23 ನೇ ಬರ್ತ್ ಡೇ ಸಂಭ್ರಮ: ಗೂಗಲ್ ಬೆಳೆದು ಬಂದ ಇತಿಹಾಸ ರೋಚಕ
Team Udayavani, Sep 27, 2021, 2:06 PM IST
ಕ್ಯಾಲಿಫೋರ್ನಿಯಾ : ಜಗತ್ತಿನ ಅತೀ ಜನಪ್ರಿಯ ಜಾಲತಾಣ ಸಂಸ್ಥೆ ಗೂಗಲ್ ಸೆಪ್ಟೆಂಬರ್ 27 ರಂದು 23 ನೇ ಜನ್ಮದಿನವನ್ನು ಆಚರಿಸುತ್ತಿದೆ.ವಿವಿಧ ಮಾಹಿತಿಗಳಿಗಾಗಿ ಜನರು ಅತೀ ಹೆಚ್ಚು ಹುಡುಕಾಡುವ ಸಂಸ್ಥೆ ಗೂಗಲ್ ಬೆಳೆದು ಬಂದ ಇತಿಹಾಸ ರೋಚಕ.
ಗೂಗಲ್ ಸಂಸ್ಥಾಪಕರಾದ ಸರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಅವರು 1995 ರಲ್ಲಿ ಸ್ಟ್ಯಾಂಡ್ ಫೋರ್ಡ್ ವಿವಿಯಲ್ಲಿ ಜೊತೆಯಾಗಿ ಸಂಸ್ಥೆಯನ್ನು ಹುಟ್ಟು ಹಾಕಲು ಮುಂದಾಗಿದ್ದರು. 1998 ರಲ್ಲಿ ಗೂಗಲ್ ಸಂಸ್ಥೆಯನ್ನು ಅಧಿಕೃತವಾಗಿ ಹುಟ್ಟುಹಾಕಲಾಗಿತ್ತು.
ಬಾಡಿಗೆ ಗ್ಯಾರೇಜ್ ಒಂದರಲ್ಲಿ ಹುಟ್ಟಿಕೊಂಡ ಗೂಗಲ್ ನ ಮೂಲ ಹೆಸರು ಬ್ಯಾಕ್ ರಬ್.
ಬಹುಜನರಿಗೆ ದೈನಂದಿನ ಅಗತ್ಯವಾಗಿರುವ ಗೂಗಲ್ ನಲ್ಲಿ ಇಂದು ಜಗತ್ತಿನ ಬಿಲಿಯನ್ ಗಟ್ಟಲೆ ಜನರು 150 ಕ್ಕೂ ಹೆಚ್ಚು ಭಾಷೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಹೊಸ ಹೊಸ ಬದಲಾವಣೆಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಾ ಬಂದಿರುವ ಗೂಗಲ್ ಸಧ್ಯ ಕೇವಲ ಮುಖಚರ್ಯೆಯಿಂದಲೇ ನಿಯಂತ್ರಿಸುವ ಸ್ಮಾರ್ಟ್ ಫೋನ್ ಫೀಚರ್ ಅಭಿವೃದ್ಧಿ ಪಡಿಸಿದೆ.
ಭಾರತೀಯರಾದ ಸುಂದರ್ ಪಿಚೈ ಅವರು ಗೂಗಲ್ ನ ಸಿಇ ಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2004 ರಲ್ಲಿ ಅವರು ಕಂಪನಿಯನ್ನು ಸೇರಿದ್ದರು ಎನ್ನುವುದು ವಿಶೇಷ.
ಆಯಾ ದೇಶಗಳಿಗನುಗುಣವಾಗಿ ಸಾಧಕರ ಜನ್ಮದಿನದಂದು ವಿಶೇಷ ಡ್ಯೂಡಲ್ ಮೂಲಕ ಗೌರವ ಸಲ್ಲಿಸುವುದನ್ನು ಗೂಗಲ್ ಸಂಪ್ರದಾಯವನ್ನಾಗಿಸಿಕೊಂಡಿದೆ.
ಆರಂಭಿಕ ಹಂತದಲ್ಲಿ 30 ಜನ ಉದ್ಯೋಗಿಗಳಿದ್ದ ಗೂಗಲ್ ಸಂಸ್ಥೆಯಲ್ಲಿ 2020ರ ಅಂಕಿ ಅಂಶಗಳ ಪ್ರಕಾರ 1,35,301 ಮಂದಿ ಪೂರ್ಣಕಾಲಿಕ ಉದ್ಯೋಗಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ