ಬಂಟರ ಸಂಘದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನೂತನ ಕಿರು ಸಭಾಗೃಹ ಲೋಕಾರ್ಪಣೆ
Team Udayavani, Jan 26, 2021, 3:53 PM IST
ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಬಂಟರ ಭವನದ ಆವರಣದಲ್ಲಿರುವ ಶ್ರೀ ಮಹಾವಿಷ್ಣು, ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುವರ್ಣ ಪುಷ್ಪ ಸಮರ್ಪಣೆ ಮತ್ತು ನೂತನವಾಗಿ ನಿರ್ಮಾಣಗೊಂಡ ಕಿರು ಸಭಾಗೃಹ
ಲೋಕಾರ್ಪಣೆ ಸೇರಿದಂತೆ ವಿವಿಧ ಪೂಜಾ ವಿಧಿಗಳ ಧಾರ್ಮಿಕ ಕಾರ್ಯಕ್ರಮವು ಜ. 17ರಂದು ಬೆಳಗ್ಗೆ 10ರಿಂದ ಜರಗಿತು.
ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರ ಮಾರ್ಗದರ್ಶನದಲ್ಲಿ, ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ
ರವೀಂದ್ರನಾಥ್ ಭಂಡಾರಿ ಅವರ ನೇತೃತ್ವದಲ್ಲಿ, ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿ ಮತ್ತು ಪ್ರಧಾನ ಅರ್ಚಕ ವಿದ್ವಾನ್ ಅರವಿಂದ ಬನ್ನಿಂತಾಯ ಅವರ ಪೌರೋಹಿತ್ಯದಲ್ಲಿ ಈ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 10ರಿಂದ ಗಣಹೋಮ, ಪೂರ್ವಾಹ್ನ 11ರಿಂದ ಕಲಶಾಭಿಷೇಕ, ಪೂರ್ವಾಹ್ನ 11.30ರಿಂದ ನಾಗ ತಂಬಿಲ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಅಪರಾಹ್ನ 3ರಿಂದ ಭಜನ ಕಾರ್ಯಕ್ರಮ ನಡೆಯಿತು. ಸಂಜೆ 4ರಿಂದ ಶ್ರೀ
ಸತ್ಯನಾರಾಯಣ ಮಹಾಪೂಜೆ, ಸಂಜೆ 5.30ರಿಂದ ವಾದ್ಯಗೋಷ್ಠಿ, ಸಂಜೆ 6.30ರಿಂದ ಶ್ರೀ ಮಹಾವಿಷ್ಣು ದೇವರಿಗೆ ಸುವರ್ಣ ಪುಷ್ಪಹಾರ ಸಮರ್ಪಣೆ, ವಿಶೇಷ ರಂಗಪೂಜೆ, ಪ್ರಸಾದ ವಿತರಣೆ, ಕೊನೆಯಲ್ಲಿ ಅನ್ನಸಂತರ್ಪಣೆ ನಡೆಯಿತು.
ಇದನ್ನೂ ಓದಿ:ನಲಸೋಪರ ಶ್ರೀ ಅಯ್ಯಪ ಭಕ್ತ ವೃಂದ : ವಾರ್ಷಿಕ ಮಹಾಪೂಜೆ, ಅರಸಿನ ಕುಂಕುಮ
ಕೊರೊನಾ ಲಾಕ್‌ಡೌನ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಭಕ್ತಾದಿಗಳು, ಸಮಾಜ ಬಾಂಧವರು ಮಾಸ್ಕ್ ಧರಿಸಿ, ಸಾಮಾಜಿಕ
ಅಂತರವನ್ನು ಕಾಯ್ದುಕೊಂಡು ದೇವತಾ ಕಾರ್ಯದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭ ಕಿರು ಸಭಾಗೃಹವನ್ನು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ಉದ್ಘಾಟಿಸಿದರು. ಸಂಘದ
ಪದಾಧಿಕಾರಿಗಳು, ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ, ವಿವಿಧ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಅವರು ಜ್ಞಾನ ಮಂದಿರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶಿವರಾಮ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ ಬೊಳ್ನಾಡುಗುತ್ತು, ಜಗನ್ನಾಥ ರೈ, ಬಾಲಕೃಷ್ಣ ಹೆಗ್ಡೆ ಬೆಳ್ಳಂಪಳ್ಳಿ ಅವರನ್ನು ಗೌರವಿಸಿದರು.
ಶ್ರೀ ವಿಷ್ಣುಮೂರ್ತಿ ದೇವರಿಗೆ ಸುವರ್ಣ ಪುಷ್ಪಹಾರ ನೀಡಿದ ಸಂದರ್ಭದಲ್ಲಿ ಬಂಟರ ಭವನದ ಪ್ರಬಂಧಕ ಸುಕುಮಾರ್ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ಮಹಾಪ್ರಬಂಧಕ ಪ್ರವೀಣ್ ಶೆಟ್ಟಿ, ಸಿಬಂದಿಗಳಾದ ಸರಿತಾ ಎಸ್. ಶೆಟ್ಟಿ, ಸುಮಾ ಎನ್. ಶೆಟ್ಟಿ ಅವರನ್ನು ಜ್ಞಾನಮಂದಿರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ್ ಭಂಡಾರಿ ಅವರು ದೇವರ ಪ್ರಸಾದವನ್ನಿತ್ತು ಅಭಿನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಾಸನದ ಮಗುವನ್ನು 5 ಲಕ್ಷ ರೂ. ಗೆ ಕಾರ್ಕಳದಲ್ಲಿ ಮಾರಾಟ: ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ
ಇಬ್ಬರು ಒಪ್ಪಿದ್ದಾರೆ, ಅದು ಅತ್ಯಾಚಾರವಾಗಲ್ಲ: ಜಾರಕಿಹೊಳಿ ಬೆಂಬಲಕ್ಕೆ ರೇಣುಕಾಚಾರ್ಯ
ಟೆಸ್ಲಾ ಕಂಪೆನಿಗೆ ಪ್ರೋತ್ಸಾಹ ಧನ ನೀಡಲು ಭಾರತ ಸಿದ್ಧ : ಗಡ್ಕರಿ
ತಮಿಳುನಾಡು: ನೀತಿ ಸಂಹಿತೆ ಉಲ್ಲಂಘನೆ, ರಾಹುಲ್ ವಿರುದ್ಧ ಬಿಜೆಪಿ ಕಿಡಿ
ಬಾಂಡ್ v/s ಈಕ್ವಿಟಿ: ಮುಂಬಯಿ ಷೇರುಮಾರುಕಟ್ಟೆ ಸೆನ್ಸೆಕ್ಸ್ ಸೂಚ್ಯಂಕ 440 ಅಂಕ ಕುಸಿತ