ಹಾವೇರಿ: ಕೈಕೊಟ್ಟ ಹತ್ತಿ ಬೆಳೆ, ವಿಷ ಸೇವಿಸಿ ರೈತ ಆತ್ಮಹತ್ಯೆ

Team Udayavani, Sep 9, 2019, 4:01 PM IST

ಹಾವೇರಿ: ಸಾಲ ಬಾಧೆಗೆ ಬೇಸತ್ತು ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಣಿಬೆನ್ನೂರು ತಾಲೂಕಿನ ಚೌಡಯ್ಯದಾನಪುರದಲ್ಲಿ ನಡೆದಿದೆ.

ಹನುಮಂತಪ್ಪ ನೀಲಪ್ಪ ಬನ್ನಿಮಟ್ಟಿ(61) ಮೃತ ರೈತ. ತಾಲೂಕಿನ ಹೊನ್ನತ್ತಿ ಕೆವಿಜಿ ಬ್ಯಾಂಕ್‍ನಲ್ಲಿ ಇಪ್ಪತ್ತು ಸಾವಿರ ರೂ. ಹಾಗೂ ಬೇರೆ ಕಡೆಗಳಿಂದ ಸುಮಾರು 4 ಲಕ್ಷಕ್ಕಿಂತಲೂ ಅಧಿಕ ಸಾಲ ಮಾಡಿದ್ದ ಎನ್ನಲಾಗಿದೆ . ಹತ್ತಿ ಬೆಳೆ ಸರಿಯಾಗಿ ಆಗದ ಪರಿಣಾಮ ಹನುಮಂತಪ್ಪ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ರಾಣಿಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ