ ನಿರ್ಮಿಸಲಾದ 700 ಮೀ. ಉದ್ದದ ಬ್ರೇಕ್ ವಾಟರ್ನ ಕಲ್ಲುಗಳು ಕುಸಿದಿದ್ದು, ಅದು ಈಗ ಮತ್ತಷ್ಟು ಹೆಚ್ಚಾಗುತ್ತಿದೆ.
ಬ್ರೇಕ್ ವಾಟರ್ ಕುಸಿದ ಬಳಿಕ ಜೂ.1 ರಂದು ಇಲ್ಲಿಗೆ ಭೇಟಿ ನೀಡಿದ್ದ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ತುರ್ತಾಗಿ ಸರಿಪಡಿಸುವಂತೆ ಹಾಗೂ ತಡೆಗೋಡೆ ಮತ್ತಷ್ಟು ಕುಸಿಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಗುತ್ತಿಗೆದಾರರಿಗೆ ಸೂಚಿಸಿದ್ದರು. ಆದರೆ ಭೇಟಿ ನೀಡಿ 1 ತಿಂಗಳು ಕಳೆದರೂ ದುರಸ್ತಿ ಮಾತ್ರ ಆಗಿಲ್ಲ. ಹಾಗಾದರೆ ಇಲಾಖೆಯ ಅಧಿಕಾರಿಗಳ ಸೂಚನೆಗೆ ಬೆಲೆಯೇ ಇಲ್ಲವೇ ಎನ್ನುವುದು ಮೀನುಗಾರರ ಪ್ರಶ್ನೆಯಾಗಿದೆ.
ಕಲ್ಲು ಹಾಕಲು ಸೂಚನೆ
ಭೇಟಿ ನೀಡಿದ್ದ ವೇಳೆಯೇ ಸದ್ಯಕ್ಕೆ ಕಲ್ಲು ಹಾಕಿ ಕುಸಿಯದಂತೆ ಎಚ್ಚರಿಕೆ ವಹಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿತ್ತು. ಆದರೆ ಆ ಬಳಿಕ ಮಳೆ ಆರಂಭವಾಗಿದ್ದರಿಂದ ಕಷ್ಟವಾಯಿತು. ಈಗ ಕುಸಿಯುತ್ತಿರುವುದರಿಂದ ಕುಸಿಯದಂತೆ ಕಲ್ಲುಗಳನ್ನು ಹಾಕಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು.
– ಉದಯಕುಮಾರ್, ಸಹಾಯಕ ಎಂಜಿನಿಯರ್, ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ