ಜರ್ಮನಿ : ಎಲ್ಲೇ ಹೋದರೂ ಮಾಸ್ಕ್ ಕಡ್ಡಾಯ
Team Udayavani, Apr 28, 2020, 4:50 PM IST
ಮಣಿಪಾಲ: ಜರ್ಮನಿಯಲ್ಲಿ ಇದೀಗ ಚೇತರಿಕೆ ಗಾಳಿ ಬೀಸುತ್ತಿದೆ. ಆದರೆ ಅಷ್ಟೇ ವೇಗವಾಗಿ ಲಾಕ್ಡೌನ್ ನಿಯಮಗಳನ್ನು ಈ ದೇಶ ಸಡಿಲಗೊಳಿಸುತ್ತಿದ್ದು, ಆತಂಕದ ನಡುವೆಯೇ ದೇಶವನ್ನು ಸಹಜ ಸ್ಥಿತಿಯತ್ತ ತರಲು ಪ್ರಯತ್ನಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಲಾಕ್ಡೌನ್ ಸಂಬಂಧಿಸಿದಂತೆ ಹಲವು ವಿನಾಯಿತಿ ನೀಡಿದರೂ ಸಾರ್ವಜನಿಕ ಸಾರಿಗೆ ವ್ಯಾಪಾರ ಸ್ಥಳ, ಅಂಗಡಿ ಮುಂಗಟ್ಟು ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ನಿಯಮ ಜಾರಿಗೊಳಿಸಲಾಗಿದೆ.
ಪ್ರತಿ ರಾಜ್ಯದ ಸರಕಾರ ಜತೆ ಚರ್ಚೆ
ಪಶ್ಚಿಮ ರಾಜ್ಯವಾದ ನಾರ್ತ್ ರೈನ್-ವೆಸ್ಟಾ#ಲಿಯಾದಲ್ಲಿ, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ಪೆಟ್ರೋಲ್ ಬಂಕ್ಗಳಲ್ಲಿ ಮಾಸ್ಕ್ ಧರಿಸಿಯೇ ವ್ಯವಹಾರ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಬರಬೇಕು. ಆದರೆ ಅದೇ ಬರ್ಲಿನ್ನ ಅಂಗಡಿಗಳಲ್ಲಿ ಮಾಸ್ಕ್ ಧಾರಣೆ ನಿಯಮಕ್ಕೆ ವಿನಾಯಿತಿ ನೀಡಿದೆ.
ಆದರೆ ಈ ರೀತಿ ರಾಜ್ಯದಿಂದ ರಾಜ್ಯಕ್ಕೆ ನಿಯಮಗಳು ಭಿನ್ನವಾಗುವುದರಿಂದ ಜನರಲ್ಲಿ ಗೊಂದಲ ಮೂಡಬಹುದು. ಜತೆಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಬಹುದು. ಹಾಗಾಗಿ ಪ್ರತಿ ರಾಜ್ಯಗಳ ಸರಕಾರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಸರಕಾರ ಚಿಂತನೆ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸರಕಾರ ಸೂಚಿಸಿರುವ ಮಾರ್ಗಸೂಚಿಗಳಿಗೆ ಫೆಡರಲ್ ಮತ್ತು ರಾಜ್ಯ ಸರಕಾರಗಳು ಒಪ್ಪಿಗೆ ಸೂಚಿಸಿದ್ದು, ಮುಂದಿನ ಹಂತವಾಗಿ ಅಂಗಡಿ ಮತ್ತು ಶಾಲಾ ತೆರೆಯುವಿಕೆಯ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ.
ಪ್ರಧಾನಿಯಿಂದ ಖಡಕ್ ವಾರ್ನಿಂಗ್
ಕಳೆದ ವಾರ, ಚಾನ್ಸೆಲರ್ಏಂಜೆಲಾ ಮರ್ಕೆಲ್ ನಿಯಮಗಳನ್ನು ಸಡಿಲಗೊಳಿಸಿದ್ದರ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಈ ನಿರ್ಧಾರ ನಮ್ಮ “ಮೂರ್ಖತನ”ವನ್ನು ಸೂಚಿಸಬಹುದು ಎಂದು ಹೇಳುವ ಮೂಲಕ ಸಡಿಲಿಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.
ನೂರು ಬಾರಿ ಯೋಚಿಸಿ
ದೇಶದಲ್ಲಿ ನೀಡಲಾಗುತ್ತಿರುವ ನಿಯಮಗಳನ್ನು ಕುರಿತಾಗಿ ಮಾತನಾಡಿರುವ ಅವರು, ಸದ್ಯ ಸೋಂಕು ಪ್ರಸರಣ ಕಡಿತವಾಗಿದ್ದರೂ, ಕೆಲವು ದಿನಗಳ ಅನಂತರ ಹೊಸ ಸೋಂಕು ಪ್ರಕರಣಗಳು ಸಾಮಾನ್ಯವಾಗಿ ಪತ್ತೆಯಾಗಬಹುದು. ಆಗ ಇಷ್ಟು ದಿನ ನಾವು ಪಟ್ಟ ಶ್ರಮವೆಲ್ಲಾ ಹಾಳಾಗುತ್ತದೆ. ಹಾಗಾಗಿ ಸಡಿಲಿಕೆಯಲ್ಲಿ ವಿನಾಯಿತಿ ನೀಡುವಾಗ ನೂರು ಬಾರಿ ಯೋಚಿಸಿ ಎಂದು ಪ್ರತಿಯೊಂದು ರಾಜ್ಯದ ಆಡಳಿತಗಾರರಿಗೆ ಕಿವಿಮಾತು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಸ್ಲಾಮಾಬಾದ್: ಭೀಕರ ಅಪಘಾತ ಕಂದಕಕ್ಕೆ ಬಸ್ ಉರುಳಿ 19 ಮಂದಿ ಸಾವು; ಹಲವರು ಗಂಭೀರ
ಸಂಪ್ರದಾಯವಂತೆ..: ಮೊಸಳೆಯನ್ನು ಮದುವೆಯಾದ ಮೇಯರ್| ವಿಡಿಯೋ ನೋಡಿ
433 ದಂಪತಿಯಿಂದ “ಸ್ಪಾಘೆಟ್ಟಿ ಕಿಸ್’ ದಾಖಲೆ!
48 ವರ್ಷಗಳ ಹಿಂದಿನ ರೆಸ್ಯೂಮ್ ಪ್ರಕಟಿಸಿದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್
ನಿಮಗೂ ಸ್ಪೂರ್ತಿಯಾಗಬಹುದು…; 48 ವರ್ಷ ಹಳೆಯ ತಮ್ಮ ರೆಸ್ಯೂಮ್ ಹಂಚಿಕೊಂಡ ಬಿಲ್ ಗೇಟ್ಸ್