ಇನ್ನೂ ಸಿಕ್ಕಿಲ್ಲ ಸರಕಾರದ ಸಹಾಯ ಧನ !
ಮುಗಿಯದ ರಿಕ್ಷಾ, ಟ್ಯಾಕ್ಸಿ ಚಾಲಕರ ಸಮಸ್ಯೆ
Team Udayavani, Jun 21, 2020, 5:39 AM IST
ಮಹಾನಗರ: ಕೋವಿಡ್ ಲಾಕ್‌ಡೌನ್‌ನಿಂದಾಗಿ ಬಹಳಷ್ಟು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದು, ಅದರಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಕೂಡ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಮುಖ್ಯಮಂತ್ರಿಗಳು 5,000 ರೂ. ಸಹಾಯಧನ ಇತ್ತೀಚೆಗೆ ಬಿಡುಗಡೆ ಮಾಡಿದ್ದರೂ, ದ.ಕ. ಜಿಲ್ಲೆಯ ಶೇ.90ರಷ್ಟು ಚಾಲಕರಿಗೆ ಇನ್ನೂ ಸಹಾಯಧನ ದೊರೆತತಿಲ್ಲ.
ಮುಖ್ಯಮಂತ್ರಿ ಸಹಾಯಧನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 22 ಸಾವಿರಕ್ಕೂ ಮಿಕ್ಕಿ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಿದ್ದರು. ಜಿಲ್ಲೆಯಲ್ಲಿ ಸುಮಾರು 18 ಸಾವಿರ ಮಂದಿ ಆಟೋ ಚಾಲಕರಿದ್ದು, ಮಂಗಳೂರು ನಗರದಲ್ಲಿಯೇ ಸುಮಾರು 9 ಸಾವಿರ ಮಂದಿ ಚಾಲಕರಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿ 5 ಸಾವಿರ ಮಂದಿ ಟ್ಯಾಕ್ಸಿ ಚಾಲಕರು ಫಲಾನುಭವಿಗಳಿದ್ದಾರೆ.ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಸೇವಾ ಸಿಂಧೂ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಈ ಸಮಯದಲ್ಲಿ ಅರ್ಜಿದಾರರಿಗೆ ಕೆಲವೊಂದು ಗೊಂದಲ ಉಂಟಾಗಿತ್ತು. ಕೆಲವು ಬಾರಿ ಪೋರ್ಟಲ್ ಸರ್ವರ್ ಸಮಸ್ಯೆ ಉಂಟಾದರೆ, ಆಧಾರ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸನ್ಸ್‌ನಲ್ಲಿ ಅರ್ಜಿದಾರರ ಹೆಸರಿನ ಪದ ಬೇರೆ ಬೇರೆ ಇದ್ದರೆ ಆ ಅರ್ಜಿ ಸ್ವೀಕೃತಗೊಳ್ಳುತ್ತಿರಲಿಲ್ಲ. ಇನ್ನು, ಮಾಹಿತಿಯೆಲ್ಲ ತುಂಬಿದ ಬಳಿಕ ಕೊನೆಗೆ ಸಲ್ಲಿಕೆ ಮಾಡುವ ವೇಳೆ ವೆಬ್‌ಸೈಟ್‌ನಲ್ಲಿ ಎರರ್ ಎಂದು ತೋರಿಸುತ್ತಿತ್ತು. ಈ ಕಾರಣಕ್ಕೆ ಕೆಲವು ಆಟೋ ಮತ್ತು ಟ್ಯಾಕ್ಸಿ ಚಾಲಕರು ಸಹಾಯಧನ ಪಡೆಯಲು ವಂಚಿತರಾಗಿದ್ದರು.
ಫಲಾನುಭವಿಗಳಿಗೆ ಶೀಘ್ರ ಹಣ ತಲುಪಿಸಿ
ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಈ ಬಗ್ಗೆ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ದಕ್ಷಿಣ ಕನ್ನಡ ಜಿಲ್ಲೆಯ ಶೇ.90ರಷ್ಟು ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಸರಕಾರದ ಸಹಾಯಧನ ಸಿಕ್ಕಿಲ್ಲ. ಈ ಬಗ್ಗೆ ಈಗಾಗಲೇ ಸರಕಾರದ ಗಮನಕ್ಕೆ ತಂದಿದ್ದೇನೆ. ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಸರಕಾರ ಹೇಳುತ್ತಿದ್ದು, ಕೂಡಲೇ ಫಲಾನುಭವಿಗಳಿಗೆ ಹಣ ತಲುಪಬೇಕು ಎಂದು ತಿಳಿಸಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444