
Hebri: ನೇಣು ಬಿಗಿದು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
Team Udayavani, Nov 21, 2023, 12:00 AM IST

ಹೆಬ್ರಿ: ಹೆಬ್ರಿ ನಿವಾಸಿ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ನಿರ್ಮಾಣ ಹಂತದಲ್ಲಿರುವ ಅವರ ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ. 20ರಂದು ನಡೆದಿದೆ.
ಪೂಜಿತಾ (17 ) ಮೃತಪಟ್ಟವಳು. ಆಕೆ ಸರಿಯಾಗಿ ಕಾಲೇಜಿಗೆ ಹೋಗುತ್ತಿರಲಿಲ್ಲ. ಯಾವುದೋ ವಿಚಾರದಲ್ಲಿ ಮನನೊಂದು ಯಾರಲ್ಲಿಯೂ ಹೇಳಿಕೊಳ್ಳಲಾಗದೇ ವಿಪರೀತ ಯೋಚನೆ ಮಾಡಿ ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜುಗುಪ್ಸೆಗೊಂಡು ಮೃತಪಟ್ಟಿರುವುದಾಗಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
