ಮಿಣಿಮಿಣಿ ಪೌಡರ್‌ ಹೇಳಿಕೆಗೆ ಎಚ್‌ಡಿಕೆ ಸ್ಪಷ್ಟನೆ

Team Udayavani, Jan 28, 2020, 3:06 AM IST

ಚನ್ನಪಟ್ಟಣ: “ಮಿಣಿಮಿಣಿ ಪೌಡರ್‌’ ಹೇಳಿಕೆ ವಿಚಾರದಲ್ಲಿ ನನ್ನ ವಿರುದ್ಧ ಬಿಜೆಪಿಯವರು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಅದು ಬಿಜೆಪಿಯವರ ಸಂಸ್ಕೃತಿ. ಅವರವರ ವಿಕೃತ ಮನೋಭಾವ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿ, ಮಂಗಳೂರು ಬಾಂಬ್‌ ನ್ಪೋಟ ಪ್ರಕರಣ ಕುರಿತು ಪತ್ರಿಕೆಯಲ್ಲಿ ವರದಿಯಾಗಿದ್ದರ ಬಗ್ಗೆ ನಾನು ಮಿಣಿ ಮಿಣಿ ಪೌಡರ್‌ ಹೇಳಿಕೆ ನೀಡಿದ್ದೇನೆ. ಆ ವರದಿಯಲ್ಲಿ ಪಟಾಕಿಯಲ್ಲಿ ಬಳಸುವ ಮಿಣಿ ಮಿಣಿ ಪುಡಿ ಪೌಡರ್‌ ಎಂದು ಇತ್ತು.

ಆ ವರದಿ ಆಧರಿಸಿ ನಾನು ಹೇಳಿಕೆ ನೀಡಿದ್ದೇನೆ. ಅದಕ್ಕೆ ದೊಡ್ಡಮಟ್ಟದಲ್ಲಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ಕೊಡಲಾಗಿದೆ. ನಾನು ನನ್ನ ಜೀವನದಲ್ಲಿ ಯಾವುದೇ ರೀತಿಯ ತಪ್ಪು ಮಾಡದವನು. ತಪ್ಪು ಮಾಡಿದ್ರೆ ಮುಕ್ತವಾಗಿ ಹೇಳುವೆ.

ಅದರಲ್ಲಿ ನನಗೆ ಯಾವುದೇ ಅಂಜಿಕೆ ಇಲ್ಲ. ಇದನ್ನು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡಿರುವುದು ಬಿಜೆಪಿಯ ಅಭಿಮಾನಿಗಳೇ. ಬಾಂಬ್‌ ಪೌಡರ್‌ ಬಗ್ಗೆ ಕೆಲವು ಹಿರಿಯ ಅಧಿಕಾರಿಗಳೇ ಹೇಳಿಕೆ ನೀಡಿದ್ದಾರೆ. ಇದು ನಾನು ಕಥೆ ಕಟ್ಟಿದ್ದಲ್ಲ. ಈ ಬಗ್ಗೆ ವಿಧಾನಸಭೆಯಲ್ಲೂ ಚರ್ಚೆ ಮಾಡ್ತೇನೆ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ